VIDEO: ರಣವೀರ್​ ನಗ್ನಾವತಾರಕ್ಕೆ ಉರ್ಫಿ ಫಿದಾ- ಎರಡನೇ ಪತ್ನಿ ನಾನಾಗಲು ರೆಡಿ ಎಂದ ನಟಿ ಹೇಳಿದ್ದೇನು ಕೇಳಿ...

urfi
Published on

ಮುಂಬೈ: ಜಿದ್ದಿಗೆ ಬಿದ್ದವರಂತೆ ದಿನದಿಂದ ದಿನಕ್ಕೆ ಕಡಿಮೆ ಬಟ್ಟೆ ತೊಟ್ಟು ಪೋಸ್​ ಕೊಡುತ್ತಾ ಅದನ್ನು ಶೇರ್​ ಮಾಡಿಕೊಳ್ಳುತ್ತಿರುವ ನಟಿ ಉರ್ಫಿ ಜಾವೇದ್​ಗೆ ನಟ ರಣವೀರ್​ ಸಿಂಗ್​ ಹೊಸ ಅವತಾರ ನೋಡಿ ಫುಲ್​ ಖುಷ್​ ಆಗಿದೆ.

ಮ್ಯಾಗಜಿನ್‌ ಒಂದರ ಮುಖಪುಟಕ್ಕಾಗಿ ಸಂಪೂರ್ಣ ನಗ್ನವಾಗಿ ಕ್ಯಾಮೆರಾ ಕಣ್ಣಿಗೆ ರಣ್‌ವೀರ್ ಪೋಸ್ ನೀಡಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್​ ಆಗಿದ್ದು ಥಹರೇವಾರಿ ಕಮೆಂಟ್​ಗಳು ಬರುತ್ತಿವೆ. ಪುರುಷರಂತೂ ಈ ಪೋಸ್​ಗೆ ಕಿಡಿ ಕಿಡಿಯಾಗಿದ್ದು, ಪುರುಷರ ಮರ್ಯಾದೆ ತೆಗೆದಿರುವುದಾಗಿ ಹೇಳುತ್ತಿದ್ದಾರೆ.

ಆದರೆ ದೀಪಿಕಾ ಪಡುಕೋಣೆ ಪತಿ ರಣವೀರ್​ ಸಿಂಗ್​ನ ಈ ಅವತಾರ ನೋಡಿ ಉರ್ಫಿ ಜಾವೇದ್​ ಬಹಳ ಖುಷಿಯಾಗಿದ್ದಾರಂತೆ. ಇದನ್ನು ಅವರು ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾರೆ.

ಎಂದಿನಂತೆ ಕಡಿಮೆ ಬಟ್ಟೆ ಅದರಲ್ಲಿಯೂ ವಿಚಿತ್ರ ವೇಷ ತೊಟ್ಟು ಮಾಧ್ಯಮಗಳ ಎದುರು ಪೋಸ್​ ಕೊಟ್ಟಿರುವ ಉರ್ಫಿ, ನನಗೆ ನಾಲ್ವರು ಸಹೋದರಿಯರು ಇದ್ದಾರೆ. ಎಲ್ಲರೂ ಹಾಟ್​ ಇದ್ದಾರೆ. ಎಲ್ಲರನ್ನೂ ಇನ್​ಸ್ಟಾಗ್ರಾಂನಲ್ಲಿ ಫಾಲೋ ಮಾಡಿ ಎಂದು ಅಭಿಮಾನಿಗಳಿಗೆ ಹೇಳಿದ್ದಾರೆ. ಕೊನೆಗೆ ನಟ ರಣವೀರ್​ ಸಿಂಗ್​ ಹೊಸ ಅವತಾರದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ರಣವೀರ್​ ಸಿಂಗ್​ರನ್ನು ತುಂಬಾ ಪ್ರೀತಿಸುತ್ತೇನೆ. ಒಂದು ವೇಳೆ ಅವರಿಗೆ ಏನಾದರೂ ಎರಡನೆಯವಳು ಬೇಕು ಎನ್ನಿಸಿದರೆ ನಾನು ಇದ್ದೇನೆ. ನಾನು ಅವರಿಗಾಗಿ ರೆಡಿ ಇದ್ದೇನೆ ಎಂದಿದ್ದಾರೆ. ದೀಪಿಕಾ ಬಿಟ್ಟು ರಣವೀರ್​ಗೆ ಬೇರೆ ಯಾರೂ ಬೇಡ ಎನ್ನುವುದು ಗೊತ್ತಿದೆ. ಆದರೂ ಒಮ್ಮೆ ಏನಾದರೂ ಅವರಿಗೆ ಅನ್ನಿಸಿದರೆ ನಾನು ಎರಡನೆಯವಳಾಗಲು ಸಿದ್ಧ ಎಂದಿದ್ದಾರೆ ಉರ್ಫಿ.

ಅವರು ಹೇಳಿರುವ ಮಾತು ಕೇಳಲು ಈ ಲಿಂಕ್​ ಕ್ಲಿಕ್​ ಮಾಡಿ: 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net