ದಿಲ್‌ ಸೇ, ಲಗಾನ್‌ನಂಥ ಸೂಪರ್‌ಹಿಟ್‌ ಚಿತ್ರದಲ್ಲಿ ನಟಿಸಿದ ಹಿರಿಯ ನಟ ಅನುಪಮ್‌ ಶ್ಯಾಮ್‌ ಇನ್ನಿಲ್ಲ

anupam
Published on

ಮುಂಬೈ: ಬಾಲಿವುಡ್‌ನ ಹಿರಿಯ ನಟ ಅನುಪಮ್ ಶ್ಯಾಮ್ ನಿನ್ನೆ ರಾತ್ರಿ ನಿಧನರಾಗಿದ್ದಾರೆ. ಅವರಿಗೆ 63 ವರ್ಷ ವಯಸ್ಸಾಗಿತ್ತು.

ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಇವರನ್ನು ಕೆಲ ದಿನಗಳ ಹಿಂದೆ ಗೋರೆಗಾಂವ್ ಲೈಫ್ ಲೈನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಿಡ್ನಿ ವೈಫಲ್ಯದ ಕಾರಣ ಡಯಾಲಿಸಿಸ್ ಒಳಗಾಗಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ವೆಚ್ಚ ಭರಿಸುವಂತೆ ಅವರ ಸಹೋದರ ಅನುರಾಗ್ ನೆರವು ಯಾಚಿಸಿದ್ದರು.

'ಸತ್ಯ', 'ದಿಲ್ ಸೇ', 'ಲಗಾನ್' ಮೊದಲಾದ ಚಿತ್ರಗಳಲ್ಲಿ ಮನೋಜ್ಞ ಅಭಿನಯ ನೀಡಿದ್ದರು ಅನುಪಮ್‌. ’ಕಳೆದ ವರ್ಷ ಮನ್‌ ಕೀ ಅವಾಜ್‌ ಪ್ರತಿಜ್ಞಾ’ ಷೋನಲ್ಲಿ ಸಜ್ಜನ್‌ ಸಿಂಗ್‌ ಆಗಿ ಅಭಿನಯಿಸಿದ್ದರು. ಇದೀಗ ಸೀಜನ್‌-2 ಶುರುವಾಗಿತ್ತು. ಅವರ ಅಭಿನಯದಿಂದ ಅದೆಷ್ಟು ಮಂದಿ ಅಭಿಮಾನಿಗಳು ಹುಟ್ಟಿಕೊಂಡಿದ್ದರು ಎಂದರೆ ಸೀಜನ್‌-2 ನಲ್ಲಿ ಕೂಡ ಈ ಪಾತ್ರಕ್ಕೆ ಇವರೇ ಅಭಿನಯ ಮಾಡಬೇಕು ಎಂದಿದ್ದರು. ಆದ್ದರಿಂದ ಅನಾರೋಗ್ಯವಿದ್ದರೂ ಅನುಪಮ್‌ ಅವರು ಇದರಲ್ಲಿ ಅಭಿನಯಿಸುತ್ತಿದ್ದರು. ಜೀವನದಲ್ಲಿ ಸಂಘರ್ಷ ಎದುರಿಸುತ್ತಿದ್ದೆ. ಈಗ ಅಭಿಮಾನಿಗಳ ಅಭಿಮಾನದಿಂದ ಚೇತರಿಸಿಕೊಳ್ಳುತ್ತಿದ್ದೇನೆ, ಪುನಃ ವಾಪಸಾಗಿದ್ದು, ಈ ಸೀಜನ್‌-2 ನಲ್ಲಿ ಅಭಿನಯಿಸುತ್ತಿದ್ದೇನೆ ಎಂದು ಸಂದರ್ಶನವೊಂದರಲ್ಲಿ ಈಚೆಗಷ್ಟೇ ಹೇಳಿದ್ದರು ಈ ನಟ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net