ಮದುವೆಗೆ ಹೋದವರು ಮಸಣ ಸೇರಿದರು! ಭೀಕರ ಅಪಘಾತದಲ್ಲಿ ದಂಪತಿ ಸೇರಿ ಆರು ಮಂದಿ ದಾರುಣ ಸಾವು

accident
Published on

ಚಂಡೀಗಢ: ಮದುವೆಗೆ ಹೋದ ಆರು ಮಂದಿ ಭೀಕರ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ಹರಿಯಾಣದ ಕೈತಾಲ್‍ನಲ್ಲಿ ನಡೆದಿದೆ.

ಮದುವೆ ಮುಗಿಸಿ ಕಾರಿನಲ್ಲಿ ವಾಪಸ್‌ ಬರುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಎರಡು ಕಾರುಗಳ ನಡುವೆ ಡಿಕ್ಕಿಯಾಗಿ ದುರಂತ ಸಂಭವಿಸಿದ್ದು, ನಾಲ್ವರು ಗಂಭಿರವಾಗಿ ಗಾಯಗೊಂಡಿದ್ದಾರೆ.

ಡಿಕ್ಕಿಯಾಗಿರುವ ಎರಡೂ ವಾಹನಗಳಲ್ಲಿ ಜನರು ಮದುವೆ ಸಮಾರಂಭಕ್ಕೇ ಹೋಗಿದ್ದರು ಎನ್ನಲಾಗಿದೆ. ಎರಡೂ ಕಾರು ಸೇರಿ ಒಟ್ಟು 10 ಮಂದಿ ಇದ್ದರು. ಅವರ ಪೈಕಿ ಆರು ಮಂದಿ ಸ್ಥಳೀಯದಲ್ಲಿಯೇ ಮೃತಪಟ್ಟಿದ್ದಾರೆ.

ಮೃತಪಟ್ಟವರನ್ನು ಸತ್ಯಮ್‌ (26), ರಮೇಶ್‌ (55), ಅನಿಲ್‌ (55) ಶಿವಮ್‌ (20), ವಿನೋದ್‌ (34) ಅವರ ಅವರ ಪತ್ನಿ ರಾಜ್‌ಬಲಾ (27) ಎಂದು ಗುರುತಿಸಲಾಗಿದೆ. ವಿನೋದ್‌, ರಾಜ್‌ಬಲಾ ಪುತ್ರ ವಿರಾಜ್‌ (7) ವಿಪರೀತ ಗಾಯಗೊಂಡಿದ್ದಾನೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net