More

    ಇನ್ಮುಂದೆ ಆಟೋ ಹತ್ತೋದಿದ್ರೆ ಎಕ್ಸ್‌ಟ್ರಾ ದುಡ್ಡು ತಗೊಂಡು ಹೋಗಿ: ದರದಲ್ಲಿ ಹೆಚ್ಚಳ- ಇಲ್ಲಿದೆ ವಿವರ…

    ಬೆಂಗಳೂರು: ಪೆಟ್ರೋಲ್‌, ಡೀಸೆಲ್‌, ಗ್ಯಾಸ್‌ ಸಿಲಿಂಡರ್‌ ಸೇರಿದಂತೆ ದಿನನಿತ್ಯದ ವಸ್ತುಗಳ ಬೆಲೆ ದಿನೇದಿನೇ ಗಗನಮುಖಿಯಾಗುತ್ತಿರುವ ಈ ಹೊತ್ತಿನಲ್ಲಿ, ಆಟೋ ಪ್ರಯಾಣ ದರವನ್ನೂ ಹೆಚ್ಚಳ ಮಾಡಲಾಗಿದೆ.

    ಗ್ಯಾಸ್ ದರ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಆಟೋ ಪ್ರಯಾಣ ದರವನ್ನು ಹೆಚ್ಚಳ ಮಾಡುವಂತೆ ಆಟೋ ಚಾಲಕರು ಮಾಡಿಕೊಂಡಿರುವ ಮನವಿಯನ್ನು ನಗರ ಜಿಲ್ಲಾಧಿಕಾರಿ ಮತ್ತು ರಾಜ್ಯ ಸಾರಿಗೆ ಇಲಾಖೆ ಪುರಸ್ಕರಿಸಿದೆ. ಇನ್ನುಮುಂದೆ ಅಂದರೆ ಡಿಸೆಂಬರ್‌ 1ರಿಂದ (ಬುಧವಾರ) ಆಟೋ ಪ್ರಯಾಣ ದರ ಹೆಚ್ಚಳವಾಗಲಿದೆ.

    ಈಗ ಇರುವ ಕನಿಷ್ಠ ದರವನ್ನು 25 ರೂಪಾಯಿಯಿಂದ 30 ರೂಪಾಯಿಗೆ ಏರಿಸಲಾಗಿದೆ. ಅರ್ಥಾತ್‌ ಮೊದಲ ಎರಡು ಕಿಲೋಮೀಟರ್‌ ವರೆಗೆ ಕನಿಷ್ಠ 30 ರೂಪಾಯಿ ಪಾವತಿ ಮಾಡಬೇಕಿದೆ. ನಂತರದ ಪ್ರತಿ ಒಂದು ಕಿಲೋ ಮೀಟರ್​ಗೆ 15 ರೂ. ದರವನ್ನು ನಿಗದಿ ಮಾಡಲಾಗಿದೆ. ಸದ್ಯ ಈ ದರವು ಪ್ರತಿ ಕಿಲೋಮೀಟರ್‌ಗೆ 13 ರೂಪಾಯಿ ಇದೆ.

    ಸದ್ಯ ಈ ಹೊಸ ದರವು ‌ಬೆಂಗಳೂರಿನಲ್ಲಿ ಚಾಲ್ತಿಗೆ ಬರಲಿದೆ. ಎಂಟು ವರ್ಷಗಳ ನಂತರ ಇಂಥದ್ದೊಂದು ಪರಿಷ್ಕರಣೆ ಆಗಿರುವುದಾಗಿ ಸಾರಿಗೆ ಇಲಾಖೆ ಹೇಳಿದೆ. 2013ರಲ್ಲಿ ಕೊನೆಯದಾಗಿ ಆಟೋ ಮೀಟರ್ ದರ ಹೆಚ್ಚಳವಾಗಿತ್ತು. ಬೆಂಗಳೂರು ನಗರ ಜಿಲ್ಲಾಧಿಕಾರಿ, ಆಟೋ ಚಾಲಕರ ಒಕ್ಕೂಟದ ಜತೆ ಸಭೆ ನಡೆಸಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ.

    ದೇವೇಗೌಡರ ಕೈಹಿಡಿದು ಸ್ವಾಗತಿಸಿ ಕುಳ್ಳರಿಸಿದ ಪ್ರಧಾನಿ ಮೋದಿ: ಶುರುವಾಯ್ತು ಬಿಸಿಬಿಸಿ ಚರ್ಚೆ

    ನಾನು ಅಜ್ಮಲ್… ನನ್ನ ಡಿಟೇಲ್ಸ್‌ ಇಲ್ಲಿದೆ… ಏನೂ ಮಾಡಲಾರಿರಿ… ಕೌಂಟ್‌ಡೌನ್‌ ಶುರುವಾಗಿದೆ… ಸಿಎಂ ಯೋಗಿಗೆ ಬೆದರಿಕೆ ಪತ್ರ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts