ಚಿಕ್ಕಮ್ಮನನ್ನು ಕೊಲ್ಲಲು 9 ವರ್ಷದ ಮಗನಿಗೆ ಟ್ರೇನಿಂಗ್​ ಕೊಟ್ಟ ಅಪ್ಪ- ಮುಂದೆ ಆದದ್ದೆಲ್ಲವೂ ಅನಾಹುತವೇ!

shootout
Published on

ಲಾಹೋರ್ (ಪಾಕಿಸ್ತಾನ): ಪ್ರೇಮ ವಿವಾಹವಾದ ಕಾರಣ, ಚಿಕ್ಕಮ್ಮನನ್ನು ಕೊಲೆ ಮಾಡುವಂತೆ ಅಪ್ಪನೇ 9 ವರ್ಷದ ಬಾಲಕನಿಗೆ ತರಬೇತಿ ನೀಡಿದ್ದ ಭಯಾನಕ ಘಟನೆ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ನಡೆದಿದೆ.

ಲಾಹೋರ್‌ನಿಂದ 200 ಕಿ.ಮೀ ದೂರದಲ್ಲಿರುವ ಸರ್ಗೋಧದ ಚಕ್ 104-ಎಸ್‌ಬಿ ಗ್ರಾಮದ ನಿವಾಸಿಯಾಗಿರುವ ಮಹಿಳೆಯನ್ನು ಕೊಲ್ಲಲು  ತನ್ನ ಮಗನಿಗೆ ಟ್ರೇನಿಂಗ್​ ನೀಡಿದ್ದೂ ಅಲ್ಲದೇ, ಕೊಲೆ ಮಾಡುವ ಸಂಬಂಧ ಬಂದೂಕನ್ನೂ ಕೊಡಿಸಿದ್ದಾನೆ.

ಅಪ್ಪ ಹೇಳಿದಂತೆ ಬಾಲಕ ತನ್ನ ಚಿಕ್ಕಮ್ಮನನ್ನು ಗುಂಡಿಕ್ಕಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

30 ವರ್ಷದ ಮಹಿಳೆ, 10 ವರ್ಷಗಳ ಹಿಂದೆ ಪ್ರೇಮ ವಿವಾಹ ಆಗಿದ್ದಳು. ಈ ಮದುವೆಗೆ ಆರಂಭದಲ್ಲಿ ಕುಟುಂಬಸ್ಥರ ಭಾರಿ ವಿರೋಧವಿತ್ತು. ಆದರೆ ಇಬ್ಬರೂ ಕುಟುಂಬದವ ಮನವೊಲಿಸಲು ಯಶಸ್ವಿಯಾಗಿದ್ದರು. ನಂತರ ಮದುವೆಗೆ ಅನುಮತಿ ಸಿಕ್ಕ ಮೇಲೆ ಮದುವೆಯಾಗಿದ್ದರು.

ಆದರೆ ಈ ವ್ಯಕ್ತಿ ಮಾತ್ರ ಆಕೆಯನ್ನು ಸಾಯಿಸಲು ಹೊಂಚು ಹಾಕುತ್ತಿದ್ದ. ಆದರೆ ತಾವು ಕೃತ್ಯ ಎಸಗಿದರೆ ಭಾರಿ ಶಿಕ್ಷೆ ಆಗುತ್ತದೆ ಎಂಬ ಕಾರಣಕ್ಕೆ ತನ್ನ ಅಪ್ರಾಪ್ತ ಬಾಲಕನಿಂದ ಈ ದುಷ್ಕೃತ್ಯ ಮಾಡಿಸಿದ್ದಾನೆ.

ಮಹಿಳೆಯು ತನ್ನ ತಾಯಿ ಮತ್ತು ಕುಟುಂಬದವರ ಜತೆ ಸಮಾರಂಭದಲ್ಲಿ ಪಾಲ್ಗೊಳ್ಳಲು ತನ್ನ ಚಿಕ್ಕಪ್ಪನ ಮನೆಗೆ ಹೋಗಿದ್ದಳು. ಈ ಸಮಯದಲ್ಲಿ ಬಾಲಕ ಅಲ್ಲಿಗೆ ಹೋಗಿ ಅಪ್ಪ ಹೇಳಿದಮತೆ ಗುಂಡು ಹಾರಿಸಿದ್ದಾನೆ. ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯ ನಂತರ, ಹುಡುಗ ಮತ್ತು ಅವನ ಕುಟುಂಬ ಸ್ಥಳದಿಂದ ಪರಾರಿಯಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈಗ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.

ಇದೊಂದು ಮರ್ಯಾದಾ ಹತ್ಯೆಯಾಗಿರುವ ಸಾಧ್ಯತೆ ಇದೆ. ಇಂಥ ಘಟನೆಗಳು ಪಾಕಿಸ್ತಾನದಲ್ಲಿ ಹೆಚ್ಚುತ್ತಿರುವ ಬಗ್ಗೆ ಮಾನವ ಹಕ್ಕುಗಳ ಆಯೋಗ ಭಾರಿ ಕಳವಳ ವ್ಯಕ್ತಪಡಿಸಿದೆ. ಅನೈತಿಕ ಸಂಬಂಧ, ಲಿಂಗ ತಾರತಮ್ಯ ಇತ್ಯಾದಿಗಳಿಗೆ ಸಂಬಂಧಿಸಿದಂತೆ ಕೊಲೆ ಪ್ರಕರಣಗಳು ಹೆಚ್ಚುತ್ತಿವೆ ಎಂದಿದೆ ಆಯೋಗ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net