

ಸಿಚುವಾನ್ (ಚೀನಾ): ಇಡೀ ವಿಶ್ವಕ್ಕೆ ಕರೊನಾ ಕೊಟ್ಟು, ಭಾರತ ಸೇರಿದಂತೆ ಅನೇಕ ದೇಶಗಳ ಜತೆ ಗಡಿ ಕ್ಯಾತೆ ತೆಗೆದು ಕುಖ್ಯಾತಿ ಗಳಿಸಿರೋ ಚೀನಾ ಒಂದೆಡೆಯಾದರೆ, ತಂತ್ರಜ್ಞಾನ ಹಾಗೂ ನಕಲಿ ವಸ್ತು ತಯಾರಿಕೆ ವಿಷಯಕ್ಕೆ ಬಂದರೆ ಚೀನಾಕ್ಕೆ ಸರಿಯಾಟಿಯಾದುದು ಯಾವುದು ಇದೆ ಹೇಳಿ?
ಒಂದು ದೇಶ ಏನಾದರೂ ಹೊಸತು ತಂತ್ರಜ್ಞಾನ ರೂಪಿಸಿತು ಎಂದರೆ ಸಾಕು, ಅದರ ನಕಲಿಯನ್ನು ಯಥಾವತ್ತು ಮಾಡಿ ಅದಕ್ಕಿಂತ ಕಡಿಮೆ ದರದಲ್ಲಿ ಮಾರಾಟ ಮಾಡುವಲ್ಲಿ ಚೀನಾದ್ದು ಎತ್ತಿದ ಕೈ ಎನ್ನುವುದು ಹೊಸದಾಗಿ ಹೇಳಬೇಕಿಲ್ಲ.
ಆದರೂ ಏನೇ ಹೇಳಿ ತಂತ್ರಜ್ಞಾನದ ವಿಷಯದಲ್ಲಿ ಚೀನಾಕ್ಕೆ ಚೀನಾನೇ ಸಾಟಿಯೇನೋ ಅನ್ನಬೇಕು. ಅಂಥದ್ದೇ ಒಂದು ಮೋಡಿಗೊಳಿಸುವ ತಂತ್ರಜ್ಞಾನ ಇಲ್ಲಿದೆ ನೋಡಿ.
ಈ ಚಿತ್ರದಲ್ಲಿ ಇರುವುದು ಅಸಲಿಯಲ್ಲ, ಬದಲಿಗೆ ನಕಲಿ ಸಿಂಹ ಎಂದು ಎಲ್ಲರಿಗೂ ಗೊತ್ತಾಗುತ್ತದೆ. ಆದರೆ ನಂಬುವುದಾದರೂ ಹೇಗೆ? ಗ್ಲಾಸ್ ಒಳಗೆ ಇರುವ ಸಿಂಹ ಅದನ್ನು ಸೀಳಿ ಅತ್ತ ಇತ್ತ ನೋಡುವವರೆಗೆ ಒಹೊ ಪರವಾಗಿಲ್ಲ ಎಂಥ ಸೂಪರ್ ತಂತ್ರಜ್ಞಾನ ಎಂದು ಅಂದುಕೊಳ್ಳುತ್ತೀರಿ. ಆದರೆ ಅದು ಗ್ಲಾಸ್ ಒಡೆದು ಮೇಲಿನಿಂದ ಕೆಳಕ್ಕೆ ಹಾರಿದರೆ ಮುಗೀತು ನಿಮ್ಮ ಕಥೆ ಅಷ್ಟೇ!
5ಜಿ ತಂತ್ರಜ್ಞಾನದಿಂದ ರೂಪಿಸಲಾದ 3ಡಿ ಜಾಹೀರಾತೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ. ಸಿಚುವಾನ್ನಲ್ಲಿ ಚೆಂಗ್ಡೂ ಮಾಲ್ನಲ್ಲಿ ಶುರು ಮಾಡಿರುವ ಈ 5ಜಿ ತಂತ್ರಜ್ಞಾನ ಇದೀಗ ಸಕತ್ ವೈರಲ್ ಆಗಿದ್ದು, ಚೀನಾವನ್ನು ಭೇಷ್ ಎನ್ನುವಂತಿದೆ.
ನೀವೂ ಒಮ್ಮೆ ನೋಡಿ ಖುಷಿ ಪಡಿ... ಹೆದರಿಕೊಳ್ಳಬೇಡಿ... ಇದು ನಕಲಿ ಸಿಂಹ... ಆದ್ರೂ....