More

    ಮತಾಂತರ ನಿಷೇಧ ಕಾಯ್ದೆಯನ್ನು ರದ್ದು ಮಾಡಿ ಎಂದು ಸುಪ್ರೀಂಗೆ ಮೊರೆ- ಕೋರ್ಟ್​ ಹೇಳಿದ್ದೇನು?

    ನವದೆಹಲಿ: ಮತಾಂತರ ನಿಷೇಧ ಕಾಯ್ದೆಯನ್ನು ರದ್ದು ಮಾಡುವಂತೆ ಕೋರಿ ಸುಪ್ರೀಂಕೋರ್ಟ್​ಗೆ ಹಲವಾರು ಮಂದಿ ಅರ್ಜಿ ಸಲ್ಲಿಸಿದ್ದಾರೆ. ಈ ಕಾಯ್ದೆ ದುರ್ಬಳಕೆ ಆಗುತ್ತಿದ್ದು, ಅದನ್ನು ರದ್ದು ಮಾಡುವಂತೆ ಅರ್ಜಿಯಲ್ಲಿ ಕೋರಲಾಗಿದೆ.

    ಆದರೆ ಈ ಕಾಯ್ದೆಯನ್ನು ರದ್ದು ಮಾಡಲು ಅಥವಾ ಅದಕ್ಕೆ ತಾತ್ಕಾಲಿಕ ತಡೆ ನೀಡಲು ಸುಪ್ರೀಂಕೋರ್ಟ್​ ನಿರಾಕರಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿವಾದಿಗಳಾಗಿರುವ ಸರ್ಕಾರಕ್ಕೆ ನೋಟಿಸ್​ ಜಾರಿ ಮಾಡಿರುವ ಕೋರ್ಟ್​, ವಿಚಾರಣೆಯನ್ನು ಮುಂದೂಡಿದೆ.

    ಮದುವೆ, ವಂಚನೆ, ದಬ್ಬಾಳಿಕೆ ಅಥವಾ ಪ್ರಲೋಭನೆಯಿಂದ ಧಾರ್ಮಿಕವಾಗಿ ಮತಾಂತರಗೊಳಿಸುವುದು ಕಾನೂನುಬಾಹಿರವಾಗಿದ್ದು ಇದಕ್ಕೆ ಶಿಕ್ಷೆ ಇದೆ ಎಂದು ಉತ್ತರ ಪ್ರದೇಶ, ಮಧ್ಯಪ್ರದೇಶ, ಉತ್ತರಾಖಂಡ ಸೇರಿದಂತೆ ಕೆಲವು ರಾಜ್ಯಗಳು ಹೇಳಿವೆ. ಇನ್ನೂ ಕೆಲ ರಾಜ್ಯಗಳು ಕಾನೂನು ರೂಪಿಸಲು ಚಿಂತನೆ ನಡೆಸಿವೆ. ಇದನ್ನು ರದ್ದು ಮಾಡುವಂತೆ ಇದಾಗಲೇ ಹಲವಾರು ಹೈಕೋರ್ಟ್​ಗಳಲ್ಲಿ ಅರ್ಜಿಯು ಇತ್ಯರ್ಥಕ್ಕೆ ಬಾಕಿ ಇದ್ದು, ಈಗ ಕೆಲವರು ನೇರವಾಗಿ ಸುಪ್ರೀಂಕೋರ್ಟ್​ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.

    ಒಂದು ವಕೀಲರ ಗುಂಪು, ಮತ್ತು ಇನ್ನೊಂದು ಸಾಮಾಜಿಕ ಕಾರ್ಯಕರ್ತೆ ಟೀಸ್ತಾ ಸೆಟಲ್ವಾಡ್ ಅವರ ಎನ್ಜಿಒ ಸಿಟಿಜನ್ಸ್ ಫಾರ್ ಜಸ್ಟೀಸ್ ಅಂಡ್ ಪೀಸ್ ಈ ಅರ್ಜಿ ಸಲ್ಲಿಸಿದೆ. ಸದ್ಯ ಈ ಅರ್ಜಿಯಲ್ಲಿ ಉತ್ತರ ಪ್ರದೇಶ ಹಾಗೂ ಉತ್ತರಾಖಂಡ ಸರ್ಕಾರಗಳನ್ನು ಪ್ರತಿವಾದಿಯಾಗಿಸಲಾಗಿದ್ದು, ಇಲ್ಲಿ ಜಾರಿಗೊಳಿಸಿರುವ ಕಾನೂನಿನ ರದ್ದತಿಗೆ ಕೋರಲಾಗಿದೆ. ಆದರೆ ಇದನ್ನು ಮಾನ್ಯ ಮಾಡಲು ಮುಖ್ಯ ನ್ಯಾಯಮೂರ್ತಿ ಎಸ್‌ಎ ಬೊಬ್ಡೆ ನೇತೃತ್ವದ ಪೀಠ ನಿರಾಕರಿಸಿದೆ.

    ಈ ಅರ್ಜಿಗಳೆಲ್ಲಾ ಹೈಕೋರ್ಟ್​ನಲ್ಲಿ ಇತ್ಯರ್ಥಕ್ಕೆ ಬಾಕಿ ಇರುವಾಗಿ ಸುಪ್ರೀಂಕೋರ್ಟ್​ಗೆ ಬಂದದ್ದು ಸರಿಯಲ್ಲ ಎಂದು ನ್ಯಾಯಮೂರ್ತಿಗಳು ಅಭಿಪ್ರಾಯ ಪಟ್ಟರು. ಅದಕ್ಕೆ ಅರ್ಜಿದಾರರ ಪರ ವಕೀಲರು, ಇದು ಕೇವಲ ಕೆಲವು ರಾಜ್ಯಗಳ ಸಮಸ್ಯೆಯಲ್ಲ, ಬದಲಿಗೆ ಬೇರೆ ರಾಜ್ಯಗಳಲ್ಲಿಯೂ ಈ ಕಾಯ್ದೆ ಜಾರಿ ಮಾಡಲು ತಯಾರಿ ನಡೆಸಿದ್ದು, ಅದಕ್ಕಾಗಿಯೇ ಸುಪ್ರೀಂಕೋರ್ಟ್​ ಮೆಟ್ಟಿಲೇರಿರುವುದಾಗಿ ಹೇಳಿದರು.

    ಉತ್ತರ ಪ್ರದೇಶವು ಅಂಗೀಕರಿಸಿದ ಸುಗ್ರೀವಾಜ್ಞೆ ಮತ್ತು ಉತ್ತರಾಖಂಡ್ ಅಂಗೀಕರಿಸಿದ ಕಾನೂನು ಸಾರ್ವಜನಿಕ ನೀತಿ ಮತ್ತು ಸಮಾಜಕ್ಕೆ ವಿರುದ್ಧವಾಗಿದೆ ಮತ್ತು ಸಂವಿಧಾನದ ಮೂಲ ರಚನೆಯನ್ನು ಉಲ್ಲಂಘಿಸುತ್ತದೆ ಎಂದು ಅರ್ಜಿದಾರರ ಪರ ವಕೀಲರಾದ ವಿಶಾಲ್ ಠಾಕ್ರೆ ಮತ್ತು ಅಭಯ್ ಸಿಂಗ್ ಯಾದವ್ ಮತ್ತು ಪ್ರಯಾಗ್ರಾಜ್ ಮೂಲದ ಕಾನೂನು ಸಂಶೋಧಕ ಪ್ರಣವೇಶ್ ಹೇಳಿದ್ದಾರೆ.

    ಕಾನೂನಿನಡಿಯಲ್ಲಿ ಶಿಕ್ಷೆಗೊಳಗಾದವರಿಗೆ 15 ಸಾವಿರ ರೂ.ವರೆಗೆ ದಂಡ ವಿಧಿಸುವುದರ ಜೊತೆಗೆ, ಗರಿಷ್ಠ ಐದು ವರ್ಷಗಳ ಶಿಕ್ಷೆ ವಿಧಿಸಲಾಗುತ್ತದೆ. ಕೆಲವು ಪ್ರಕರಣಗಳಲ್ಲಿ ಜೈಲು ಶಿಕ್ಷೆ 10 ವರ್ಷಗಳವರೆಗೆ ಇದ್ದು, ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡ ಸಮುದಾಯಗಳಿಗೆ ಸೇರಿದ ಅಥವಾ ಅಪ್ರಾಪ್ತ ವಯಸ್ಕರಾದ ಮಹಿಳೆಯರ ಮತಾಂತರಕ್ಕೆ 25 ಸಾವಿರ ರೂ. ದಂಡ ಕೂಡ ಇದೆ. ಈ ಕಾನೂನು ದುರ್ಬಳಕೆ ಆಗುವ ಸಾಧ್ಯತೆ ಇದ್ದು, ಮುಗ್ಧರಿಗೂ ಶಿಕ್ಷೆಯಾಗುತ್ತದೆ ಎನ್ನುವುದು ಅರ್ಜಿದಾರರ ವಾದ.

    ಬಾಬಾ ರಿಸರ್ಚ್ ಸೆಂಟರ್​ನಲ್ಲಿ 160 ಟ್ರೇನಿಗಳ ನೇಮಕಾತಿ- ಎಸ್​ಎಸ್​ಎಲ್​ಸಿ ಪಾಸಾದವರಿಗೂ ಅವಕಾಶ

    ಮರುಕಳಿಸಿದೆ ನಿರ್ಭಯಾ ಕೇಸ್​: ಕಬ್ಬಿಣದ ರಾಡ್​ ನೂಕಿಸಿ ಅತ್ಯಾಚಾರ ಎಸಗಿ ಕೊಲೆ!

    ಗಂಡ ಸಂಶಯ ಪಿಶಾಚಿ- ಡಿವೋರ್ಸ್​ ಪಡೆದರೆ ನನ್ನ ವಸ್ತುಗಳು ವಾಪಸ್​ ಸಿಗುತ್ತವೆಯೆ?

    ಮೂರು ಮಕ್ಕಳ ತಂದೆಯ ಪ್ರೀತಿಗೆ ಬಿದ್ದು ಮದುವೆಯಾಗಲಾರದೇ ತೊಳಲಾಡುತ್ತಿದ್ದೇನೆ- ಪ್ಲೀಸ್​ ಪರಿಹಾರ ಹೇಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts