More

    ಬಳಸಿದ ಕಾಂಡೋಮ್​ ಒಳಗೆ ವಿಲವಿಲ ಒದ್ದಾಡಿದ ವಿಷಕಾರಕ ಹಾವು! 

    ಮುಂಬೈ: ಬಳಸಿ ಎಸೆದ ಕಾಂಡೋಮ್​ ಒಳಗೆ ಹಾವಿನ ತಲೆಯನ್ನು ತೂರಿಸಿ ಅದನ್ನು ಕಟ್ಟಿಹಾಕಿ ವಿಕೃತಿ ಮೆರೆದ ಘಟನೆ ಮುಂಬೈನ ಕಂಡಿವಲಿಯಲ್ಲಿ (ಪೂರ್ವ) ನಡೆದಿದೆ.

    ಅತ್ಯಂತ ಅಪಾಯಕಾರಿ ಎಂದೆನಿಸಿರುವ ಕೀಲ್​ಬ್ಯಾಕ್​ ಹಾವಿನ ತಲೆಯನ್ನು ಕಾಂಡೋಮ್​ ಒಳಗೆ ತೂರಿಸಲಾಗಿದೆ. ಉಸಿರಾಡಲು ಸಾಧ್ಯವಾಗದೇ ಹಾವು ವಿಲವಿಲ ಒದ್ದಾಡತೊಡಗಿದೆ. ನಂತರ ಇದನ್ನು ನೋಡಿದ ಸ್ಥಳೀಯರು ಹಾವನ್ನು ಮುಟ್ಟಲು ಭಯಪಟ್ಟಿದ್ದಾರೆ.
    ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದೆ. ಹಾವನ್ನು ಹಿಡಿಯುವ ತಜ್ಱರು ಸ್ಥಳಕ್ಕೆ ಧಾವಿಸಿ ಕಾಂಡೋಮ್​ನಿಂದ ಹಾವನ್ನು ಬಿಡಿಸಿದ್ದಾರೆ. ಉಸಿರಾಡಲು ಪರದಾಡುತ್ತಿದ್ದ ಹಾವಿಗೆ ಕೂಡಲೇ ಪಶುವೈದ್ಯರು ಚಿಕಿತ್ಸೆ ನೀಡಿದ್ದಾರೆ.

    ನಿನ್ನೆ ಬೆಳಗ್ಗೆ 8.30ರ ಸುಮಾರಿಗೆ ಗ್ರೀನ್ ಮೆಡೋಸ್ ಹೌಸಿಂಗ್ ಸೊಸೈಟಿ ಬಳಿ ಸ್ಥಳೀಯರು ಈ ಹಾವನ್ನು ನೋಡಿದ್ದಾರೆ. ಒದ್ದಾಡುತ್ತಿದ್ದ ಹಾವನ್ನು ಕಂಡು ಅವರು ಮೊದಲು ಗಾಬರಿಗೊಂಡಿದ್ದಾರೆ. ನಂತರ ಹತ್ತಿರ ನೋಡಿದಾಗ ಅದರ ತಲೆಯನ್ನು ಕಾಂಡೋಮ್​ ಒಳಗೆ ಹಾಕಿ ಸುತ್ತಿರುವುದು ಕಂಡು ಬಂದಿದೆ. ಕೂಡಲೇ ಸ್ಥಳೀಯ ನಿವಾಸಿ ವೈಶಾಲಿ ತನ್ಹಾ ಎನ್ನುವವರು ಅರಣ್ಯ ಇಲಾಖೆಗೆ ಕರೆ ಮಾಡಿ ವಿಷಯ ತಿಳಿಸಿರುವುದಾಗಿ ವರದಿಯಾಗಿದೆ.

    ಹಾವು ರಕ್ಷಕ ಮಿತಾ ಮಾಲ್ವಂಕರ್ ಅವರು ಸ್ಥಳಕ್ಕೆ ಆಗಮಿಸಿದ್ದಾರೆ. ಈ ಕುರಿತು ಮಾಹಿತಿ ನೀಡಿದ ಮಿತಾ ಮಾಲ್ವಂಕರ್​, ಅತ್ಯಂತ ಕೊಳಕಾಗಿದ್ದ ಕಾಂಡೋಮ್​ ಒಳಗೆ ಹಾವಿನ ತಲೆಯನ್ನು ತೂರಿಸಿ ಕಿಡಿಗೇಡಿಗಳು ಕಟ್ಟಿಹಾಕಿದ್ದರು. ಉಸಿರಾಟದ ತೊಂದರೆಯಿಂದ ಅದು ಒದ್ದಾಡುತ್ತಿತ್ತು. ನಂತರ ಅದನ್ನು ರಕ್ಷಣೆ ಮಾಡಲಾಗಿದೆ ಎಂದರು.

    ಈ ಹಾವನ್ನು ಪರೀಕ್ಷಿಸಿದಾಗ ಇದು ಕೀಲ್​ಬ್ಯಾಕ್​ ಹಾವು ಎಂದು ತಿಳಿಯಿತು. ಇದು ಅತ್ಯಂತ ಅಪಾಯಕಾರಿ ಹಾವು. ಇದನ್ನು ನಿಭಾಯಿಸುವುದು ಸುಲಭವಲ್ಲ, ಅದಕ್ಕೆ ಚೂಪಾದ ಸೂಜಿಯಂಥ ಹಲ್ಲುಗಳು ಇರುತ್ತವೆ. ತಮಗೆ ಅಪಾಯ ಆಗಿರುವುದು ಕಂಡುಬಂದರೆ ಹಲ್ಲಿನಿಂದ ಕಚ್ಚಿದರೆ ತೀರಾ ಅಪಾಯ. ಆದ್ದರಿಂದ ಇದನ್ನು ಅತ್ಯಂತ ಉಪಾಯದಿಂದ ಹಿಡಿಯಲಾಯಿತು ಎಂದರು.

    ಈ ಹಾವನ್ನು ನಂತರ ಬೋರಿವಾಲಿಯ ಸಂಜಯ್ ಗಾಂಧಿ ರಾಷ್ಟ್ರೀಯ ಉದ್ಯಾನವನಕ್ಕೆ ಕಳುಹಿಸಿಕೊಡಲಾಯಿತು.

    ಕಾರಿನ ಮೇಲೆ ನಾಲ್ಕು ಬೆರಳಿನ ವಿಚಿತ್ರ ಹೆಜ್ಜೆ ಗುರುತು: ಉತ್ತರ ಸಿಗದ ಪ್ರಶ್ನೆಗಳು..!

    VIDEO: ಪೈಲಟ್​ಗಳಿಗೆ ಕಾಣಿಸುತ್ತಿದ್ದಾನೆ ನಿಗೂಢ ವ್ಯಕ್ತಿ! ಆಕಾಶದಲ್ಲಿ ಹಾರುತ್ತಿರುವವ ಯಾರೀತ?​

    ಆಸ್ಪತ್ರೆಗೆ ದಾಖಲಾಗಿರುವ ಸೌರವ್​ ಗಂಗೂಲಿಯ ಹೃದಯ ಹೇಗಿದೆ? ಡಾ.ದೇವಿ ಶೆಟ್ಟಿ ಏನು ಹೇಳಿದರು ನೋಡಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts