10ನೇ ತರಗತಿ ಪರೀಕ್ಷೆ ಬರಿಯುತ್ತಲೇ ಹೆರಿಗೆ ನೋವು- ಮಗುವಿಗೆ ಜನ್ಮ: ಪಾಪುವಿಗೆ ಪರೀಕ್ಷೆಯ ಹೆಸರು

child
Published on

ಪಟ್ನಾ: ದ್ವಿತೀಯ ಪಿಯುಸಿ ಪರೀಕ್ಷೆಗೆ ತೆರಳುತ್ತಿದ್ದ ವೇಳೆ ಮಗುವಿಗೆ ಜನ್ಮನೀಡಿ, ಪರೀಕ್ಷೆ ಬರೆದುಬಂದ ಯುವತಿಯೊಬ್ಬಳ ಘಟನೆ ಈಚೆಗಷ್ಟೇ ನಡೆದಿದೆ. ಇದೀಗ 10ನೇ ಪರೀಕ್ಷೆ ಬರೆಯುತ್ತಲೇ ಮಗುವಿನ ಜನ್ಮ ನೀಡಿದ ಘಟನೆ ಬಿಹಾರದ ಮುಜಾಫರ್ಪುರ್ ಜಿಲ್ಲೆಯಲ್ಲಿ ನಡೆದಿದೆ.

ಶಾಂತಿ ದೇವಿ ಎಂಬ 20 ವರ್ಷದ ಯುವತಿ ಮಗುವಿಗೆ ಜನ್ಮ ನೀಡಿದ್ದಾಳೆ. ಈಕೆ 10ನೇ ತರಗತಿ ಪರೀಕ್ಷೆ ಬರೆಯುತ್ತಿದ್ದಳು. ಆ ಸಮಯದಲ್ಲಿಯೇ ಹೆರಿಗೆ ನೋವು ಕಾಣಿಸಿಕೊಂಡಿದೆ. ಕೂಡಲೇ ಅವಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಮಗುವಿಗೆ ‘ಇಮ್ತಿಹಾನ್’ (ಪರೀಕ್ಷೆ) ಎಂದು ಹೆಸರಿಡಲಾಗಿದೆ.

ಮಹಾಂತ್ ದರ್ಶನ್ ದಾಸ್ ಮಹಿಳಾ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎಂದು ಕೇಂದ್ರದ ಮುಖ್ಯಸ್ಥೆ ಮೀರಾ ಮಧುಮಿತ ಹೇಳಿದ್ದಾರೆ. ಕಾಲೇಜಿನಲ್ಲಿ ಮೆಟ್ರಿಕ್ಯುಲೇಷನ್ ಪರೀಕ್ಷಾ ಕೇಂದ್ರವನ್ನು ತೆರೆಯಲಾಗಿದೆ. ಅಂತೆಯೇ ಶುಕ್ರವಾರ ಶಾಂತಿ ದೇವಿ ಪರೀಕ್ಷೆ ಬರೆಯಲು ಬಂದಿದ್ದಳು. ಪರೀಕ್ಷೆ ಬರೆಯಲು ಕುಳಿತ 1 ಗಂಟೆಯ ನಂತರ ಆಕೆಗೆ ಹೊಟ್ಟೆನೋವು ಕಾಣಿಸಿಕೊಂಡಿದೆ ಎಂದು ಅವರು ಮಾಹಿತಿ ನೀಡಿದರು.

ಕೂಡಲೇ ಕೇಂದ್ರ ಉಸ್ತುವಾರಿಗೆ ಮಾಹಿತಿ ರವಾನಿಸಲಾಗಿದೆ. ಆಕೆಗೆ ವಿಶ್ರಾಂತಿ ಪಡೆಯಲು ಪ್ರತ್ಯೇಕ ಕೋಣೆಯಲ್ಲಿ ಅನುಮತಿ ಕೇಳಲಾಯಿತು. ನಂತರ ಜಿಲ್ಲಾ ಶಿಕ್ಷಣ ಅಧಿಕಾರಿಗೂ ಈ ಬಗ್ಗೆ ಮಾಹಿತಿ ರವಾನೆ ಮಾಡಲಾಗಿದೆ. ನಂತರ ಯುವತಿಯನ್ನು ಅಂಬ್ಯುಲೆನ್ಸ್‌ ಮೂಲಕ ಸದರ್ ಆಸ್ಪತ್ರೆಗೆ ಕಳುಹಿಸಲಾಯಿತು. ಅಲ್ಲಿ ಆಕೆ ಸಂಜೆ ಗಂಡು ಮಗುವಿಗೆ ಜನ್ಮ ನೀಡಿದಳು.

ಗಂಡು ಮಗುವಿಗೆ ಜನ್ಮ ನೀಡಿದ ಬಳಿಕ ಶಾಂತಿ ಆರೋಗ್ಯವಾಗಿದ್ದಾಳೆ. ನೋವು ಪ್ರಾರಂಭವಾಗುವ ಮೊದಲು ಆಕೆ ಟಿಕ್ ಮಾದರಿಯ ಪ್ರಶ್ನೆಗಳನ್ನು ಮುಗಿಸಿದ್ದಾಳೆ. ಸದ್ಯ ತಾಯಿ-ಮಗು ಆರೋಗ್ಯವಾಗಿದ್ದಾರೆ ಎಂದು ಪತಿ ಬಿರ್ಜು ಸೆಹ್ನಿ ಹೇಳಿದ್ದಾರೆ. ಪರೀಕ್ಷೆಯ ಸಮಯದಲ್ಲಿ ದೇವರು ಮಗು ಕರುಣಿಸಿದ್ದಾನೆ ಎಂದಿದ್ದಾರೆ ಈಕೆಯ ಪತಿ.

ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net