ಪತಿಯ ಕಣ್ತಪ್ಪಿಸಿ ನಡುರಾತ್ರಿ ಪ್ರೇಮಿಯ ಜತೆ ರೆಡ್‌ಹ್ಯಾಂಡ್‌ ಆಗಿ ಸಿಕ್ಕಿಬಿದ್ದ ಬೆಳಗಾವಿ ಬೆಡಗಿ: ಮುಂದೇನಾಯ್ತು?

nandondu kathe
Published on

ಬೆಳಗಾವಿ: ಪತಿ ಹಾಗೂ ಆತನ ಮನೆಯವರ ಕಣ್ಣುತಪ್ಪಿಸಿ ನಡುರಾತ್ರಿ ಪ್ರೇಮಿಯನ್ನು ಸಿಗಲು ಬಂದ ಯುವತಿಯೊಬ್ಬಳು ಕುಟುಂಬದವರ ಕೈಯಲ್ಲಿ ಸಿಕ್ಕಿಬಿದ್ದ ಘಟನೆ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಮುರುಕಟನಾಳ ಗ್ರಾಮದಲ್ಲಿ ನಡೆದಿದೆ.

ಈ ವಿವಾಹಿತೆಯೊಬ್ಬಳು ಯುವಕನೊಬ್ಬನನ್ನು ಪ್ರೀತಿಸುತ್ತಿದ್ದಳು. ಆತ ರಾಮದುರ್ಗ ತಾಲೂಕಿನ ಚುಂಚನೂರು ಗ್ರಾಮದ ನಿವಾಸಿ. ಆದರೆ ಯುವತಿಯ ವಿವಾಹ ಬೇರೆಯವನ ಜತೆ ಆಗಿತ್ತು. ಆದರೆ ಮದುವೆಯ ನಂತರವೂ ಪ್ರೇಮವ್ಯವಹಾರ ಮುಂದುವರೆದಿತ್ತು.

ನಿನ್ನೆ ತಡರಾತ್ರಿ ಯುವತಿ, ಯಾರಿಗೂ ತಿಳಿಯದಂತೆ ಪ್ರಿಯಕರನನ್ನು ಭೇಟಿಯಾಗಲು ಬಂದಿದ್ದಾಳೆ. ಪ್ರಿಯತಮೆಯನ್ನು ನೋಡಿದ ಪ್ರೇಮಿ ಖುಷಿಯಿಂದ ಆಕೆಯನ್ನು ಒಳಗೆ ಕರೆದುಕೊಂಡು ಹೋಗಿದ್ದಾನೆ. ಇಬ್ಬರೂ ಸರಸ ಸಲ್ಲಾಪದಲ್ಲಿ ತೊಡಗಿದ್ದಾರೆ.

ಆದರೆ ಯುವತಿಯ ಬಗ್ಗೆ ಮೊದಲೇ ಪತಿಗೆ ಅನುಮಾನ ಶುರುವಾಗಿತ್ತು. ನಡುರಾತ್ರಿ ಆಕೆ ಮನೆಯಲ್ಲಿ ಇಲ್ಲದ್ದನ್ನು ನೋಡಿ ಕುಟುಂಬದವರ ಜತೆ ಅವಳ ಅರಿವಿಗೆ ಬಾರದಂತೆ ಪತಿ ಹಿಂಬಾಲಿಸಿದ್ದಾನೆ. ಇತ್ತ ಪ್ರಿಯಕರನ ಜತೆ ಏಕಾಂತದಲ್ಲಿ ಇದ್ದಾಗ ಎಲ್ಲರೂ ದಿಢೀರ್‌ ದಾಳಿ ಮಾಡಿ ರೆಡ‌ಹ್ಯಾಂಡ್‌ ಆಗಿ ಹಿಡಿದಿದ್ದಾರೆ. ನಂತರ ಇಬ್ಬರನ್ನೂ ಸಾರ್ವಜನಿಕವಾಗಿ ಟ್ರ್ಯಾಕ್ಟರ್ ಗೆ ಕಟ್ಟಿ ಹಾಕಿ ಶಿಕ್ಷೆ ನೀಡಿದ್ದಾರೆ.

ಸುಮಾರು ನಾಲ್ಕು ಗಂಟೆ ಇಬ್ಬರನ್ನೂ ಟ್ರ್ಯಾಕ್ಟರ್‌ಗೆ ಕಟ್ಟಿ ಹಾಕಿದ್ದಾರೆ. ನಂತರ ಆಕೆಯಿಂದ ದೂರ ಇರುವಂತೆ ಯುವಕನಿಗೆ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net