More

    VIDEO- ಪತಿಯ ಮೇಲೆ ಈ ಟೈಂನಲ್ಲಿ ಪ್ರೀತಿ ಹುಟ್ಟೋದಾ? ಕಿಸ್‌ ಕೊಡಲು ಹೋಗಿ ವೈರಲ್‌ ಆದ್ಲು!

    ನವದೆಹಲಿ: ‌ಕರೊನಾದಿಂದಾಗಿ ವರ್ಕ್‌ ಫ್ರಂ ಹೋಂ, ಆನ್‌ಲೈನ್‌ ಮೀಟಿಂಗ್‌ಗಳಿಂದ ಆಗಿರುವ ಎಡವಟ್ಟುಗಳು ಒಂದಲ್ಲ, ಎರಡಲ್ಲಾ… ಮೀಟಿಂಗ‌ ನಡೆಯುತ್ತಿರುವ ಸಂದರ್ಭದಲ್ಲಿ ಆಗಿರುವ ಹಲವಾರು ಎಡವಟ್ಟುಗಳು ಇದಾಗಲೇ ಜಗಜ್ಜಾಹೀರವಾಗಿದೆ.

    ಅಂಥದ್ದೇ ಒಂದು ಎಡವಟ್ಟು ಪತ್ನಿಯೊಬ್ಬಳಿಂದ ಆಗಿದ್ದು, ಇದೀಗ ವೈರಲ್ ಆಗಿದೆ. ಝೂಮ್‌ ಮೀಟಿಂಗ್‌ ಸಂದರ್ಭದಲ್ಲಿ ಲೈವ್‌ನಲ್ಲಿ ಇರುವಾಗಲೇ ಪತ್ನಿಯೊಬ್ಬಳು ಗಂಡನಿಗೆ ಕಿಸ್‌ ಕೊಡಲು ಹೋಗಿರುವ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

    ಕೈಗಾರಿಕೋದ್ಯಮಿಯೊಬ್ಬರು ಝೂಮ್‌ ಮೀಟಿಂಗ್‌ನಲ್ಲಿ ಇದ್ದರು. ಉದ್ಯಮಕ್ಕೆ ಸಂಬಂಧಿಸಿದಂತೆ ಅವರು ಸಭೆ ನಡೆಸುತ್ತಿದ್ದರು. ಈ ವೇಳೆ ಅವರ ಪತ್ನಿ ಮೀಟಿಂಗ್‌ ನಡೆಯುತ್ತಿದ್ದ ಮೀಟಿಂಗ್‌ಗೆ ಬಂದಿದ್ದಾರೆ. ಅವರು ಪತ್ನಿ ಲೈವ್‌ ಮೀಟಿಂಗ್‌ನಲ್ಲಿ ಇದ್ದುದು ಗಮನಿಸಿಲ್ಲ. ಒಳಕ್ಕೆ ಬರುತ್ತಿದ್ದಂತೆಯೇ ಕಿಸ್ ನೀಡಲು ಮುಂದಾಗಿದ್ದಾರೆ. ತಕ್ಷಣವೇ ಅವರು ಮೀಟಿಂಗ್‌ ನಡೆಸುತ್ತಿರುವ ಲ್ಯಾಪ್‍ಟಾಪ್ ಕಡೆ ತಿರುಗಿ ನೋಡಿ ಸಿಗ್ನಲ್ ಮಾಡಿದ್ದಾರೆ. ಬಳಿಕ ಪತ್ನಿ ಸ್ಮೈಲ್ ಮಾಡಿ ಹಿಂದೆ ಸರಿದಿದ್ದಾರೆ.

    ಹರ್ಷ್‌ ಎನ್ನುವವರು ಈ ವಿಡಿಯೋವನ್ನು ಟ್ವೀಟ್ ಮಾಡಿದ್ದು, ‘ಝೂಮ್ ಕಾಲ್ ಸೋ ಫನ್ನಿ’ ಎಂದು ಬರೆದು ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವೀಡಿಯೋವನ್ನು ಎಂಜಾಯ್ ಮಾಡಿರುವ ಆನಂದ್ ಮಹೀಂದ್ರಾ ವರ್ಷದ ಪತ್ನಿಯನ್ನಾಗಿ ಈ ಮಹಿಳೆಯನ್ನು ನಾಮಿನೇಟ್ ಮಾಡಬೇಕು. ಅಲ್ಲದೆ ಪತಿಗೂ ಹೆಚ್ಚು ಆಸೆ ಹೊಗಳಿಕೆ ಇದ್ದಿದ್ದರೆ, ಈ ಇಬ್ಬರನ್ನೂ ವರ್ಷದ ಜೋಡಿ ಎಂದು ನಾಮಿನೇಟ್ ಮಾಡುತ್ತಿದ್ದೆ. ಆದರೆ ವ್ಯಕ್ತಿ ಸಿಟ್ಟಾಗಿದ್ದರಿಂದ ಈ ಬಿರುದಿನಿಂದ ವಂಚಿತರಾಗಿದ್ದಾರೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

    ಇದಾಗಲೇ ಈ ಟ್ವೀಟ್‌ ಮೂರು ಲಕ್ಷಕ್ಕೂ ಅಧಿಕ ವ್ಯೂವ್ಸ್ ಕಂಡಿದೆ. ಹಲವಾರು ಮಂದಿ ಕಮೆಂಟ್‌ ಮಾಡಿದ್ದಾರೆ.

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್ಸ್​ ಮಾಡಿ

    ಮುಂದುವರೆದಿದೆ ಚಿತ್ರತಾರೆಯರ ಆತ್ಮಹತ್ಯೆಯ ಸರಣಿ: ತಮಿಳು ನಟ ನೇಣಿಗೆ ಶರಣು!

    ಹೈಕೋರ್ಟ್‌ ನ್ಯಾಯಮೂರ್ತಿ ಮನೆಗೆ 150 ಕಾಂಡೋಂ ಕಳುಹಿಸಿ ಮಹಿಳೆ ಪ್ರತಿಭಟನೆ!

    ಏನೋ ಮಾಡಲು ಹೋಗಿ ಮಾಡಬಾರದ್ದನ್ನು ಮಾಡಿ ದಿಶಾಳನ್ನು ಸಂಕಷ್ಟಕ್ಕೆ ಸಿಲುಕಿಸಿದ ಗ್ರೇಟಾ ಮಾಡಿದಳೊಂದು ಟ್ವೀಟ್‌…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts