Bengaluru ನೀನೇಕ ಇಷ್ಟು... ಸಿಲಿಕಾನ್​ ಸಿಟಿ ಕುರಿತು ವಿದೇಶಿ ಯುವತಿ ಪೋಸ್ಟ್​ ವೈರಲ್​

Russian Women
Published on

ಬೆಂಗಳೂರು: ಐಟಿ ಸಿಟಿ, ಗಾರ್ಡನ್​ ಸಿಟಿ, ಸಿಲಿಕಾನ್​ ಸಿಟಿ ಎಂದೆಲ್ಲಾ ಖ್ಯಾತಿ ಪಡೆದಿರುವ ನಮ್ಮ ಬೆಂಗಳೂರು (Bengaluru) ಹೊರರಾಜ್ಯದ ಜನರಿಗೆ ಜೀವನ ಕಟ್ಟಿಕೊಳ್ಳಲು ಅವಕಾಶ ನೀಡಿದ್ದು, ಆಶ್ರಯ ನೀಡಿದೆ. ಉದ್ಯಮಿಗಳು ಸೇರಿದಂತೆ ಹಲವರಿಗೆ ಬೆಂಗಳೂರು ಅಚ್ಚುಮೆಚ್ಚಾಗಿದ್ದು, ಅವಕಾಶಗಳೊಂದಿಗೆ ಸದಾ ಜನರನ್ನು ಕೈಬೀಸಿ ಕರೆಯುತ್ತಿರುತ್ತದೆ. ಹೊಟ್ಟೆಪಾಡಿಗಾಗಿ ಬೆಂಗಳೂರಿಗೆ ಬಂದು ಇಂದು ಕೋಟ್ಯಧೀಶರಾಗಿರುವ ಹಲವು ನಿದರ್ಶನಗಳು ನಮ್ಮ ಮುಂದಿವೆ. ಇತ್ತೀಚಿನ ದಿನಗಳಲ್ಲಿ ಐಟಿಸಿಟಿ ಬಗ್ಗೆ ಅಪಸ್ವರ ತೆಗೆಯುತ್ತಿರುವವರ ನಡುವೆಯೇ ರಷ್ಯಾದ ಮೂಲದ ಯುವತಿಯೊಬ್ಬಳು ಬೆಂಗಳೂರನ್ನು ಹಾಡಿಹೊಗಳಿದ್ದು, ಈಕೆ ಪೋಸ್ಟ್​ ಮಾಡಿರುವ ವಿಡಿಯೋ ಸಖತ್ ವೈರಲ್​ ಆಗಿದೆ.

ಈ ಹಿಂದೆ ಭಾರತೀಯನನ್ನು ಮದುವೆಯಾಗುವುದಾಗಿ ಹೇಳಿ ಸಖತ್ ಸೌಂಡ್​ ಮಾಡಿದ್ದ ರೆಷ್ಯಾ ಮೂಲದ ಯುವತಿ ದಿನಾರಾ ಇದೀಗ ಬೆಂಗಳೂರು (Bengaluru) ನಗರವನ್ನು ಹಾಡಿಹೊಗಳಿದ್ದು, ಲವ್​ ವಿತ್​ ಆ್ನನ್​ ಇಂಡಿಯನ್​​ ಸಿಟಿ ಎಂದು ವಿಡಿಯೋ ಒಂದನ್ನು ಪೋಸ್ಟ್​ ಮಾಡಿದ್ದಾರೆ. ಸದ್ಯ ಈ ಪೋಸ್ಟ್​ ವೈರಲ್​ ಆಗಿದ್ದು, ಬೆಂಗಳೂರಿಗರು ಕಮೆಂಟ್​ ಹಾಕುತ್ತಿದ್ದಾರೆ.

ವೈರಲ್​ ಆಗಿರುವ ಪೋಸ್ಟ್​ ನೋಡುವುದಾದರೆ ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ದಿನಾರಾ ಸುತ್ತಾಡಿದ್ದು, ಹಿಂದಿ ಹಾಡಿಗೆ ಹೆಜ್ಜೆ ಹಾಕಿದ್ಧಾರೆ. ಬಳಿಕ ವಿಧಾನಸೌಧದ ಮುಂಭಾಗ ಫೋಟೋ ತೆಗೆಸಿಕೊಂಡಿದ್ದು, ನಾನು ಈ ನಗರವನ್ನು ಪ್ರೀತಿಸುತ್ತಿದ್ದೇನೆ. ಬೆಂಗಳೂರು (Bengaluru) ಏಕೆ ತುಂಬಾ ಸುಂದರವಾಗಿದ್ದೀಯ. ಭಾರತ, ಬೆಂಗಳೂರು ಎಷ್ಟು ಸುಂದರ ಎಂದು ಅಡಿಬರಹವನ್ನು ನೀಡಿದ್ದಾರೆ. 

ಇತ್ತ ವಿಡಿಯೋ ವೈರಲ್​ ಆಗುತ್ತಿದ್ದಂತೆ ಬೆಂಗಳೂರಿಗರು ಕಮೆಂಟ್​ ಮೂಲಕ ದಿನಾರಾ ಪೋಸ್ಟ್​ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಬೆಂಗಳೂರಿನ (Bengaluru) ಬಗ್ಗೆ ಅಪಸ್ವರ ತೆಗೆದಿದ್ದ ಉತ್ತರ ಭಾರತೀಯರಿಗೆ ಟಾಂಗ್​ ಕೊಟ್ಟಿದ್ದಾರೆ. ಅನೇಕರು ತಮ್ಮ ನಗರಕ್ಕೆ ಒಮ್ಮೆ ಭೇಟಿ ನೀಡುವಂತೆ ದಿನಾರಾಗೆ ಸಲಹೆ ನೀಡಿದ್ದು, ಸದ್ಯ ಈ ಪೋಸ್ಟ್​ ವೈರಲ್​ ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net