

ರಷ್ಯಾ: ಯುವಕ-ಯುವತಿಯರು ಮದುವೆಗೆ ಹುಡುಗ ಅಥವಾ ಹುಡುಗಿಯನ್ನು ಬಯಸಿ ಮ್ಯಾಟ್ರಿಮೋನಿ ಪೋಸ್ಟ್ ಮಾಡುವುದು ಸಾಮಾನ್ಯ. ಯಾವ ರೀತಿಯ ವಧು-ವರರು ಬೇಕು ಎಂಬ ಮಾಹಿತಿಯನ್ನೂ ನೀಡಲಾಗುತ್ತದೆ. ಕೆಲವರು ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಕೂಡ ಮಾಡುತ್ತಿದ್ದಾರೆ.
ಆದರೆ ರಷ್ಯಾದ ಸುಂದರಿಯೊಬ್ಬರು 'ಲುಕಿಂಗ್ ಫಾರ್ ಇಂಡಿಯನ್ ಹಸ್ಬೆಂಡ್' ಪೋಸ್ಟರ್ ಹಿಡಿದು ಫೋಟೋ ಹಾಕಿದ್ದಾರೆ. ಮಾಸ್ಕೋದಲ್ಲಿರುವ ಮಾಲ್‌ವೊಂದರಲ್ಲಿ ಭಾರತೀಯ ವರನನ್ನು ಹುಡುಕುತ್ತಿರುವ ಕುರಿತಾಗಿ ಪೋಸ್ಟರ್ ಹಿಡಿದು ನಿಂತಿದ್ದಾಳೆ. ಈ ಪೋಸ್ಟರ್ನಲ್ಲಿ ಪುರುಷ ಆಕೃತಿಯ ಪಕ್ಕದಲ್ಲಿ ಯುವತಿ ನಿಂತಿದ್ದಾಳೆ.
ರಷ್ಯಾದ ಸುಂದರಿ ದಿನಾರಾ ಕೆಂಪು ಸೀರೆಯಲ್ಲಿ ಸುಂದರವಾಗಿ ಕಾಣುತ್ತಿದ್ದರು. ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಭಾರತೀಯ ಯುವಕನನ್ನು ಮದುವೆಯಾಗಲು ತನ್ನ ಆಸಕ್ತಿಯನ್ನು ವ್ಯಕ್ತಪಡಿಸಿದಳು. ತನಗೆ ವರನನ್ನು ಹುಡುಕಲು ಸಹಾಯ ಮಾಡುವಂತೆ ತನ್ನ ಇನ್ಸ್ಟಾಗ್ರಾಮ್ ಅನುಯಾಯಿಗಳನ್ನು ಕೇಳಿದ್ದಾಳೆ. ಈ ಪೋಸ್ಟ್ಗೆ ತರಹೆವಾಗಿ ಕಾಮೆಂಟ್ ಬಂದಿದೆ.