

ಮಾಸ್ಕೊ: ರಷ್ಯಾ ಈಗ ವಿಶ್ವದಲ್ಲೇ ಅತ್ಯಂತ ಪ್ರಬಲ ಶಕ್ತಿಯ ಬಾಂಬ್ವೊಂದನ್ನು ಅಭಿವೃದ್ಧಿಪಡಿಸಿದೆ ಎಂದು ತಿಳಿದುಬಂದಿದೆ. ಪೂರ್ವ ಮತ್ತು ಪಶ್ಚಿಮ ರಾಷ್ಟ್ರಗಳ ಮಧ್ಯೆ ಒಂದು ವೇಳೆ ಯುದ್ಧ ಸಂಭವಿಸಿದರೆ ಪರಿಸ್ಥಿತಿ ನಿಯಂತ್ರಣಕ್ಕಾಗಿ ಕೊನೆಯ ಅಸ್ತ್ರವಾಗಿ ಬಳಸಲು ರಷ್ಯಾ ಡೂಮ್್ಸ ಡೇ (ಭೂಮಿಯನ್ನು ನಾಶಮಾಡುವ ಸಾಮರ್ಥ್ಯ ಹೊಂದಿರುವ) ಅಣ್ವಸ್ತ್ರ ಬಾಂಬ್ ಕ್ಷಿಪಣಿಯನ್ನು ಅನ್ವೇಷಿಸಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಇದು ಸಾಗರದ ತಳದಲ್ಲಿನ ಒಂದು ರೀತಿಯ ಸ್ಲೀಪರ್ ಬಾಂಬ್ ಆಗಿದ್ದು, ಅವಶ್ಯಕ ಸಂದರ್ಭದಲ್ಲಿ ಇದನ್ನು ರಿಮೋಟ್ ಕಂಟ್ರೋಲ್ ಮೂಲಕ ಸ್ಪೋಟಿಸಬಹುದಾಗಿದೆ.
ರಷ್ಯಾ ನಿರ್ವಿುಸಿರುವ ಈ ಬಾಂಬ್ನ ಚಿತ್ರ ಫೆಬ್ರವರಿಯಲ್ಲೇ ಬಹಿರಂಗವಾಗಿತ್ತಾ ದರೂ ಆಗ ಅದನ್ನು ಸುನಾಮಿ ಸೃಷ್ಟಿಸುವ ಪೋಸಿಡಾನ್ ಡ್ರೋನ್ ಆಯುಧದ ನವೀಕರಿಸಲಾದ ಆವೃತ್ತಿ ಎಂದು ನಂಬಲಾಗಿತ್ತು. ಆದರೆ ಅಂದು ಬೋಟ್ನಲ್ಲಿ ಪತ್ತೆಯಾಗಿದ್ದ ದೊಡ್ಡ ಆಯುಧ ಪೋಸಿಡಾನ್ ಡ್ರೋನ್ ಅಲ್ಲ ಬದಲಿಗೆ ಬಾಂಬ್ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ಮಾಹಿತಿ ಬಹಿರಂಗವಾಗುತ್ತಲೇ ರಷ್ಯಾ ಆ ಬೋಟ್ನ್ನು ಏಪ್ರಿಲ್ 12ರಂದು ನೌಕಾಪಡೆ ಜಾಗಕ್ಕೆ ಸ್ಥಳಾಂತರಿಸಿದೆ. ಈ ಬಾಂಬ್ನಿಂದ ದಾಳಿ ನಡೆಸಿದರೆ ಸಮುದ್ರದಲ್ಲಿ ನಿರ್ದಿಷ್ಟ ವ್ಯಾಪ್ತಿಯಲ್ಲಿರುವ ಎಲ್ಲ ಹಡಗು, ಜಲಾಂತರ್ಗಾಮಿಯಂತಹ ನೌಕೆಗಳು ಸಂಪೂರ್ಣ ನಾಶವಾಗುತ್ತವೆ. ಇದನ್ನು ವಿಶೇಷ ಹಡಗಿನ ಮೂಲಕವೇ ಸಮುದ್ರದಲ್ಲಿ ಇಳಿಸಬೇಕು. ಒಂದು ವೇಳೆ ಉದ್ದೇಶಪೂರ್ವಕವಲ್ಲದಾಗಿಯೂ ಇದು ಸ್ಪೋಟಿಸಿದರೆ ಬಹಳ ದೀರ್ಘಕಾಲಿನ ನಷ್ಟ ಉಂಟುಮಾಡುತ್ತದೆ ಎಂದು ತಜ್ಞರು ಹೇಳಿದ್ದಾರೆ.
ಸಾಮರ್ಥ್ಯ: ಡೂಮ್ಸ್ ಡೇ 25 ಮೀಟರ್ ಉದ್ದದ ಹಾಗೂ ಸುಮಾರು 100 ಟನ್ ತೂಕದ ದೈತ್ಯ ಬಾಂಬ್. ಇದನ್ನು ಸಮುದ್ರದಲ್ಲಿ 3 ಸಾವಿರ ಅಡಿಗಳಷ್ಟು ಆಳದಲ್ಲಿ ಸುಪ್ತವಾಗಿರಿಸಬಹುದಾಗಿದ್ದು, ಅನೇಕ ವರ್ಷಗಳವರೆಗೂ ಇದು ಕಾರ್ಯ ನಿರ್ವಹಿಸದೆ ಸಕ್ರಿಯವಾಗಿರಬಲ್ಲದು. ಅವಶ್ಯಕ ಸಂದರ್ಭದಲ್ಲಿ ಸಕ್ರಿಯಗೊಳಿಸಿದರೆ ಸುಮಾರು 6 ಸಾವಿರ ಮೈಲಿ ದೂರದಲ್ಲಿನ ಗುರಿಯನ್ನೂ ಅನಾಯಾಸ ವಾಗಿ ಹೊಡೆದುಹಾಕಬಲ್ಲದು. ಪ್ರತಿ ನಿಮಿಷಕ್ಕೆ ಸುಮಾರು 60 ಮೈಲಿ ದೂರ ಕ್ರಮಿಸುವ ಇದು ಸಮುದ್ರದಲ್ಲಿ ಭಾರಿ ಪ್ರಮಾಣದ ಸ್ಪೋಟವನ್ನು ಉಂಟುಮಾಡಬಲ್ಲದು. ಇದರ ತೀವ್ರತೆ ಮಧ್ಯ ಸಮುದ್ರದಿಂದ ಕಡಲ ತೀರದವರೆಗೂ ವಿಸ್ತರಿಸುವಷ್ಟು ಪ್ರಭಲವಾಗಿರಲಿದೆ.