ಭಾರತದ ತೀವ್ರ ವಿರೋಧದ ನಡುವೆ ಗಿಲ್ಗಿಟ್ -ಬಾಲ್ಟಿಸ್ತಾನ ದಲ್ಲಿ ಚುನಾವಣೆ ನಡೆಸಿದ ಪಾಕಿಸ್ಥಾನಕ್ಕೆ ತೀವ್ರ ಮುಖಭಂಗ

Imran Khan 10 Dec 19
Published on

ಇಸ್ಲಮಾಬಾದ್​: ಭಾರತದ ಅವಿಭಾಜ್ಯ ಅಂಗವೆನಿಸಿದ ಗಿಲ್ಗಿಟ್ -ಬಾಲ್ಟಿಸ್ತಾನದಲ್ಲಿ ಚುನಾವಣೆ ನಡೆಸುವುದನ್ನು ಭಾರತ ತೀವ್ರವಾಗಿ ವಿರೋಧಿಸಿದ್ದರೂ, ಅದನ್ನು ಕಡೆಗಣಿಸಿ ಪಾಕ್ ಆಕ್ರಮಿತ ಕಾಶ್ಮೀರದ ಗಿಲ್ಗಿಟ್-ಬಾಲ್ಟಿಸ್ತಾನ ವಿಧಾನಸಭೆಗೆ ಚುನಾವಣೆಯನ್ನು ಪಾಕ್ ಸರ್ಕಾರ ನಿನ್ನೆ ನಡೆಸಿತ್ತು. ಇದರ ಫಲಿತಾಂಶ ಪ್ರಕಟವಾಗಿದ್ದು, ಇಮ್ರಾನ್ ಖಾನ್ ಅವರ ನೇತೃತ್ವದ ಪಾಕಿಸ್ತಾನ್ ತೆಹ್ರೀಕ್ ಇ ಇನ್​ಸಾಫ್​ ಪಾರ್ಟಿ (ಪಿಟಿಐ)ಗೆ ಭಾರಿ ಮುಖಭಂಗವಾಗಿದೆ.

ಈ ಪ್ರಾಂತ್ಯ ಬಹುತೇಕ ಮಿಲಿಟರಿ ಹಿಡಿತದಲ್ಲಿದ್ದು, 23 ಸ್ಥಾನಗಳಿಗೆ ಚುನಾವಣೆ ನಡೆಸಲಾಗಿದೆ. ಇದು ಮೂರನೇ ಅವಧಿಯದಾಗಿದ್ದು, ಭಾನುವಾರ ಮತದಾನ ನಡೆದಿತ್ತು. ತೀವ್ರ ವಿರೋಧದ ನಡುವೆ ಚುನಾವಣೆ ನಡೆಸಿದರೂ, ಬಹುಮತ ಪ್ರಾಪ್ತಿಯಾಗದ ಕಾರಣ ಸರ್ಕಾರ ರಚನೆ ಕಷ್ಟವೆನಿಸಿದೆ.

ಮಾಧ್ಯಮ ವರದಿಗಳ ಪ್ರಕಾರ, 23 ಸ್ಥಾನಗಳ ಪೈಕಿ 8 ರಿಂದ 9 ಸ್ಥಾನಗಳು ಪಿಟಿಐಗೆ ಸಿಕ್ಕರೆ, 6 ರಿಂದ 7 ಸ್ಥಾನಗಳಲ್ಲಿ ಪಕ್ಷೇತರರು ಗೆಲುವು ಕಂಡಿದ್ದಾರೆ. ಹೀಗಾಗಿ ಸರ್ಕಾರ ರಚನೆಗೆ ಯಾವುದೇ ಪಕ್ಷಕ್ಕೂ ಅಲ್ಲಿ ಬಹುಮತ ಪ್ರಾಪ್ತವಾಗಿಲ್ಲ. ಜಿಯೋ ಟಿವಿ ವರದಿ ಪ್ರಕಾರ, ಪಿಟಿಐಗೆ 8, ಪಿಪಿಪಿಗೆ 5, ಪಿಎಂಎಲ್​-ಎನ್​​ಗೆ 2, ಜೆಐಯು-ಎಫ್​ಗೆ , ಎಂಡಬ್ಲ್ಯುಎಂಗೆ ತಲಾ ಒಂದು ಸ್ಥಾನ ಸಿಕ್ಕಿವೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net