‘ಆಗ್ರಾ’ದಲ್ಲಿನ ರುಹಾನಿ ಶರ್ಮಾ ಇಂಟಿಮೇಟ್​​​ ​​ದೃಶ್ಯ ವೈರಲ್​​; ನನ್ನ ಆಯ್ಕೆಗೆ…ನಟಿ ಹೇಳಿದ್ದಿಷ್ಟು

Untitled-design-2024-08-24T160624.750-1
Published on

ಮುಂಬೈ: ತೆಲುಗಿನ ಚಿಲಸೌ ಚಿತ್ರದ ಮೂಲಕ ನಟನೆಗೆ ಪದಾರ್ಪಣೆ ಮಾಡಿದ ನಟಿ ರುಹಾನಿ ಶರ್ಮಾ. ಬಳಿಕ ಕೆಲ ಸಿನಿಮಾಗಳಲ್ಲಿ ನಟಿಸಿದರಾದರು ಅಷ್ಟಾಗಿ ಸಕ್ಸಸ್​​ ಕಾಣಲಿಲ್ಲ. ಆಗ್ರಾ ಸಿನಿಮಾದ ಮೂಲಕ ಬಾಲಿವುಡ್​​ಗೆ ಎಂಟ್ರಿ ಕೊಟ್ಟರು. ಈ ಸಿನಿಮಾವನ್ನು 2023ರಲ್ಲಿ ಕಾನ್​​​​ ಚಲನಚಿತ್ರೋತ್ಸವದಲ್ಲಿ ಪ್ರದರ್ಶಿಸಲಾಯಿತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೆಚ್ಚುಗೆ ಪಡೆದುಕೊಂಡ ಸಿನಿಮಾ ಕೆಲವು ಇಂಟಿಮೇಟ್​​ ದೃಶ್ಯಗಳ ಕಾರಣದಿಂದ ಭಾರತದಲ್ಲಿ ಸ್ಟ್ರೀಮ್​​ ಆಗಲಿಲ್ಲ.

ಆದರೆ ಸಿನಿಮಾಲ್ಲಿನ ರುಹಾನಿ ಶರ್ಮಾ ಅವರ ಬೋಲ್ಡ್​​ ದೃಶ್ಯಗಳ ಕೆಲವೊಂದು ಕ್ಲಿಪ್​​ ಪ್ರಸ್ತುತ​ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿವೆ. ಸಾಂಪ್ರದಾಯಿಕ ತೆಲುಗು ಹುಡುಗಿಯಾಗಿ ನೋಡಿದ್ದವರು ಈ ಬೋಲ್ಡ್​​  ದೃಶ್ಯಗಳನ್ನು ನೋಡಿ ತಮ್ಮದೆ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತ ಟ್ರೋಲ್​ ಮಾಡುತ್ತಿದ್ದಾರೆ.

ಈ ಟ್ರೋಲ್​ಗಳಿಗೆ ನಟಿ ರುಹಾನಿ ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಪೋಸ್ಟ್​​​​ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. ಎಲ್ಲರಿಗೂ ನಾನು ಒಂದು ವಿಷಯ ಹೇಳಲು ಬಯಸುತ್ತೇನೆ. ನನ್ನ ಆಗ್ರಾ ಚಿತ್ರದಿಂದ ಸೋರಿಕೆಯಾಗಿರುವ ಕೆಲವು ದೃಶ್ಯಗಳನ್ನು ನೋಡಿ ಸಿನಿಮಾವನ್ನು ನಿರ್ಣಯಿಸುವುದು ನಿಜವಾಗಿಯೂ ನೋವಿನ ಸಂಗತಿಯಾಗಿದೆ. ಕಲಾತ್ಮಕ ಸಿನಿಮಾ ಮಾಡುವುದು ಸುಲಭವಲ್ಲ. ತಿಂಗಳುಗಟ್ಟಲೆ ನಿದ್ರೆಯಿಲ್ಲದೆ ಶ್ರಮಪಟ್ಟಿ ಮಾಡಿರುವ ಸಿನಿಮಾ. ಆ ಶ್ರಮ ವ್ಯರ್ಥವಾಗುವುದನ್ನು ನೋಡಿದರೆ ದುಃಖವಾಗುತ್ತದೆ.

ಈ ಸಿನಿಮಾದಲ್ಲಿನ ಪಾತ್ರಕ್ಕೆ ಜೀವ ತುಂಬಲು ನಾವು ಪಟ್ಟ ಶ್ರಮವನ್ನು ಅರ್ಥಮಾಡಿಕೊಳ್ಳದೆ ಕೆಲುವು ದೃಶ್ಯಗಳಿಂದ ನಿರ್ಣಯಿಸುವುದು ಕ್ರೂರವಾಗಿದೆ. ಆಗ್ರಾ ಸಿನಿಮಾ ಇತರೆ ಚಿತ್ರಗಳಂತಲ್ಲ. 2023ರಲ್ಲಿ ಕಾನ್​ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿದೆ. ಅನೇಕ ಪ್ರಶಸ್ತಿಯನ್ನು ಪಡೆದುಕೊಂಡಿದೆ. ನನ್ನ ನಿರ್ಧಾರಕ್ಕೆ ನಾನು ಬದ್ಧಳಾಗಿದ್ದೇನೆ. ಈ ಚಿತ್ರದಲ್ಲಿ ನಟಿಸಿದ್ದಕ್ಕೆ ಹಾಗೂ ಸಿನಿಮಾದಲ್ಲಿ ಭಾಗವಾಗಿರುವುದಕ್ಕೆ ನನಗೆ ಹೆಮ್ಮೆಯಾಗುತ್ತಿದೆ.

ಕನಸು ಕಾಣುವುದು ಅಷ್ಟು ಸುಲಭವಲ್ಲ. ಇದು ಅನೇಕ ಸವಾಲುಗಳು ಮತ್ತು ಭಾವನೆಗಳಿಂದ ತುಂಬಿದೆ. ಕಲಾವಿದರ ಶ್ರಮವನ್ನು ಟೀಕಿಸುವ ಬದಲು ಇಂತಹ ವೈವಿಧ್ಯಮಯ ಚಿತ್ರಗಳನ್ನು ಪ್ರೋತ್ಸಾಹಿಸಿ. ನಿಮ್ಮ ಬೆಂಬಲಕ್ಕೆ ಧನ್ಯವಾದಗಳು ಎಂದು ಪೋಸ್ಟ್​ನಲ್ಲಿ ಬರೆದಿದ್ದಾರೆ.

ನಟಿ ರುಹಾನಿ ಶರ್ಮಾ ಸೈಂಧವ್, ಆಪರೇಷನ್ ವ್ಯಾಲೆಂಟೈನ್ ಮತ್ತು ಶ್ರೀರಂಗ ನೀತುಲು ಸಿನಿಮಾಗಳಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದರು. ನಟಿ ಮುಂದೆ ತಮಿಳಿನ ಮಾಸ್ಕ್​ ಎಂಬ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net