ಸೆಲಿಬ್ರಿಟಿಯೇ ಹೊರತು ಪಬ್ಲಿಕ್​ ಪ್ರಾಪರ್ಟಿ ಅಲ್ಲಾ; ನಟಿ ತಾಪ್ಸಿ ಪನ್ನು ಗರಂ

Untitled-design-2024-08-23T162534.256
Published on

ಮುಂಬೈ: ತೆಲುಗು ಸಿನಿಮಾ ಜುಮ್ಮಂದಿ ನಾದಂ ಮೂಲಕ ನಟನೆಗೆ ಪದಾರ್ಪಣೆ ಮಾಡಿದ ನಟಿ ತಾಪ್ಸಿ ಪನ್ನು ಸದ್ಯ ಬಾಲಿವುಡ್​ನಲ್ಲಿ ಬಿಸಿಯಾಗಿದ್ದಾರೆ. ನಟಿ ತಾಪ್ಸಿ ತಮ್ಮ ವೈಯಕ್ತಿಕ ಜೀವನ, ಸಿನಿಮಾ ಮಾತ್ರವಲ್ಲದೆ ತಮ್ಮ ಬೋಲ್ಡ್ ಮಾತು ಹಾಗೂ ನಡುವಳಿಕೆಯಿಂದ ಆಗಾಗ್ಗೆ ಟ್ರೋಲ್​ ಆಗುತ್ತಾರೆ. ​​

ಇತ್ತೀಚೆಗೆ ಸಂದರ್ಶನವೊಂದರಲ್ಲಿ ಅತಿರೇಕದ ಟ್ರೋಲ್ ಹಾಗೂ ಕೆಲವು ಅನುಚಿತ ವರ್ತನೆಗಳ​​ ಬಗ್ಗೆ ನಟಿ ತಾಪ್ಸಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ನೀವು ಏನು ಮಾಡಿದರು, ಮಾಡದಿದ್ದರೂ ಟ್ರೋಲ್​ಗೆ ಒಳಗಾಗುತ್ತೀರಿ. ನನ್ನ ಜೀವನದಲ್ಲಿ ಇದನ್ನು ನಾನು ತಡವಾಗಿ ಅರಿತುಕೊಂಡೆ ಎಂದು ಹೇಳಿದ್ದಾರೆ.

ಅಲ್ಲದೆ ನನ್ನ ಜೀವನದ ಬಗ್ಗೆ ನಾನು ಸ್ಪಷ್ಟವಾಗಿದ್ದೇನೆ. ಸೆಲಿಬ್ರಿಟಿ ಹಾದು, ನಾನು ಸಾರ್ವಜನಿಕ ವ್ಯಕ್ತಿಯೆ ಹೊರತು ಸಾರ್ವಜನಿಕ ಆಸ್ತಿಯಲ್ಲ. ಈ ಎರಡರ ನಡುವೆ ಅಜಗಜಾಂತರ ವ್ಯತ್ಯಾಸವಿದೆ. ಗೌರವ ಕೊಟ್ಟು ಪಡೆದುಕೊಳ್ಳಬೇಕು. ಅದನ್ನು ಹೊರತು ಪಡಿಸಿ ಮೈಮೇಲೆ ಬೀಳುವುದು, ತುಂಬಾ ಹತ್ತಿರ ಬರುವುದು, ನನ್ನ ಮೇಲೆ ಕಿರುಚುವುದು ಇದೆಲ್ಲಾ ಸ್ವೀಕಾರ್ಹವಲ್ಲ ಎಂದು ತಿಳಿಸಿದರು.

ನಾವು ಕೂಡ ಮನುಷ್ಯರೆ.. ಅದರಲ್ಲೂ ನಾನು ಹುಡುಗಿ. ಫೋಟೋ ತೆಗೆಯಲು ಹಾಗೂ ಮಾತನಾಡುವಾಗ ಮೈಮೇಲೆ ಬೀಳುವುದು ಈ ರೀತಿಯ ಅನುಚಿತ ವರ್ತನೆಗಳನ್ನು ಸಹಿಸಲು ಸಾಧ್ಯವಿಲ್ಲ. ಇದಕ್ಕೆ ನೀವು ತಪ್ಪಾದ ವೃತ್ತಿಗೆ ಬಂದಿದ್ದೇನೆ ಎಂದು ನೀವು ಹೇಳಬಹುದು. ಆದರೆ ಇಲ್ಲ ನಾನು ಸರಿಯಾದ ಸ್ಥಳದಲ್ಲಿಯೇ ಇದ್ದೇನೆ. ಕ್ಯಾಮೆರಾ ಮುಂದೆ ನಟಿಸುವಾಗ ನಾನು ನನ್ನ ಕೆಲಸವನ್ನು ಎಂಜಾಯ್​ ಮಾಡುತ್ತೇನೆ. ಆದರೆ ತಪ್ಪು ವಿಷಯಗಳಿಗೆ ಹಾಗೂ ಅನುಚಿತ ವರ್ತನೆಗಳನ್ನು ಸಹಿಸುವುದಿಲ್ಲ ಎಂದು ತಿಳಿಸಿದರು.

ತಾಪ್ಸಿ ಪನ್ನು ಇತ್ತೀಚೆಗೆ ರಿಲೀಸ್ ಆದ ಖೇಲ್ ಖೇಲ್ ಮೇ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಅಕ್ಷಯ್ ಕುಮಾರ್, ಫರ್ದೀನ್ ಖಾನ್, ವಾಣಿ ಕಪೂರ್, ಆದಿತ್ಯ ಸೀಲ್, ಪ್ರಜ್ಞಾ ಜೈಸ್ವಾಲ್ ಪ್ರಮುಖ ತಾರಗಣದಲ್ಲಿದ್ದಾರೆ. (ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net