ವಿಧಾನಸಭೆಯಲ್ಲಿ ಗೋ ರಕ್ಷಣೆಗೆ ಜಟಾಪಟಿ

Cow-1
Published on

ಬೆಂಗಳೂರು: ರಾಷ್ಟ್ರದಲ್ಲಿ ಗೋ ರಕ್ಷಕರು, ಮತಕ್ಕಾಗಿ ಗೋ ವಿಷಯ ಬಳಸುವವರು ಯಾರೆಂಬುದರ ಬಗ್ಗೆ ವಿಧಾನಸಭೆಯಲ್ಲಿ ಗುರುವಾರ ಕಾಂಗ್ರೆಸ್, ಬಿಜೆಪಿ ಶಾಸಕರ ನಡುವೆ ಜಟಾಪಟಿ ನಡೆಯಿತು.

ಬಿಜೆಪಿ ಶಾಸಕ ಶರಣು ಸಲಗಾರ್, ಬಜೆಟ್ ಮೇಲಿನ ಚರ್ಚೆ ವೇಳೆ ನಾವೆಲ್ಲ ಪುಣ್ಯಕೋಟಿಯ ಕತೆ ಓದಿ, ಕೇಳಿ ಬೆಳೆದವರು. ಬದುಕಿನುದ್ದಕ್ಕೂ ಹಸು ಹಾಲು ಕುಡಿದು ಬೆಳೆಯುತ್ತಿದ್ದೇವೆ. ಆ ತಾಯಿಯ ಕತ್ತು ಕಡಿಯುವ, ಕೆಚ್ಚಲು ಕುಯ್ಯುವ ಕೆಲಸವನ್ನು ಸರ್ಕಾರ ಮಾಡುತ್ತಿದೆ ಎಂದು ಶುರು ಮಾಡಿದರು.

ಮಧ್ಯಪ್ರವೇಶಿಸಿದ ಸಚಿವ ಸಂತೋಷ್ ಲಾಡ್, ಬಜೆಟ್ ಮೇಲಿನ ಭಾಷಣದಲ್ಲಿ ತಾಯಿ, ಕೆಚ್ಚಲು, ಹಾಲು ಎಂದೆಲ್ಲ ಭಾವನಾತ್ಮಕ ಮಾತು ಬೇಡ ಎಂದರು. ಇದಕ್ಕೆ ಧ್ವನಿಗೂಡಿಸಿದ ಸಚಿವ ಪ್ರಿಯಾಂಕ್ ಖರ್ಗೆ, ಬಿಜೆಪಿ ಸರ್ಕಾರ ಇದ್ದಾಗ ಪುಣ್ಯಕೋಟಿ ಯೋಜನೆ ಜಾರಿಗೆ ತಂದು ಸಾವಿರ ಹಸುಗಳನ್ನು ದತ್ತು ತೆಗೆದುಕೊಳ್ಳಲು ತಿಳಿಸಲಾಗಿತ್ತು.

ಸಿಎಂ, ಅಂದಿನ ಪಶುಸಂಗೋಪನೆ ಸಚಿವ ಪ್ರಭು ಚೌವ್ಹಾನ್ ಸೇರಿ 10 ಹಸು ದತ್ತು ಪಡೆದರೆ ಮತ್ಯಾರೂ ಆಸಕ್ತಿ ತೋರಿಸಲಿಲ್ಲ. ದನದ ಮಾಂಸ ರ್ತು ಮಾಡುವುದರಲ್ಲಿ ಭಾರತ 2ನೇ ಸ್ಥಾನದಲ್ಲಿದೆ. ಇದನ್ನು ತಡೆಯಲು ಆಗದೆ ಮತಕ್ಕಾಗಿ ಹಸು ಬಗ್ಗೆ ಮಾತನಾಡುವುದು ಬೇಡ ಎಂದರು. ಇದಕ್ಕೆ ಶರಣು ಸಲಗಾರ್, ನಮ್ಮನೋವು ಹೇಳಿಕೊಳ್ಳಲು ಅವಕಾಶ ಕೊಡಿ. ಸಾವಯವ ಕೃಷಿಗೆ ಬಜೆಟ್‌ನಲ್ಲಿ ಅನುದಾನ ಇಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net