ರಾಯಚೂರಿನಲ್ಲಿ ಕಾರು-ಬೈಕ್ ನಡುವೆ ಅಪಘಾತ; ಆರ್​ಟಿಓ ಸಿಬ್ಬಂದಿ ಮೃತ್ಯು

Bike
Published on

ರಾಯಚೂರು: ಸ್ಕಾರ್ಪಿಯೋ ಕಾರು ಮತ್ತು ಬೈಕ್ ಮಧ್ಯೆ ಉಂಟಾದ ಅಪಘಾತದಿಂದ ಆರ್​ಟಿಓ ಸಿಬ್ಬಂದಿ ಮೃತ ಪಟ್ಟಿರುವ ಘಟನೆ ನಗರದ ಆರ್​ಟಿಓ ಸರ್ಕಲ್​ನಲ್ಲಿ ನಡೆದಿದೆ. ಚಂದ್ರಕಾಂತ್(34) ಮೃತ ಆರ್​ಟಿಓ ಸಿಬ್ಬಂದಿ. ಚಂದ್ರಕಾಂತ್ ಜತೆಗೆ ಬೈಕ್​ನಲ್ಲಿದ್ದ ನಿಲೇಶ್ ಅಪಘಾತದಿಂದ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ.

ನಗರದ ಆರ್​​ಟಿಓ ಕಚೇರಿಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿದ್ದ ಚಂದ್ರಕಾಂತ್, ಬೈಕ್​ನಲ್ಲಿ ಆರ್​​ಟಿಓ ಸರ್ಕಲ್​ನಿಂದ ಬಿಆರ್​ಬಿ ಸರ್ಕಲ್​ಗೆ ತೆರಳುತ್ತಿದ್ದರು. ಈ ವೇಳೆ ಆರ್​ಟಿಓ ಸರ್ಕಲ್ ಕಡೆಗೆ ಬರುತ್ತಿದ್ದ ಸ್ಕಾರ್ಪಿಯೋ ಕಾರು ಚಾಲಕನ ನಿಯಂತ್ರಣ ತಪ್ಪಿ ಬೈಕ್​ಗೆ ಡಿಕ್ಕಿಯಾಗಿದೆ.

ಸದ್ಯ ಸ್ಕಾರ್ಪಿಯೋ ಕಾರಿನ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಘಟನೆಯ ಬಗ್ಗೆ ರಾಯಚೂರು ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net