

ಅಮೆರಿಕಗೆ ಹೋಗಿ ಒಳ್ಳೆಯ ಉದ್ಯೋಗ ಗಿಟ್ಟಿಸಿ, ಕೈ ತುಂಬಾ ಸಂಬಳ ಪಡೆಯಬೇಕು ಎಂಬ ಆಸೆ ಹೊಂದಿದ್ದ ಯುವತಿ, ಅಮೆರಿಕ ವೀಸಾ ಬಾರದ ಹಿನ್ನೆಲೆ ಹಾಗೂ 10 ಲಕ್ಷ ರೂ, ನಷ್ಟವಾಗಿದ್ದರಿಂದ ಆತ್ಮಹತ್ಯೆ ಮಾಡಿಕೊಂಡ ಘಟನೆ ತೆಲಂಗಾಣದ ಜಗಿತ್ಯಾಗ ಜಿಲ್ಲೆಯಲ್ಲಿ ಮಂಗಳವಾರ ನಡೆದಿದೆ.
ಆಂಧ್ರಪ್ರದೇಶದ ಬಾಪಟ್ಲ ಜಿಲ್ಲೆಗೆ ಸೇರಿದ ಕಾಂಗಂಡಿಪಾಲೆಂ ಗ್ರಾಮದ ನಿವಾಸಿಗಳಾದ ಶ್ರೀನಿವಾಸ ಎಂಬುವವರ ಪುತ್ರಿ ಕುಮಾರಿ ಹರ್ಷಿತಾ(25) ಮೃತೆ. 25 ವರ್ಷಗಳಿಂದೆ ಜೀವನೋಪಾಯಕ್ಕಾಗಿ ಜಗಿತ್ಯಾಗ ಜಿಲ್ಲೆಗೆ ಬಂದಿದ್ದು, ಅಗಿನಿಂದ ಇಲ್ಲೆ ವಾಸ ಮಾಡುತ್ತಿದ್ದಾರೆ.
ಇತ್ತೀಚಿಗೆ ಪದವಿ ಪೂರ್ಣಗೊಳಿಸಿದ ಅಮೆರಿಕಗೆ ಹೋಗುವ ಆಸೆ ಕಂಡಿದ್ದ ಹರ್ಷಿತಾ, ಅಪರಿಚಿತ ವ್ಯಕ್ತಿಯ ಮೂಲಕ ವೀಸಾ ಅರ್ಜಿಸಲ್ಲಿಸಿದ್ದಳು. ಅಲ್ಲದೆ, ವೀಸಾ ವಿಚಾರವಾಗಿ 10 ಲಕ್ಷ ರೂ. ನೀಡಿದ್ದಳು. ಈ ವಿಷಯ ತನ್ನ ತಂದೆ ಶ್ರೀನಿವಾಸಗೆ ಕೂಡ ತಿಳಿದಿರಲಿಲ್ಲ. ಇನ್ನೂ ವೀಸಾ ಬಾರದ್ದರಿಂದ ಜರ್ಮಿನಿಗೆ ಹೋಗುವೆ ಎಂದು ತಂದೆ ಬಳಿ 10 ಲಕ್ಷ ರೂ. ಕೇಳಿದ್ದಾಳೆ. 10 ಲಕ್ಷ ರೂ ನೀಡಲು ತಂದೆ ನಿರಾಕರಿಸಿದ ಹಿನ್ನೆಲೆ ಬೇಸತ್ತ ಹರ್ಷಿತಾ, ಬೆಳೆಗೆ ಸಿಂಪಡಿಸುವ ಕ್ರಿಮಿನಾಶಕ ಸೇವನೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಕುರಿತು ನಗರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.(ಏಜೆನ್ಸೀಸ್)