ರೈಲಿನಿಂದ ಬಿದ್ದ ವ್ಯಕ್ತಿಯನ್ನು ರಕ್ಷಿಸಿದ ಮಹಿಳಾ ಪೇದೆ: ವಿಡಿಯೋ ವೈರಲ್​!

train Man save
Published on

ಚೆನ್ನೈ: ಚಲಿಸುತ್ತಿದ್ದ ರೈಲಿನಿಂದ ಬೀಳುತ್ತಿದ್ದ ವ್ಯಕ್ತಿಯೋರ್ವನನ್ನು ಮಹಿಳಾ ಪೇದೆ ರಕ್ಷಿಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಮಹಿಳಾ ಪೇದೆಯ ಈ ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ಚೆನ್ನೈ ರೈಲ್ವೇ ನಿಲ್ದಾಣದಲ್ಲಿ ಚೆನ್ನೈ-ತಿರುಚಿ ಎಕ್ಸ್​ಪ್ರೆಸ್​ ರೈಲಿನಲ್ಲಿ ಹತ್ತಿದ್ದ ವ್ಯಕ್ತಿ ಇನ್ನೇನು ರೈಲು ಹೊರಡಲು ಮುಂದಾಗಿತ್ತು. ಫ್ಲಾಟ್​ ಫಾರಂನಿಂದ ಮುಂದೆ ನಿಧಾನವಾಗಿ ಚಲಿಸುತ್ತಿರುವಾಗಲೇ ರೈಲಿನಿಂದ ಆಕಸ್ಮಿಕವಾಗಿ ವ್ಯಕ್ತಿಯೋರ್ವ ಕೆಳಗೆ ಬೀಳುತ್ತಾನೆ.

ವ್ಯಕ್ತಿ ಬೀಳುತ್ತಿರುವುದನ್ನು ಗಮನಿಸಿದ ಮಹಿಳಾ ಪೇದೆ ಆತನನ್ನು ಎಳೆದು ರಕ್ಷಿಸಿದ್ದಾರೆ. ಕೂಡಲೇ ಇತರೆ ಪ್ರಯಾಣಿಕರು ನೆರವಿಗೆ ಧಾವಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net