ರೈಲಿಗೆ ಸಿಲುಕಿದ ಮಹಿಳೆಯನ್ನು ಶರವೇಗದಲ್ಲಿ ಬಂದು ರಕ್ಷಿಸಿದ ಆರ್‌ಪಿಎಫ್ ಸಿಬ್ಬಂದಿ: ರೋಚಕ ವೀಡಿಯೋ ವೈರಲ್.​.

rail
Published on

ಮುಂಬೈ: ಮಹಾರಾಷ್ಟ್ರದ ಜಲಗಾಂವ್ ರೈಲು ನಿಲ್ದಾಣದಲ್ಲಿ ವೇಗವಾಗಿ ಬಂದ ಸರಕು ಸಾಗಾಣಿಕೆ ರೈಲಿಗೆ ಡಿಕ್ಕಿ ಹೊಡೆದ ಮಹಿಳೆಯೊಬ್ಬರನ್ನು ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್) ಸಿಬ್ಬಂದಿ ಪ್ರಾಣದ ಹಂಗು ತೊರೆದು ರಕ್ಷಿಸಿದ್ದಾರೆ. ನಿಲ್ದಾಣದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ವೈರಲ್​ ವೀಡಿಯೋದಲ್ಲಿ, ಮಹಿಳೆ ರೈಲು ಹಳಿ ದಾಟಲು ಯತ್ನಿಸಿದ್ದಾಳೆ. ಆದರೆ, ಅದೇ ಸಮಯಕ್ಕೆ ಗೈಡ್ಸ್​ ರೈಲು ಬಂದಿದೆ. ಆಗ ಪ್ಲಾಟ್‌ಫಾರ್ಮ್ ನಡುವೆ ಮಹಿಳೆ ಸಿಲುಕಿಕೊಂಡಿದ್ದರಿಂದ ಸ್ವಲ್ಪ ದೂರ ಎಳೆದೊಯ್ದ ರೈಲು ಮಹಿಳೆಗೆ ಡಿಕ್ಕಿ ಹೊಡೆದಿದೆ. ಆರ್‌ಪಿಎಫ್ ಅಧಿಕಾರಿ ಚಂಗೋ ಪಾಟೀಲ್ ಕೂಡಲೇ ಮಹಿಳೆಯನ್ನು ಹಿಡಿದು ಪ್ಲಾಟ್‌ಫಾರ್ಮ್‌ಗೆ ಎಳೆದು ಆಕೆಯ ಜೀವ ಉಳಿಸಿದ್ದಾರೆ.

ಘಟನೆಯಲ್ಲಿ ಮಹಿಳೆಗೆ ಗಾಯಗಳಾಗಿದ್ದು, ಅಧಿಕಾರಿಯ ಸಮಯೋಚಿತ ಮಧ್ಯಪ್ರವೇಶದಿಂದ ಆಕೆಯ ಪ್ರಾಣ ಉಳಿದಿದೆ. ರೈಲು ನಿಲ್ದಾಣದಲ್ಲಿದ್ದ ಇತರ ಜನರ ಸಹಾಯದಿಂದ ಪಾಟೀಲ್ ಮಹಿಳೆಯನ್ನು ಹತ್ತಿರದ ಆಸ್ಪತ್ರೆಗೆ ಚಿಕಿತ್ಸೆಗಾಗಿ ಸಾಗಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net