Royal Wedding; ₹2.5 ಕೋಟಿ ವರದಕ್ಷಿಣೆ ಪಡೆದ ಬಹದ್ದೂರ್ ಗಂಡು

Untitled design - 2024-12-04T172657.570
Published on

ಲಖನೌ: ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆ ಈ ವರ್ಷ ಹಲವಾರು ತಿಂಗಳುಗಳವರೆಗೆ ಸುದ್ದಿಯಲ್ಲಿತ್ತು. ಈ ಮದುವೆಯಲ್ಲಿ ಆಹಾರದಿಂದ ಹಿಡಿದು ಅಲಂಕಾರದವರೆಗೆ ಅತಿಥಿಗಳ ಪಟ್ಟಿಯವರೆಗೆ ಎಲ್ಲವೂ ಸಖತ್​​​ ವೈರಲ್​ ಆಗಿತ್ತು. ಆದರೀಗ ಉತ್ತರ ಪ್ರದೇಶದ ಮೀರತ್‌ನಲ್ಲಿ ಮದುವೆಯ(Royal Wedding) ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ಈ ವಿಡಿಯೋ ನೋಡಿದವರು ಶಾಕ್​​ ಆಗುವುದಂತು ಗ್ಯಾರಂಟಿ.

ದೆಹಲಿ-ಡೆಹ್ರಾಡೂನ್ ಹೆದ್ದಾರಿಯಲ್ಲಿರುವ ಪ್ರಸಿದ್ಧ ರೆಸಾರ್ಟ್‌ನಲ್ಲಿ ನಾಲ್ಕು ದಿನಗಳ ಹಿಂದೆ ಐಷಾರಾಮಿ ವಿವಾಹವೊಂದು ನಡೆದಿದೆ. ಈ ನಿಕಾಹ್​​​ ಸಮಾರಂಭದಲ್ಲಿ ಯುವತಿಯ ಕುಟುಂಬ ವರನ ಕಡೆಯವರಿಗೆ ವರದಕ್ಷಿಣೆಯಾಗಿ 2 ಕೋಟಿ 56 ಲಕ್ಷ ರೂಪಾಯಿಯನ್ನು ನೀಡಿದೆ. ಸೂಟ್​ಕೇಸ್​ನಲ್ಲಿ ಹಣ ತಂದು ಹಂಚುವ ದೃಶ್ಯವನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ವರನಿಗೆ ಕೋಟ್ಯಂತರ ರೂಪಾಯಿ ವರದಕ್ಷಿಣೆ ಸಿಕ್ಕರೆ, ಮದುವೆ ನಡೆಸಿದ ಖಾಜಿಗೆ 11 ಲಕ್ಷ ರೂ. ಅಳಿಯನ ಪಾದರಕ್ಷೆ ಕದ್ದಿದ್ದಕ್ಕೆ ಸೊಸೆಗೆ 11 ಲಕ್ಷ ರೂಪಾಯಿ ಇದಲ್ಲದೇ ಎಂಟು ಲಕ್ಷ ರೂಪಾಯಿ ಹೆಚ್ಚಿಗೆ ನೀಡಲಾಗಿದೆ.

ವಿಡಿಯೋ ವೈರಲ್​ ಆದ ಬಳಿಕ ದೂರು ಇಲ್ಲದೆ ತನಿಖೆ ನಡೆಸಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ. ಮದುವೆ ಕುಟುಂಬದವರ ವೈಯಕ್ತಿಕ ವಿಚಾರ ಎನ್ನುತ್ತಾರೆ ಆಡಳಿತಾಧಿಕಾರಿಗಳು. ಯಾವುದೇ ಪಕ್ಷದಿಂದ ದೂರು ಬಂದರೆ ತನಿಖೆ ನಡೆಸಬಹುದು. ದೂರಿನ ಆಧಾರದ ಮೇಲೆ ಮಾತ್ರ ಕ್ರಮಕೈಗೊಳ್ಳಲು ಸಾಧ್ಯ ಎಂಬುದು ಅವರ ಅಭಿಪ್ರಾಯ. (ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net