ಕುಣಿಗಲ್​ ಗಿರಿ ಬಿಜೆಪಿಗೆ ಸೇರ್ಪಡೆ! 100ಕ್ಕೂ ಹೆಚ್ಚು ಅಪರಾಧ ಪ್ರಕರಣಗಳಲ್ಲಿ ಭಾಗಿಯಾದವನಿಗೆ ಮಣೆ?

kunigal giri
Published on

ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ರೌಡಿಗಳಿಗೆ ಮಣೆ ಹಾಕಲಾಗುತ್ತಿದೆ ಎಂಬ ಮಾತು ಒಂದು ವಾರದಿಂದ ರಾಜ್ಯದಲ್ಲಿ ಬಾರೀ ಚರ್ಚೆಯಾಗುತ್ತಿದೆ. ಬಿಜೆಪಿ ನಾಯಕರೊಂದಿಗೆ ರೌಡಿಶೀಟರ್​ಗಳು ವೇದಿಕೆ ಹಂಚಿಕೊಳ್ಳುತ್ತಿದ್ದಾರೆ. ರಾಜಕೀಯಕ್ಕೆ ಬರುವಂತೆ ಬಿಜೆಪಿ ರತ್ನಗಂಬಳಿ ಹಾಕಿದೆ... ಎಂದು ವಾಗ್ದಾಳಿ ನಡೆ​ಸುತ್ತಿರುವ ಕಾಂಗ್ರೆಸ್​, 60 ರೌಡಿಗಳು ಬಿಜೆಪಿಯಲ್ಲಿ ಇದ್ದಾರೆ ಎಂದು ಇಂದು(ಮಂಗಳವಾರ) ಹೆಸರು ಪ್ರಕಟಿಸಿದೆ. ಅದರಲ್ಲಿ ಕುಣಿಗಲ್​ ಗಿರಿ ಹೆಸರೂ ಇದೆ.

132ಕ್ಕೂ ಹೆಚ್ಚು ರಾಬರಿ ಪ್ರಕರಣಗಳಲ್ಲಿ ಭಾಗಿಯಾಗಿರೋ ಕುಣಿಗಲ್ ಗಿರಿ, ಕಳೆದ 13 ವರ್ಷದಲ್ಲಿ 7ವರ್ಷ ಜೈಲಿನಲ್ಲೇ ಕಾಲ ಕಳೆದಿದ್ದಾನೆ. 2011ರಿಂದ ಬೆಂಗಳೂರಿನ‌ ವಿವಿಧ ವಿಭಾಗಗಳಲ್ಲಿ ರಾಬರಿ ಕೇಸ್​ನಲ್ಲಿ ಕುಣಿಗಲ್​ ಗಿರಿ ಹೆಸರಿದೆ. ನೂರಕ್ಕೂ ಹೆಚ್ಚು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವುದಾಗಿ ಕುಣಿಗಲ್​ ಗಿರಿಯೇ ಈ ಹಿಂದೆ ಹೇಳಿಕೊಂಡಿದ್ದ.

ಕಳೆದ ಗ್ರಾಪಂ ಚುನಾವಣೆಯಲ್ಲಿ ತನ್ನ ಬೆಂಬಲಿಗರ ಪರವಾಗಿ ಪ್ರಚಾರದಲ್ಲಿ ಕುಣಿಗಲ್​ ಗಿರಿ ತೊಡಗಿದ್ದ. ಇದೀಗ ಬಿಜೆಪಿಗೆ ಸೇರ್ಪಡೆಯಾಗಿದ್ದಾನೆ ಎನ್ನಲಾಗಿದೆ.

ಸುದ್ದಿಗೋಷ್ಠಿ ನಡೆಸಿದ ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್, 60 ರೌಡಿಗಳು ಬಿಜೆಪಿ ಸೇರ್ಪಡೆ ಆಗ್ತಾರೆ ಎಂದು ಈ ಹಿಂದೆ ನಾನು ಹೇಳಿದ್ದೆ. ಈಗ ಸೈಲೆಂಟ್ ಸುನೀಲ್, ವಿಲ್ಸನ್ ಗಾರ್ಡನ್ ನಾಗ, ಪೈಟರ್ ರವಿ, ಬೆತ್ತನಗೆರೆ ಶಂಕರ, ಒಂಟೆ ರೋಹಿತ, ಕುಣಿಗಲ್ ಗಿರಿ, ಸೈತಾನ್ ರವಿ ಸೇರಿ 36 ರೌಡಿಗಳು ಬಿಜೆಪಿ ಸೇರ್ಪಡೆ ಆಗಿದ್ದಾರೆ ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net