ರೌಡಿ ಶೀಟರ್ ಜತೆ ಕಾಣಿಸಿಕೊಂಡ ಶಿವಾಜಿನಗರ ಶಾಸಕ! ಸಿಹಿ ತಿನ್ನಿಸಿ ಸಂಭ್ರಮಾಚರಣೆ…

rowdy sheeter
Published on

ಬೆಂಗಳೂರು: ಚುನಾವಣೆ ಸಂದರ್ಭದಲ್ಲಿ ನಿಮ್ಮದು ಗೂಂಡಾ ಸಂಸ್ಕೃತಿ, ನಮ್ಮದಲ್ಲ ಎಂದು ಬೇರೆ ಬೇರೆ ಪಕ್ಷದವರು ವಾಗ್ದಾಳಿ ನಡೆಸುತ್ತಿರುತ್ತಾರೆ. ಇದೀಗ ಶಿವಾಜಿನಗರದ ಶಾಸಕರಿಗೆ ರೌಡಿ ಶಿಟರ್ ಒಬ್ಬ ಸಿಹಿ ತಿನ್ನಿಸುತ್ತಿರುವ ಫೋಟೊ ಎಲ್ಲೆಡೆ ವೈರಲ್ ಆಗುತ್ತಿದೆ.

ಇಜ್ತಿಯಾಕ್ ಅಹಮದ್, ಶಿವಾಜಿನಗರ ರೌಡಿಶೀಟರ್ ಆಗಿದ್ದು 30ಕ್ಕೂ ಹೆಚ್ಚು ಕೇಸ್‌ಗಳು ಈತನ ಮೇಲಿವೆ. ಹೀಗಿದ್ದರೂ ಶಾಸಕ ರಿಜ್ವಾನ್ ಅರ್ಷದ್, ರೌಡಿ ಶೀಟರ್ ಜತೆ ಪೋಸ್ ಕೊಟ್ಟಿದ್ದಾರೆ. ಪೊಲೀಸರು ಚುನಾವಣೆಯ ಸಂದರ್ಭದಲ್ಲಿ ರೌಡಿಗಳನ್ನು ಮಟ್ಟಹಾಕುತ್ತೀವಿ ಎಂದಿದ್ದರು. ಆದರೆ, 30ಕ್ಕೂ ಹೆಚ್ಚು ಕೇಸ್ ಗಳನ್ನು ಹೊಂದಿರುವ ರೌಡಿ ಇದೀಗ ರಾಜಾರೋಷವಾಗಿ ಚುನಾವಣೆಯ ಪ್ರಚಾರದಲ್ಲಿ ಭಾಗಿಯಾಗಿದ್ದಾನೆ.

ಇದು ಪೊಲೀಸರ ದೌರ್ಬಲ್ಯವೋ ಅಥವಾ ರಾಜಕಾರಣಿಗಳ ಆಟವೋ ಎಂಬ ಪ್ರಶ್ನೆ ಎದ್ದಿದೆ. ಸದ್ಯ ಈ ಒಂದು ಫೋಟೋ ಫುಲ್ ವೈರಲ್ ಆಗಿದೆ ಎಂದೇ ಹೇಳಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net