More

    ಕೂದಲು ಉದುರುವಿಕೆ, ಬಿಳಿ ಕೂದಲಿನ ಸಮಸ್ಯೆಗೆ ಇಲ್ಲಿವೆ 5 ಆಯುರ್ವೇದ ಪರಿಹಾರಗಳು…!

    ಬೆಂಗಳೂರು: ಪ್ರತಿ ಆರೋಗ್ಯ ಸಮಸ್ಯೆಗೂ ಆಯುರ್ವೇದದಲ್ಲಿ ಪರಿಹಾರ ಇದ್ದೇ ಇದೆ. ಸಾವಿರಾರು ಗಿಡ ಮೂಲಿಕೆಗಳು ಪರಿಸರದಲ್ಲಿ ಲಭ್ಯವಿದೆ. ನಮ್ಮ ಭಾರತೀಯ ಆರೋಗ್ಯ ಶಾಸ್ತ್ರದಲ್ಲಿ ಹಲವಾರು ಸಮಸ್ಯೆಗಳಿಗೆ ಪರಿಹಾರವಿದೆ. ಇತ್ತೀಚೆಗೆ ಕೂದಲಿಗೆ ಸಂಬಂಧಿಸಿದ ತೊಂದರೆಗಳನ್ನು ಎದರಿಸುತ್ತಿದ್ದಾರೆ. ಕೂದಲು ಉದರುವಿಕೆ ಮತ್ತು ಬಿಳಿ ಕೂದಲಿನ ಸಮಸ್ಯೆ ಸಾಮಾನ್ಯವಾಗಿ ಹೋಗಿದೆ. ಆಯುರ್ವೆದ ತಜ್ಱರ ಪ್ರಕಾರ 5 ಗಿಡ ಮೂಲಿಕೆಗಳು ಕೂದಲು ಉದುರುವಿಕೆ ಮತ್ತು ಬಿಳಿ ಕೂದಲಿನ ಸಮಸ್ಯೆಯನ್ನು ತಡೆಯಲು ಬಹಳ ಪರಿಣಾಮಕಾರಿ ಎಂದು ಹೇಳುತ್ತಾರೆ. ಆ ಗಿಡ ಮೂಲಿಕೆಗಳನ್ನು ಕೆಳಗೆ ಪಟ್ಟಿ ಮಾಡಲಾಗಿದೆ.

    1) ನೆಲ್ಲಿಕಾಯಿ
    ನೆಲ್ಲಿಕಾಯಿ ಕೂದಲಿನ ಆರೋಗ್ಯಕ್ಕಾಗಿ ಪರಿಣಾಮಕಾರಿ. ಹೊಟ್ಟನ್ನು ತಡೆಗಟ್ಟಿ, ಬಿಳಿ ಕೂದಲು ಬಾರದಂತೆ ನೆಲ್ಲಿಕಾಯಿ ಮಾಡುತ್ತದೆ. ನೆತ್ತಿಯಲ್ಲಿ ರಕ್ತ ಚಲನೆಯನ್ನು ಹೆಚ್ಚು ಮಾಡಿ ಕೂದಲು ಬೆಳೆಯಲು ಸಹಾಯ ಮಾಡುತ್ತದೆ. ಇದನ್ನು ಪುಡಿ, ಮಾತ್ರೆ, ಜ್ಯೂಸ್​ ಅಥವಾ ನೇರವಾಗಿ ಕೂಡ ಸೇವಿಸಬಹುದು.

    2) ಮೊರಿಂಗಾ
    ಮೊರಿಂಗಾ ಎಲೆಗಳಲ್ಲಿ ಕಬ್ಬಿಣ, ವಿಟಮಿನ್​ ಎ, ಸಿ ಮತ್ತು ಮ್ಯಾಗ್ನೀಷಿಯಂ ಮುಂತಾದ ಕೂದಲಿನ ಆರೋಗ್ಯಕ್ಕೆ ಬೇಕಾದ ಅಂಶಗಳನ್ನು ಹೆಚ್ಚಾಗಿ ಹೊಂದಿದೆ. ಇದನ್ನು ಪುಡಿ ಮಾಡಿ ಸಾಂಬಾರ್, ಜ್ಯೂಸ್​ ಮತ್ತು ರೋಟಿಯಲ್ಲಿ ಸೇರಿಸಿ ಸೇವಿಸಬಹುದು.

    3) ತೆಂಗಿನ ಕಾಯಿ
    ತೆಂಗಿನ ಎಣ್ಣೆಯನ್ನು ಅಡುಗೆಯಲ್ಲಿ ಬಳಸಬಹುದು. ಹಸಿ ಕೊಬ್ಬರಿಯನ್ನು ಹತ್ತಾರು ತಿಂಡಿಗಳಲ್ಲಿ ಉಪಯೋಗಿಸಬಹುದು. ತೆಂಗಿನ ನೀರನ್ನು ಕುಡಿಯಬಹುದು. ಬಹಳ ರುಚಿಕಾರವಾಗಿರುತ್ತದೆ. ಇದರೊಂದಿಗೆ ಬಹಳ ಆರೋಗ್ಯಕರ ಮತ್ತು ಕೂದಲನ್ನು ಹೈಡ್ರೇಟ್​​ ಆಗಿಡಲು ಸಹಾಯ ಮಾಡುತ್ತದೆ.

    ಇದನ್ನೂ ಓದಿ: ದಿನನಿತ್ಯದ ಸಮಸ್ಯೆಗಳನ್ನು ಬಗೆಹರಿಸಲು ಇಲ್ಲಿವೆ 5 ಟೆಕ್​ ಹ್ಯಾಕ್ಸ್​​!

    4) ಕರಿಬೇವಿನ ಸೊಪ್ಪು
    ಕರಿಬೇವಿನ ಸೊಪ್ಪು ಕೂದಲು ಉದುರುವುದನ್ನು ಮತ್ತು ಬಿಳಿ ಕೂದಲಾಗದಂತೆ ತಡೆಯುತ್ತದೆ. ಇದರೊಂದಿಗೆ ಕೂದಲಿನ ಗುಣಮಟ್ಟವನ್ನು ಹೆಚ್ಚಿಸುತ್ತದೆ. ಇದನ್ನು ಒಣಗಿಸಿ ಪುಡಿ ಮಾಡಿ ಟೀ ಮಾಡಿಕೊಂಡು ಕುಡಿಯಬಹುದು. ಚೆಟ್ನಿ ಮಾಡಿಕೊಂಡು ಕೂಡ ಸೇವಿಸಬಹುದು. ಇದನ್ನು ದಿನನಿತ್ಯದ ಆಹಾರದಲ್ಲಿ ಬಳಸಲೇಬೇಕು.

    5) ಭೃಂಗರಾಜ್​
    ಭೃಂಗರಾಜ್​ ಅನ್ನು ಕೇಶರಾಜ್ ಎಂದು ಕರೆಯುತ್ತಾರೆ. ಕೂದಲಿನ ಆರೋಗ್ಯಕ್ಕೆ ಬಳಸುವ ಗಿಡಮೂಲಿಕೆಗಳಲ್ಲಿ ಇದನ್ನು ಅತ್ಯುತ್ತಮವೆಂದು ಪರಿಗಣಿಸಲಾಗಿದೆ. ಇದು ಆರೋಗ್ಯಕರ ಕೂದಲ ಬೆಳವಣಿಗೆಯನ್ನು ಪ್ರೇರೇಪಿಸುತ್ತದೆ. ಇದರೊಂದಿಗೆ ಕೂದಲನ್ನು ಬಲವಾಗಿ ಮತ್ತು ನಯವಾಗಿ ಮಾಡುತ್ತದೆ. ಇದನ್ನು ಕೂದಲಿನ ಎಣ್ಣೆಗೆ ಸೇರಿಸಬಹುದು ಅಥವಾ ನೇರವಾಗಿ ಕೂಡ ಸೇವಿಸಬಹುದು. (ಏಜೆನ್ಸೀಸ್​)

    ಹೊಸದಾಗಿ ಬೈಕ್​ ಓಡಿಸುವವರಿಗೆ 3 ರೈಡಿಂಗ್​ ಟಿಪ್ಸ್​​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts