ರೌಡಿ ಶೀಟರ್​ ಬರ್ಬರ ಹತ್ಯೆ; ಬೇರೆಲ್ಲೋ ಕೊಲೆ ಮಾಡಿ ಶವ ತಂದು ಬಿಸಾಕಿರುವ ಶಂಕೆ

Murder 21 April 20
Published on

ಬೆಂಗಳೂರು: ಲಾಕ್​ಡೌನ್​ ಮಧ್ಯೆ ಕಳ್ಳತನ, ಕೊಲೆಯಂತಹ ಅಪರಾಧಗಳು ನಡೆಯುತ್ತಲೇ ಇವೆ. ಇಂದು ಸಿಲಿಕಾನ್​ ಸಿಟಿಯಲ್ಲಿ ರೌಡಿ ಶೀಟರ್​ ಓರ್ವನ ಬರ್ಬರ ಹತ್ಯೆಯಾಗಿದ್ದು ಅದಕ್ಕೆ ಸಾಕ್ಷಿ.

ಹೆಸರಘಟ್ಟ ಬಳಿಯ ಮಕ್ತೂರಿನಲ್ಲಿ ಘಟನೆ ನಡೆದಿದ್ದು, ಪ್ರಕಾಶ್​ ಅಲಿಯಾಸ್​ ಲೂಸ್​ ಎಂಬಾತ ಕೊಲೆಯಾದ ರೌಡಿ ಶೀಟರ್​.

ಪ್ರಕಾಶ್​ ಎದೆಗೆ ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿದೆ. ಆದರೆ ಬೇರೆಲ್ಲೋ ಕೊಲೆ ಮಾಡಿ ಶವವನ್ನು ಇಲ್ಲಿ ತಂದು ಬಿಸಾಕಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.

ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net