ಕರೊನಾ ರೋಗಿಗಳ ಕ್ವಾರಂಟೈನ್​ ಕೇಂದ್ರವಾಗಿದ್ದ ಮೂರಂತಸ್ತಿನ ಹೋಟೆಲ್​ ಕಟ್ಟಡಕ್ಕೆ ಬೆಂಕಿ...

Fire 21 April 20
Published on

ಮುಂಬೈ: ನಗರದ ಮೂರು ಅಂತಸ್ತಿನ ಹೋಟೆಲ್​ವೊಂದರಲ್ಲಿ ಬೆಂಕಿ ಕಾಣಿಸಿಕೊಂಡು ಆತಂಕ ಸೃಷ್ಟಿಸಿದೆ. ದಕ್ಷಿಣ ಮುಂಬೈನ ನಾಗಪದದಲ್ಲಿರುವ ರಿಪ್ಪನ್​ ಹೋಟೆಲ್​ನಲ್ಲಿ ದುರ್ಘಟನೆ ನಡೆದಿದೆ. ಈ ಹೊಟೆಲ್​​ನ್ನು ಕರೊನಾ ರೋಗಿಗಳ ಕ್ವಾರಂಟೈನ್​ ಕೇಂದ್ರವಾಗಿ ಬಳಸಿಕೊಳ್ಳಲಾಗುತ್ತಿದೆ.

ಅಗ್ನಿಶಾಮಕದಳದ ಎರಡು ತಂಡಗಳು ಸ್ಥಳದಲ್ಲಿದ್ದು, ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿವೆ. ಹೋಟೆಲ್​ನ ಲಾಡ್ಜಿಂಗ್​ ರೂಂನಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿದ್ದು, ಹೆಚ್ಚಿನ ಅಪಾಯ ಆಗಲಿಲ್ಲ. ಆದರೂ ಸ್ಥಳದಲ್ಲಿ ಹೆಚ್ಚಿನ ಆಂತಕ ಸೃಷ್ಟಿಯಾಗಿದೆ.

ಹಾಗೇ ಕರೊನಾ ಸೋಂಕಿತ ರೋಗಿಗಳನ್ನು ಸುರಕ್ಷಿತವಾಗಿ ಸ್ಥಳಾಂತರ ಮಾಡಲಾಗಿದೆ. ಯಾರಾದರೂ ನಾಪತ್ತೆಯಾಗಿದ್ದಾರಾ ಎಂದು ಪರಿಶೀಲನೆ ನಡೆಸಲಾಗುತ್ತಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net