ಪುಂಡ ಕೋತಿ ಸೆರೆ ಹಿಡಿಯಲು ನಗರಸಭೆ ಅರಣ್ಯ ಇಲಾಖೆ ನಡುವೆ ವ್ಯಾಪ್ತಿ ಚರ್ಚೆ; ಕೋತಿಯಿಂದ ಜನರಿಗೆ ಗಂಭೀರ ಗಾಯ…

adf
Published on

ವಿಜಯನಗರ: ಹೊಸಪೇಟೆಯಲ್ಲಿ ಒಂಟಿ ಕೋತಿಯ ರೌಡಿಸಂ ಮಿತಿ ಮೀರುತ್ತಿದ್ದು ಕಂಡ ಕಂಡ ಮನೆಗೆ ನುಗ್ಗಿ ಸಿಕ್ಕಿದ್ದನ್ನ ಹೊತ್ತೊಯ್ಯುತ್ತಿದೆ. ಅದರ ಮನಸ್ಸಿಗೆ ಬಂದದ್ದನ್ನು ಮಾಡುವುದನ್ನು ತಡೆಯಲು ಹೋದರೆ ಕಚ್ಚಿ ಬಿಡುತ್ತಿದೆ.

ದೊಡ್ಡವರು, ಚಿಕ್ಕವರು ಮಕ್ಕಳ ನಡುವಿನ ವ್ಯತ್ಯಾಸ ನೋಡದೇ ಈ ಕೆಂಪು ಕೋತಿ ಕಂಡವರನ್ನು ಕಚ್ಚುತ್ತಿದ್ದು ಒಟ್ಟಿನಲ್ಲಿ ಕೋತಿ ಕಾಟಕ್ಕೆ ನಗರದ ಜನರು ಸುಸ್ತಾಗಿದ್ದಾರೆ.

ಒಂದೂವರೆ ತಿಂಗಳಲ್ಲಿ ಮೂವತ್ತೈದಕ್ಕೂ ಅಧಿಕ ಜನರಿಗೆ ಕೆಂಪು ಕೋತಿ ಕಚ್ಚಿ ಹಲ್ಲೆ ಮಾಡಿದ್ದು ತಲೆ, ಮುಖ, ಕಾಲು ಸೇರಿ ಸಿಕ್ಕ, ಸಿಕ್ಕ ಕಡೆಗೆ ಕೆಂಪು ಕೋತಿ ಕಚ್ಚುತ್ತಿದೆ.

ಈ ಬಗ್ಗ ಅರಣ್ಯ ಇಲಾಳೆ ಬಳಿ "ಕೋತಿ ಕಾಟ ತಪ್ಪಿಸಿ" ಎಂದು ಕೇಳಿದರೆ ಅರಣ್ಯ ಇಲಾಖೆಯ ಅಧಿಕಾರಿಗಳು ಸಬೂಬು ಹೇಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಅವರು, ಕರಿ ಮುಖದ ಕೋತಿ ಅರಣ್ಯ ಇಲಾಖೆ ವ್ಯಾಪ್ತಿಗೆ ಬರುತ್ತದೆ ಮತ್ತು ಕೆಂಪು ಮುಖದ ಕೋತಿ ನಗರಸಭೆ ವ್ಯಾಪ್ತಿಗೆ ಬರುತ್ತದೆ" ಎನ್ನುತ್ತಿದ್ದಾರೆ. ಈ ಬಗ್ಗೆ ಸಂತೋಷ್ ಎಂಬುವವರು ದಿಗ್ವಿಜಯ ನ್ಯೂಸ್ ಬಳಿ ಮಾತನಾಡಿದ್ದಾರೆ. 

ಇದೀಗ ಸ್ಥಳಿಯರು ಗಾಯಗೊಂಡ ವ್ಯಕ್ತಿಯ ಸಂಪೂರ್ಣ ಖರ್ಚನ್ನು ಸರ್ಕಾರ ಭರೀಸಬೇಕು ಎಂದು ಸರ್ಕಾರ, ಅರಣ್ಯ ಇಲಾಖೆ ಹಾಗೂ ನಗರಸಭೆ ಬಳಿ ಆಗ್ರಹಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net