ರೋಗ ನಿಯಂತ್ರಿಸಲು ಜಾಗೃತಿ ಅಗತ್ಯ

bhr dengue
ಬಾಳೆಹೊನ್ನೂರಿನ ಎಸ್‌ಜೆಆರ್ ಕಾಲೇಜಿನಲ್ಲಿ ಏರ್ಪಡಿಸಿದ್ದ ಡೆಂೆ ಮಾಹಿತಿ ಕಾರ್ಯಾಗಾರದಲ್ಲಿ ಡಾ. ಪ್ರವೀಣ್ ಮಾತನಾಡಿದರು. ಸಿ.ಪಿ.ರಮೇಶ್, ಭಗವಾನ್, ಕೆ.ಆರ್.ಬೂದೇಶ್ ಇದ್ದರು.
Published on

ಬಾಳೆಹೊನ್ನೂರು: ಡೆಂೆ ರೋಗ ಕುರಿತು ಪ್ರತಿಯೊಬ್ಬರೂ ಜಾಗೃತಿ ಹೊಂದುವುದು ಅಗತ್ಯವಾಗಿದೆ ಎಂದು ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಪ್ರವೀಣ್ ಹೇಳಿದರು.
ಎಸ್‌ಜೆಆರ್ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ರೋಟರಿ ಕ್ಲಬ್ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ಡೆಂೆ ಜಾಗೃತಿ ಶಿಬಿರದಲ್ಲಿ ಮಾತನಾಡಿದರು.
ಡೆಂೆ ಕುರಿತು ಭಯ ಹೊಂದದೆ ಎಚ್ಚರಿಕೆಯ ಕ್ರಮ ಅನುಸರಿಸಬೇಕು. ರೋಗದ ಲಕ್ಷಣಗಳು ಕಂಡುಬಂದಲ್ಲಿ ಸ್ಥಳೀಯ ಆರೋಗ್ಯ ಕೇಂದ್ರದಲ್ಲಿ ಸೂಕ್ತ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದರು.
ರೋಟರಿ ಕ್ಲಬ್ ಅಧ್ಯಕ್ಷ ಸಿ.ಪಿ.ರಮೇಶ್ ಮಾತನಾಡಿ, ಡೆಂೆ ಕುರಿತು ಮನೆ ಮನೆಗೆ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು. ಆರೋಗ್ಯ ನಿರೀಕ್ಷಕ ಭಗವಾನ್ ಮಾತನಾಡಿ, ಡೆಂೆ ತಡೆಗಟ್ಟಲು ಸುತ್ತಮುತ್ತಲಿನ ಜಾಗದಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಪ್ರಾಚಾರ್ಯ ಕೆ.ಆರ್.ಬೂದೇಶ ಮಾತನಾಡಿ, ಡೆಂೆ ಜ್ವರ ಬಂದಿರುವುದು ತಕ್ಷಣ ತಿಳಿಯುವುದಿಲ್ಲ. ನಾವೇ ಡಾಕ್ಟರ್ ಆಗಿ ಮಾತ್ರೆಯನ್ನು ತೆಗೆದುಕೊಳ್ಳದೆ ಸ್ಥಳೀಯ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರ ಸಲಹೆ ಪಡೆದು ಮುನ್ನೆಚ್ಚರಿಕೆ ಕ್ರಮವನ್ನು ಅನುಸರಿಸಬೇಕು ಎಂದರು.
ರೋಟರಿ ಕಾರ್ಯದರ್ಶಿ ಸಾಗರ್, ಸದಸ್ಯ ವೆಂಕಟೇಶ್ ಭಟ್, ಶಿಕ್ಷಕ ಕುಮಾರ್ ಚಂದ್ರನಾಯಕ್, ಪ್ರಾಧ್ಯಾಪಕ ಪ್ರಶಾಂತ್‌ಕುಮಾರ್, ರಾಕೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net