VIDEO| ಬಿಗ್​ ಬಾಸ್​ಗೆ​ ಹೋಗೋದು ವೇಸ್ಟ್​? ಇದಕ್ಕೆ ರೂಪೇಶ್ ಶೆಟ್ಟಿ ಕೊಟ್ರು ಖಡಕ್​ ಉತ್ತರ!

ವಿಜಯವಾಣಿ - 2024-01-13T184613.329
Published on

ಬೆಂಗಳೂರು: ಬಿಗ್​ ಬಾಸ್​ ಕನ್ನಡದ ಮೊದಲ ಒಟಿಟಿ ಸೀಸನ್​ 01ರ ಹಾಗೂ ಸೀಸನ್​ 09ರ ವಿಜೇತರಾದ, ತುಳು ಹಾಗೂ ಕನ್ನಡ ಚಿತ್ರರಂಗದ ನಟ ರೂಪೇಶ್ ಶೆಟ್ಟಿ ಇತ್ತೀಚೆಗೆ ವಿಜಯವಾಣಿ ನಡೆಸಿದ ಸಂದರ್ಶನದಲ್ಲಿ ಮನಬಿಚ್ಚಿ ಮಾತನಾಡಿದ್ದು, ತಮ್ಮ ಮುಂಬರುವ ಕೆಲಸ ಸೇರಿದಂತೆ ಬಿಗ್ ಬಾಸ್​ಗೆ ಹೋಗುವ ಮುನ್ನ ಮತ್ತು ಹೋಗಿ ಬಂದ ಬಳಿಕ ಆದ ಬದಲಾವಣೆಯನ್ನು ಹಂಚಿಕೊಂಡಿದ್ದಾರೆ.

"ಬಿಗ್ ಬಾಸ್​ ಮನೆಯಲ್ಲಿದ್ದ ರೂಪೇಶ್ ರಾಜಣ್ಣ ಮತ್ತು ಆರ್ಯವರ್ಧನ್​ ಗುರೂಜಿ ಅವರೊಂದಿಗೆ ಇಂದಿಗೂ ಉತ್ತಮ ಸಂಬಂಧವಿದೆ. ಆಗಾಗ್ಗೆ ದೂರವಾಣಿ ಕರೆ ಮಾಡಿ ಮಾತಾಡ್ತೀನಿ. ಆದ್ರೆ, ನಿಜ ಹೇಳಬೇಕಂದರೆ ನಾವ್ಯಾರು ಖುದ್ದಾಗಿ ಭೇಟಿಯೇ ಮಾಡಿಲ್ಲ. ಮೂರು ಜನ ಇಲ್ಲಿಯವರೆಗೆ ಸಿಕ್ಕಿಲ್ಲ, ಆ ರೀತಿ ನಡೆಯಲು ಸಮಯ ಕೂಡಿಬಂದಿಲ್ಲ. ಅದಕ್ಕೆ ಕಾರಣ ಬೇರೇನೂ ಇಲ್ಲ! ಕೆಲಸದ ಒತ್ತಡದಿಂದ ಸಿಗಲು ಆಗುತ್ತಿಲ್ಲ ಅಷ್ಟೇ" ಎಂದು ಹೇಳಿದರು.

ಇನ್ನು ಬಿಗ್ ಬಾಸ್​ಗೆ ಹೋಗುವುದು ಸಮಯ ವ್ಯರ್ಥ, ವೇಸ್ಟ್​, ನಮ್ಮ ಕೆಲಸಗಳೆಲ್ಲಾ ಹಾಳು ಎಂದು ಆರ್ಯವರ್ಧನ್​ ಗುರೂಜಿ ಇತ್ತೀಚಿನ ಸಂದರ್ಶನಗಳಲ್ಲಿ ಹೇಳಿಕೆ ಕೊಡುತ್ತಿದ್ದಾರೆ. ನಿಮ್ಮ ಪ್ರಕಾರ ಬಿಗ್ ಬಾಸ್​ ಹೋಗುವುದು ವೇಸ್ಟಾ? ಎಂಬ ಪ್ರಶ್ನೆಗೆ ರೂಪೇಶ್​ ಕೊಟ್ಟ ಉತ್ತರ ತಿಳಿಯಲು ಈ ಕೆಳಗಿನ ಸಂದರ್ಶನ ವಿಡಿಯೋ ವೀಕ್ಷಿಸಿ...

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net