

ಬೆಳಗಾವಿ: ಮನೆಯಲ್ಲಿ ಅಡುಗೆ ತಯಾರಿಸುತ್ತಿದ್ದಾಗಲೇ ಚಾವಣಿ ಕುಸಿದು ಬಿದ್ದು, ಮಹಿಳೆಯೊಬ್ಬಳು ಮಣ್ಣಿನಡಿ ಸಿಲುಕಿದ ಪ್ರಕರಣವೊಂದು ನಡೆಯುತ್ತಿದೆ. ಬೆಳಗಾವಿ ಜಿಲ್ಲೆಯಲ್ಲಿ ಈ ದುರ್ಘಟನೆ ನಡೆದಿದೆ.
ಕಾಳವ್ವ ಬಡಿಗೇರ (35) ಮಣ್ಣಿನಡಿ ಸಿಲುಕಿದ ಮಹಿಳೆ. ಬೆಳಗಾವಿ ಜಿಲ್ಲೆ ಕಿತ್ತೂರು ತಾಲೂಕಿನ ಎಂ.ಕೆ.ಹುಬ್ಬಳ್ಳಿಯಲ್ಲಿ ಈ ಘಟನೆ ನಡೆದಿದೆ. ಮನೆಯಲ್ಲಿ ಅಡುಗೆ ತಯಾರಿಸುತ್ತಿದ್ದ ವೇಳೆ ಏಕಾಏಕಿ ಮೇಲ್ಚಾವಣಿ ಕುಸಿದು ಅವಘಡ ಸಂಭವಿಸಿದ್ದು, ಈಕೆ ಮಣ್ಣಿನಡಿ ಸಿಲುಕಿ ಪರದಾಟ ನಡೆಸಿದ್ದಾರೆ.
ಒಂದು ಗಂಟೆ ಕಾಲ ಮಣ್ಣಿನಡಿ ಸಿಲುಕಿ ಸಂಕಷ್ಟ ಅನುಭವಿಸಿದ್ದ ಈಕೆಯನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಆದರೆ ತೀವ್ರ ಬಡತನದಲ್ಲಿರುವ ಈಕೆಗೆ ಸದ್ಯ ಚಿಕಿತ್ಸೆಗೂ ಹಣವಿಲ್ಲ ಎಂದು ಹೇಳಲಾಗುತ್ತಿದೆ.