More

    ಕಾಂತಾರ: ಶುಕ್ರವಾರಕ್ಕೂ ಭಾನುವಾರಕ್ಕೂ ಅಜಗಜಾಂತರ; ಭರ್ಜರಿ ರೆಸ್ಪಾನ್ಸ್ ಬಗ್ಗೆ ಇಲ್ಲಿದೆ ಅಧಿಕೃತ ಮಾಹಿತಿ

    ಬೆಂಗಳೂರು: ಹೊಂಬಾಳೆ ಫಿಲ್ಸ್ಮ್​ನ ನಿರ್ಮಾಣ ಹಾಗೂ ನಟ ರಿಷಬ್​ ಶೆಟ್ಟಿ ನಿರ್ದೇಶನದ ಭರ್ಜರಿ ಕಾಂಬಿನೇಷನ್​ನಲ್ಲಿ ಬಿಡುಗಡೆ ಆಗಿರುವ ‘ಕಾಂತಾರ’ ಸಿನಿಮಾಗೆ ಬಿಡುಗಡೆಯಂದೇ ಭಾರಿ ಪ್ರತಿಕ್ರಿಯೆ ಸಿಕ್ಕಿರುವುದು ಗೊತ್ತಿರುವಂಥದ್ದೇ. ಇದೀಗ ಈ ಸಿನಿಮಾಗೆ ಸಿಕ್ಕ ಭರ್ಜರಿ ರೆಸ್ಪಾನ್ಸ್​ ಬಗ್ಗೆ ಅಧಿಕೃತ ಮಾಹಿತಿಯೊಂದು ಹೊರಬಿದ್ದಿದೆ.

    ಶುಕ್ರವಾರ ಜಗತ್ತಿನಲ್ಲೆಡೆ ಬರೀ ಕನ್ನಡದಲ್ಲೇ ಬಿಡುಗಡೆ ಆಗಿರುವ ಈ ಚಿತ್ರಕ್ಕೆ ಸಿಕ್ಕ ಪ್ರತಿಕ್ರಿಯೆ ಅದ್ಭುತ ಎಂದೇ ಹೇಳಲಾಗುತ್ತಿದೆ. ಸಿನಿಮಾ ನೋಡಿದ ಪ್ರತಿಯೊಬ್ಬರೂ ಈ ಚಿತ್ರದ ಕುರಿತು ಮೆಚ್ಚುಗೆಯ ಮಾತುಗಳನ್ನೇ ಆಡಿದ್ದು, ಸೋಷಿಯಲ್​ ಮೀಡಿಯಾಗಳಲ್ಲೂ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡು ಸಿನಿಮಾಗೆ ಬೆಂಬಲ ಸೂಚಿಸಿದ್ದಾರೆ.

    ಬಿಡುಗಡೆ ಆದ ದಿನದಿಂದ ಇದಕ್ಕೆ ಸಿಕ್ಕಿರುವ ಸ್ಪಂದನೆಯಿಂದ ಎಲ್ಲೆಡೆ ಶೋಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಬಹಳಷ್ಟು ಕಡೆ ಟಿಕೆಟ್ ಸಿಗದಷ್ಟು ಬೇಡಿಕೆ ಉಂಟಾಗಿದೆ. ಶುಕ್ರವಾರ, ಶನಿವಾರ ಬಹುತೇಕ ಎಲ್ಲೆಡೆ ಹೌಸ್​ಫುಲ್ ಪ್ರದರ್ಶನವನ್ನೇ ಕಾಣುತ್ತಿರುವ ಕಾಂತಾರ ಚಿತ್ರದ ಕುರಿತು ಹೊಂಬಾಳೆ ಫಿಲ್ಮ್ಸ್​ ಇದೀಗ ಮಾಹಿತಿಯೊಂದನ್ನು ಹಂಚಿಕೊಂಡಿದೆ. ಸಿನಿಮಾಗೆ ಸಿಕ್ಕ ಸ್ಪಂದನೆ ಕುರಿತು ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ, ಸಿನಿಮಾಗೆ ಸಿಕ್ಕ ಸ್ಪಂದನೆಯನ್ನು ಪರ್ಸೆಂಟೇಜ್ ಲೆಕ್ಕದಲ್ಲಿ ಹೇಳಿಕೊಂಡಿದ್ದಾರೆ.

    ಒಂದು ಚಿತ್ರಕ್ಕೆ ಆರಂಭದ ದಿನ ದೊಡ್ಡ ಮಟ್ಟದ ಸ್ಪಂದನೆ ಸಿಗುತ್ತದೆ. ಅಂದು ಅತ್ಯಧಿಕ ಪರದೆಗಳಲ್ಲಿ ಚಿತ್ರ ಪ್ರದರ್ಶನಗೊಳ್ಳುವುದಷ್ಟೇ ಅಲ್ಲದೆ, ಬಹುತೇಕ ಹೌಸ್​​ಫುಲ್​ ಆಗಿಯೇ ಇರುತ್ತದೆ. ‘ಕಾಂತಾರ’ದ ವಿಚಾರದಲ್ಲೂ ಆರಂಭದ ದಿನವೇ ಭರ್ಜರಿ ಸ್ಪಂದನೆ ಸಿಕ್ಕಿದೆ. ಅದು ಶನಿವಾರ ಇನ್ನಷ್ಟು ಹೆಚ್ಚಾಗಿದೆ. ಭಾನುವಾರ ಇನ್ನೂ ಅಧಿಕ ಅಂದರೆ ಶುಕ್ರವಾರಕ್ಕೆ ಹೋಲಿಸಿದರೆ ಶೇ. 350ರಷ್ಟು ಹೆಚ್ಚಾಗಿದೆ ಎಂಬುದಾಗಿ ಕಾರ್ತಿಕ್ ಹೇಳಿಕೊಂಡಿದ್ದಾರೆ.

    ರಾಮಜನ್ಮಭೂಮಿಯಲ್ಲಿ ಸಿದ್ಧಗೊಂಡಿದೆ ಮತ್ತೊಂದು ಮಾಸ್ಟರ್​ ಪ್ಲ್ಯಾನ್​; ಉಳಿದ ಜಾಗದಲ್ಲಿ ಆಗಲಿರುವುದೇನು?

    ‘ಎಲ್ರೂ ನನ್ನ ಶವ ನೋಡಲು ಬನ್ನಿ, ಇಲ್ಲಂದ್ರೆ ದೆವ್ವ ಆಗಿ ಬರ್ತೀನಿ’; ಡೆತ್​ನೋಟ್​ನಲ್ಲಿತ್ತು ಈ ಕೊನೇ ಆಸೆ

    ಗಾಂಜಾ ಮತ್ತಿನಲ್ಲಿದ್ದವನ ಕನಸಿಗೆ ಬಂದ ದೇವರು; ಆಮೇಲಾಗಿದ್ದೇ ಭೀಕರ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts