ದರೋಡೆಗೆ ಹೊಂಚು ಹಾಕಿದ್ದವರ ಸೆರೆ

Published on

ಚಿಂತಾಮಣಿ: ದರೋಡೆಗೆ ಹೊಂಚು ಹಾಕಿದ್ದವರನ್ನು ನಗರಠಾಣೆ ಪೊಲೀಸರು ಶುಕ್ರವಾರ ರಾತ್ರಿ ಶ್ರೀರಾಮನಗರದ ರಾಮುಕುಂಟೆ ಬಳಿ ಬಂಧಿಸಿದ್ದಾರೆ. ಶಿಡ್ಲಘಟ್ಟ ತಾಲೂಕು ಬಾಳೇಗೌಡನಹಳ್ಳಿಯ ಹಕ್ಕಿಪಿಕ್ಕಿ ಜನಾಂಗದ ದೀಪು (30), ಸಲ್ಮಾನ್​ ನಾಯಕ್​(22 ), ಶಾರುಖಾನ್​(27), ಮಿಟ್ಟೇಮರಿ ಗ್ರಾಮದ ಶ್ರೀಮೂರ್ತಿ (48) ಬಂಧಿತರು. ತುರುಣ (24) ಎಂಬಾತ ಪರಾರಿಯಾಗಿದ್ದು, ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಆರೋಪಿಗಳಿಂದ 1 ಚಾಕು, 2 ಬಿದರಿನ ದೊಣ್ಣೆ, ಕಾರದ ಪುಡಿ ಹಾಗೂ ಒಂದು ಮೊಬೈಲ್​ ವಶಪಡಿಸಿಕೊಳ್ಳಲಾಗಿದೆ. ಬಂಧಿತರು ಬೆಳಗಿನ ಜಾವ ಮಾರಕಾಸ್ತ್ರಗಳೊಂದಿಗೆ ಹೊಂಚು ಹಾಕಿದ್ದ ಮಾಹಿತಿ ಹಿನ್ನೆಲೆ ನಗರಠಾಣೆ ಪೊಲೀಸ್​ ಇನ್​ಸ್ಪೆಕ್ಟರ್​ ವೀಜಿಕುಮಾರ್​ ಮಾರ್ಗದರ್ಶನದಲ್ಲಿ ಪಿಎಸ್​ಐ ಪ್ರಕಾಶ್​ ಮತ್ತು ಸಿಬ್ಬಂದಿ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net