ತೃತೀಯಲಿಂಗಿಯಿಂದ ಮಸಾಜ್ ಮಾಡಿಸುವ ಚಟಕ್ಕೆ ಬಿದ್ದ ಹುಕ್ಕಾ ಬಾರ್ ಓನರ್​ನ ಅಸಲಿಯತ್ತು ಮಾತ್ರ ಬೇರೆ!

ಆರೋಪಿಗಳು
Published on

ಬೆಂಗಳೂರು: ತೃತೀಯ ಲಿಂಗಿಗಳು ನಡೆಸುತ್ತಿದ್ದ ಮಸಾಜ್ ಪಾರ್ಲರ್​​ಗೆ ಗ್ರಾಹಕರ ಸೋಗಿನಲ್ಲಿ ಬಂದು ಕಳವು ಮಾಡಿದ್ದ ಇಬ್ಬರು ಆರೋಪಿಗಳನ್ನು ಆಡುಗೋಡಿ ಪೊಲೀಸರು ಬಂಧಿಸಿದ್ದಾರೆ. ಶಿವ ಹಾಗೂ ಸಮೀರ್ ಬಂಧಿತ ಆರೋಪಿಗಳು.

ಮಂಗಳಮುಖಿ ಹೊಟ್ಟೆಪಾಡಿಗಾಗಿ ಬ್ಯೂಟಿಷಿಯನ್​ ಕೆಲಸದ ಜತೆಗೆ, ಬಿಡುವಿನ ಸಮಯದಲ್ಲಿ ಬಾಡಿ ಮಸಾಜ್​ ಸರ್ವೀಸ್​ ಕೊಡುತ್ತಿದ್ದಳು. ಈಕೆಯ ಬಳಿಗೆ ಬಾಡಿ ಮಸಾಜ್ ಮಾಡಿಸಲೆಂದು ಬರುತ್ತಿದ್ದ ಶಿವ ಹಾಗೂ ಸಮೀರ್ ಆಕೆಯ ಮನೆಯನ್ನೇ ಕಳ್ಳತನ ಮಾಡಿದ್ದಾರೆ.

ಹುಕ್ಕಾ ಬಾರ್ ಓನರ್ ಸಮೀರ್
ಹುಕ್ಕಾ ಬಾರ್ ಓನರ್ ಸಮೀರ್

ಬಂಧಿತ ಸಮೀರ್ ಎಂಬಾತ ಹುಕ್ಕಾಬಾರ್​ ನಡೆಸುತ್ತಿದ್ದ. ಇದೇ ಬಾರ್​ ಶಿವ ಕೆಲಸ ಮಾಡುತ್ತಿದ್ದ. ಸಮೀರ್​ ತೃತೀಯಲಿಂಗಿಗಳಿಂದ ಬಾಡಿ ಮಸಾಜ್​ ಮಾಡಿಸಿಕೊಳ್ಳುವ ಚಟ ಬೆಳೆಸಿಕೊಂಡಿದ್ದ. ಹೀಗಾಗಿ ಪುಖಂಬಮ್ ಪ್ರಶಾಂತ ಎಂಬ ತೃತೀಯ ಲಿಂಗಿಯ ಮನೆಗೆ ಆನ್​ಲೈನ್​ನಲ್ಲಿ ಸರ್ವೀಸ್​ ಬುಕ್​ ಮಾಡಿಕೊಂಡು ಮಸಾಜ್​ ಮಾಡಿಸಿಕೊಳ್ಳಲು ಹೋಗುತ್ತಿದ್ದ.

ಕಳೆದ ನಾಲ್ಕು ವರ್ಷಗಳಿಂದ ಮಸಾಜ್​ಗೆ ಮಾಡಿಸಿಕೊಳ್ಳಲು ಪುಖಂಬಮ್ ಪ್ರಶಾಂತನ ಮನೆಗೆ ಬಂದು ಹೋಗುತ್ತಿದ್ದ. ಹೀಗಾಗಿ ಇವರ ಬಳಿ ಹಣ ಹಾಗೂ ಚಿನ್ನಾಭರಣ ಇರುವ ಬಗ್ಗೆ ಅರಿತಿದ್ದ. ಜತೆಗೆ ಅವರ ಡೆಬಿಟ್​ ಕಾರ್ಟ್​ನ ಪಿನ್​ ನಂಬರ್​ನ್ನೂ ತಿಳಿದುಕೊಂಡಿದ್ದ. ನಂತರ ಕಳ್ಳತನ ಮಾಡಲು ಸಮೀರ್ ಯೋಜನೆ ರೂಪಿಸಿಕೊಂಡಿದ್ದ.

ತನ್ನ ಬಾರ್​ನಲ್ಲಿ ಕೆಲಸ ಮಾಡುತ್ತಿದ್ದ ಶಿವ ಎಂಬಾತನಿಂದ ಕಳ್ಳತನ ಮಾಡಿಸಲು ಸಮೀರ್ ಮುಂದಾಗಿದ್ದ. ತಾನೇ ನೇರವಾಗಿ ಕಳವು ಮಾಡಿದ್ರೆ ಎಲ್ಲಿ ತೃತೀಯಲಿಂಗಿಗಳಿಗೆ ವಿಷಯ ತಿಳಿಯುತ್ತೋ ಎಂಬ ಕಾರಣಕ್ಕೆ ಶಿವನಿಂದ ಕಳ್ಳತನ ಮಾಡಿಸಲು ತೀರ್ಮಾನಿಸಿದ್ದ. ಇದಕ್ಕಾಗಿ ಬಾಡಿ ಮಸಾಜ್​ಗೆ ಶಿವನನ್ನು ಕಳುಹಿಸಿದ್ದ.

ಎರಡು-ಮೂರು ಬಾರಿ ಆನ್​ಲೈನ್​ನಲ್ಲಿ ಬಾಡಿ ಮಸಾಜ್​ಗೆಂದು ಬಂದ ಶಿವ, ತೃತೀಯ ಲಿಂಗಿಯೊಂದಿಗೆ ಸಲುಗೆ ಬೆಳೆಸಿಕೊಂಡಿದ್ದ. ಒಮ್ಮೆ ಮಸಾಜ್​ಗೆ ಬಂದಾಗಲೇ ಡ್ರಿಂಕ್ಸ್​ನಲ್ಲಿ ಮತ್ತು ತರಿಸುವ ಔಷಧಿ ಬೆರೆಸಿ ಅವರ ಬಳಿಯಿದ್ದ ಚಿನ್ನ ಹಾಗೂ ಡೆಬಿಟ್​ ಕಾರ್ಡ್​ ಕಳವು ಮಾಡಿಕೊಂಡು ಶಿವ ಎಸ್ಕೇಪ್​ ಆಗಿದ್ದಾನೆ.

ಕಳ್ಳತನ ನಡೆಸಿದ ಶಿವ
ಕಳ್ಳತನ ನಡೆಸಿದ ಶಿವ

ಶಿವ ಕಳ್ಳತನ ನಡೆಸಿದಾಗ ಸಮೀರ್​ ತೃತೀಯಲಿಂಗಿಯ ಜತೆಯಲ್ಲೇ 2 ದಿನ ಇದ್ದ. ಕಳವು ಮಾಡಿ ಎಸ್ಕೇಪ್​ ಆಗಿದ್ದ ಶಿವ ಆಕೆಯ ಡೆಬಿಟ್ ಕಾರ್ಡ್​​ನಿಂದ ಹಂತ ಹಂತವಾಗಿ ಐದು ಲಕ್ಷ ಡ್ರಾ ಮಾಡಿಕೊಂಡಿದ್ದಾನೆ. ಶಿವ ಹಣ ತೆಗೆದಾಗಲೆಲ್ಲ ಆಕೆಯ ಮೊಬೈಲ್​ಗೆ ಮೆಸೇಜ್​ ಬರುತ್ತಿದ್ದಂತೆ, ಆ ಮೆಸೇಜ್​ಗಳನ್ನೆಲ್ಲಾ ಸಮೀರ್ ಡಿಲೀಟ್​ ಮಾಢುತ್ತಿದ್ದ. ಹೀಗಾಗಿ ಹಣ ಕಟ್ ಆಗುತ್ತಿದ್ದುದು ತೃತೀಯಲಿಂಗೆಗೆ ತಿಳಿದಿರಲಿಲ್ಲ. ನಂತರ ಅಕೌಂಟ್ ಪರಿಶೀಲನೆ ನಡೆಸಿದಾಗ ಹಣ ಕಟ್ ಆಗಿರುವುದು ಅರಿವಿಗೆ ಬಂದಿದೆ.

ಪ್ರಕರಣದ ಸಂಬಂಧ ತೃತೀಯಲಿಂಗಿ ಪುಖಂಬಮ್ ಪ್ರಶಾಂತ ಆಡುಗೋಡಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ ಕದ್ದ ಚಿನ್ನಾಭರಣ, ನಗದು ಹಣ ಹಾಗೂ ಡೆಬಿಟ್​ ಕಾರ್ಡ್​ ವಶಕ್ಕೆ ಪಡೆದಿದ್ದಾರೆ. ಇನ್ನು ಸಮೀರ್​ ಮಡೆಸುತ್ತಿದ್ದ ಹುಕ್ಕಾ ಬಾರ್​ ಲಾಸ್​ನಲ್ಲಿ ನಡೆಯುತ್ತಿದ್ದು, ಆತನ ಐಷಾರಾಮಿ ಜೀವನ ಶೈಲಿಯೇ ಈ ಕಳ್ಳತನಕ್ಕೆ ಕಾರಣ ಅನ್ನೋದು ತನಿಖೆಯಿಂದ ತಿಳಿದು ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net