ಸಿನಿಮೀಯ ರೀತಿಯಲ್ಲಿ ಚಲಿಸುತ್ತಿರುವ ಟ್ರಕ್​ ಮೇಲೆ ಹತ್ತಿ ಕಳ್ಳತನ ಮಾಡಿದ ದರೋಡೆಕೋರರು! | Robbery

untitled-design-2025-09-10t160054582-68c1536ca08d0
Published on

Robbery : ಮಹಾರಾಷ್ಟ್ರದ ಸೋಲಾಪುರ-ಧುಲೆ ಹೆದ್ದಾರಿಯ ರತ್ನಾಪುರ ಗ್ರಾಮದ ಬಳಿ ಇಬ್ಬರು ದರೋಡೆಕೋರರು ಚಲಿಸುವ ಟ್ರಕ್ ಮೇಲೆ ಹತ್ತಿ ಕಳ್ಳತನ ಮಾಡುತ್ತಿರುವ ದೃಶ್ಯ ಅಲ್ಲಿನ ಸ್ಥಳೀಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದು ನೋಡಲು ಸಿನಿಮೀಯ ದೃಶ್ಯಾವಳಿಗಳು ಕಂಡಂತೆ ಭಾಸವಾಗಿದೆ.

ವಿಡಿಯೋದಲ್ಲೇನಿದೆ?

ರಸ್ತೆಯಲ್ಲಿ ಚಲಿಸುತ್ತಿರುವ ಟ್ರಕ್ ಮೇಲೆ 6 ದರೋಡೆಕೋರರು ಹತ್ತಿ ಅದರಲ್ಲಿರುವ ವಸ್ತುಗಳನ್ನು ಕದಿಯುತ್ತಿರುವುದನ್ನು ನೋಡಬಹುದು. ಹಾಗೆಯೇ ಕದ್ದ ವಸ್ತುಗಳನ್ನು ಲಾರಿಯ ಹಿಂಬದಿ ಬರುವಂತಹ ಬೈಕ್​ ಸವಾರರಿಗೆ ಹಸ್ತಾಂತರಿಸುವುದನ್ನು ಈ ವಿಡಿಯೋದಲ್ಲಿ ನೋಡಬಹುದು.

ಇನ್ನು ಘಟನೆಯ ವಿಡಿಯೋ ವೈರಲ್​ ಆದ ನಂತರ, ಧರಾಶಿವ್​ನ ಸ್ಥಳೀಯ ಅಪರಾಧ ವಿಭಾಗವು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದು, ಇಲ್ಲಿಯವರೆಗೂ 6 ಕಳ್ಳರನ್ನು ಬಂಧಿಸಿದ್ದಾರೆ. ಇನ್ನು ಆರೋಪಿಗಳು ಯಾವ ವಸ್ತುಗಳನ್ನು ಕಳ್ಳತನ ಮಾಡಿದ್ದಾರೆ ಎಂದು ಪೊಲೀಸರು ಇಲ್ಲಿಯವರೆಗೂ ಮಾಹಿತಿ ನೀಡಿಲ್ಲ. ಆದಾಗ್ಯೂ, ಪೊಲೀಸರು ವಿಚಾರಣೆ ನಡೆಸುವ ಸಮಯದಲ್ಲಿ ಈ ಆರೋಪಿಗಳ ವಿರುದ್ಧ ಇದೇ ರೀತಿಯ ಹಲವಾರು ದೂರುಗಳು ವರದಿಯಾಗಿವೆ ಎಂದು ಎನ್​ಡಿ ಟಿವಿ ವರದಿ ಮಾಡಿದೆ.

ಈ ಘಟನೆಯ ಹೊರತಾಗಿ, ರಾಜ್ಯದ ಇತರ ಪ್ರದೇಶದಲ್ಲಿ ಇದೇ ರೀತಿಯ ಅನೇಕ ಪ್ರಕರಣಗಳು ವರದಿಯಾಗಿವೆ. ಅಲ್ಲಿ ರಾತ್ರಿಯಲ್ಲಿ ಟ್ರಕ್ ಚಾಲಕರನ್ನು ತಡೆದು, ಹಲ್ಲೆ ಮಾಡಿ, ಲೂಟಿ ಮಾಡಲಾಗಿದೆ ಎಂದು ವರದಿಯಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net