ನಾನು ಮನೆಗೆ ಹೋಗಬೇಕು: ಭಾರತೀಯ ರಾಯಭಾರಿ ಕಚೇರಿ ಸಹಾಯ ಕೇಳಿದ ನಿರೂಪಕಿ ಉಪಾಸನಾ ಗಿಲ್| Upasana Gill

untitled-design-2025-09-10t132433288-68c12ec36e5e1
Published on

Upasana Gill: ಸಾಮಾಜಿಕ ಮಾಧ್ಯಮಗಳ ನಿಷೇಧದ ನಂತರ, ನೇಪಾಳದಲ್ಲಿ ಹೆಚ್ಚುತ್ತಿರುವ ಅಶಾಂತಿಯ ಮಧ್ಯೆ, ಭಾರತೀಯ ನಿರೂಪಕಿ ಉಪಾಸನಾ ಗಿಲ್ ಸಿಲುಕಿದ್ದು, ಅಲ್ಲಿಂದ ಹೊರಬರಲು ಭಾರತೀಯ ರಾಯಭಾರ ಕಚೇರಿಗೆ ಸಹಾಯ ಕೇಳುತ್ತಿರುವ ವಿಡಿಯೋ ಎಲ್ಲೆಡೆ ವೈರಲ್​ ಆಗಿದೆ.

ವಿಡಿಯೋದಲ್ಲೇನಿದೆ?

ಗಿಲ್​ ಹಂಚಿಕೊಂಡಿರುವ ವಿಡಿಯೋದಲ್ಲಿ ನಾನು ವಾಲಿಬಾಲ್ ಕಾರ್ಯಕ್ರಮವನ್ನು ಆಯೋಜಿಸಲು ನೇಪಾಳಕ್ಕೆ ಬಂದಿದ್ದೇನೆ. ಪೋಖರಾದಲ್ಲಿರುವ ಹೋಟೆಲ್​ವೊಂದರಲ್ಲಿ ತಂಗಿದ್ದು, ಈ ವೇಳೆ ಪ್ರತಿಭಟನಾಕಾರರು ಹೋಟೆಲ್​ಗೆ ಬೆಂಕಿ ಹಚ್ಚಿದ್ದಾರೆ. ಇದು ಸಂಪೂರ್ಣ ಸುಟ್ಟು ಹೋಗಿದೆ. ಹಾಗಾಗಿ ಭಾರತೀಯ ರಾಯಭಾರಿ ಕಚೇರಿ ನಮಗೆ ಸಹಾಯ ಮಾಡುವಂತೆ ಕೇಳಿಕೊಳ್ಳುತ್ತಿದ್ದೇನೆ ಎಂದು ಮನವಿ ಮಾಡಿದ್ದಾರೆ.

ಆದಾಗ್ಯೂ, ಹೋಟೆಲ್ ಆವರಣಕ್ಕೆ ಪ್ರತಿಭಟನಾಕಾರರು ನುಗ್ಗಿದರು. ಆ ವೇಳೆ ನಾನು ಸ್ಪಾದಲ್ಲಿದ್ದೆ. ದೊಡ್ಡ ಕೋಲುಗಳಿಂದ ನನ್ನ ಹಿಂದೆ ಓಡುತ್ತಿದ್ದರು. ನಾನು ಅವರಿಂದ ತಪ್ಪಿಸಿಕೊಂಡು ಅಲ್ಲಿಂದ ಹೊರಬಂದೆ. ಎಲ್ಲಿ ನೋಡಿದರೂ ಬೆಂಕಿ, ಅವರು ಇಲ್ಲಿ ಪ್ರವಾಸಿಗರನ್ನು ಸಹ ಬಿಡುತ್ತಿಲ್ಲ ಎಂದು ಹೇಳಿದರು.

ಗಿಲ್​ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಡಿರುವ ಮತ್ತೊಂದು ವಿಡಿಯೋದಲ್ಲಿ, ನೇಪಾಳದಲ್ಲಿರುವ ಭಾರತೀಯ ರಾಯಭಾರಿ ಕಚೇರಿಯನ್ನು ಸಂಪರ್ಕಿಸಿದ್ದೆ ಆದರೆ, ಅವರಿಂದ ಯಾವುದೇ ಪರಿಹಾರ ಸಿಗಲಿಲ್ಲ. ಅವರು ಕರೆ ಮಾಡಿ ಹೋಟೆಲ್​ ಒಳಗೆ ಇರುವಂತೆ ಮನವಿ ಮಾಡಿದರು ಅಷ್ಟರಲ್ಲೇ ಪ್ರತಿಭಟನಾಕಾರರು ಹೋಟೆಲ್​ ಒಳಗೆ ನುಗ್ಗಿ ಬೆಂಕಿ ಹಚ್ಚಿದರು. ಈ ಸಮಯದಲ್ಲಿ ನಾವು ಅಲ್ಲಿಂದ ಹೊರ ಬಂದಿದ್ದೇವೆ ಎಂದು ತಿಳಿಸಿದರು.

ಈ ವೇಳೆ ಗಿಲ್​ "ನಾವು ಈಗ ಎಲ್ಲವನ್ನೂ ಕಳೆದುಕೊಂಡಿದ್ದೇವೆ. ನಾವು ಸುರಕ್ಷಿತವಾಗಿ ಮನೆಗೆ ಹೋಗಬೇಕೆಂದು ಬಯಸುತ್ತೇವೆ ದಯವಿಟ್ಟು ನಮಗೆ ಸಹಾಯ ಮಾಡಿ". ಹಾಗೇ ನಾವು ಉಳಿದಿದ್ದ ಹೋಟೆಲ್ ಸಂಪೂರ್ಣ ಸುಟ್ಟುಹೋಗಿದೆ. ನನ್ನ ಬಳಿ ಯಾವುದೇ ಬಟ್ಟೆಗಳಿಲ್ಲ. ನನ್ನ ಎಲ್ಲಾ ವಸ್ತುಗಳು ಸುಟ್ಟುಹೋಗಿದೆ ಎಂದು ಹೇಳಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net