ಎಎಪಿ ಶಾಸಕ ಮೆಹ್ರಾಜ್ ಮಲಿಕ್ ಬಂಧನ "ಕಾನೂನುಬಾಹಿರ": ಸಂಸದ ಸಂಜಯ್ ಸಿಂಗ್! | Sanjay Singh

sanjay singh
Published on

Sanjay Singh: ಆಮ್​ ಆದ್ಮಿ ಪಕ್ಷದ ಶಾಸಕ ಮೆಹ್ರಾಜ್ ಮಲಿಕ್ ಅವರನ್ನು ಸಾರ್ವಜನಿಕ ಸುರಕ್ಷತಾ ಕಾಯ್ದೆಯಡಿ ಬಂಧಿಸಿರುವುದು ಕಾನೂನಬಾಹಿರ ಎಂದು ಸಂಸದ ಸಂಜಯ್​ ಸಿಂಗ್​ ಇಂದು (ಸೆಪ್ಟೆಂಬರ್​ 10) ಕಿಡಿಕಾರಿದ್ದಾರೆ.

ದೋಡಾ ಜಿಲ್ಲೆಯಲ್ಲಿ ಸಾರ್ವಜನಿಕ ಸುವ್ಯವಸ್ಥೆಗೆ ಭಂಗ ತಂದ ಆರೋಪಡಿಯಲ್ಲಿ ಎಎಪಿ ಜೆಕೆ ಘಟಕದ ಅಧ್ಯಕ್ಷರಾಗಿದ್ದ ಮಲಿಕ್​ ಅವರನ್ನು ಕಾನೂನು ಕ್ರಮದಡಿಯಲ್ಲಿ ಸೋಮವಾರ (ಸೆಪ್ಟೆಂಬರ್​ 08) ಬಂಧಿಸಿ, ಕಥುವಾ ಜಿಲ್ಲಾ ಜೈಲಿನಲ್ಲಿ ಇರಿಸಲಾಯಿತು. ಇದು ಅಲ್ಲಿನ ರಾಜಕೀಯ ನಾಯಕರಲ್ಲಿ ತೀವ್ರ ಗೊಂದಲವನ್ನುಂಟು ಮಾಡಿತು.

ಈ ರೀತಿ ಮಲಿಕ್​ ಅವರನ್ನು ಬಂಧಿಸಿರುವುದು ಸಂವಿಧಾನ ಬಾಹಿರ. ಇದು ಚುನಾಯಿತ ಪ್ರತಿನಿಧಿಗಳ ಧ್ವನಿಯನ್ನು ಅಡಗಿಸುವಂತಹ ಪ್ರಯತ್ನ ಇದಾಗಿದೆ. ಇನ್ನು ಅವರ ವಿರುದ್ಧ ಪಿಎಸ್​ಎ ಹೇರುವುದು ನೂರಕ್ಕೆ ನೂರು ತಪ್ಪು. ತನ್ನ ಕ್ಷೇತ್ರದ ಪರವಾಗಿ ಧ್ವನಿ ಎತ್ತಿದಕ್ಕಾಗಿ ಇವರ ಮೇಲೆ ಭಯೋತ್ಪಾದಕರಿಗೆ ಬಳಸುವ ಸೆಕ್ಸನ್​ ಹೇರಲಾಗಿದೆ. ಇದು ತುಂಬಾ ದೊಡ್ಡ ತಪ್ಪು ಎಂದು ಸುದ್ದಿಮೂಲಗಳಿಗೆ ಸಿಂಗ್​ ತಿಳಿಸಿದ್ದಾರೆ.

ಈ ಅನ್ಯಾಯದ ವಿರುದ್ಧ ನಾವು ಬೀದಿಗಳಲ್ಲಿ, ಸಂಸತ್ತಿನಲ್ಲಿ ಅಗತ್ಯ ಬಿದ್ದರೆ ಸುಪ್ರೀಂ ಕೋರ್ಟ್​ನಲ್ಲಿ ಹೋರಾಟ ನಡೆಸುತ್ತೇವೆ. ಇನ್ನು ಬಿಜೆಪಿ ಸರ್ಕಾರ ಪ್ರಧಾನಿ ನರೇಂದ್ರ ಮೋದಿಯವರ ದಮನಕಾರಿ ತಂತ್ರಗಳನ್ನು ಬಳಸುವ ಮೂಲಕ ನಮ್ಮ ಪಕ್ಷವನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ಆರೋಪ ಮಾಡಿದ್ದಾರೆ.

ಈ ಹಿಂದೆ ಕ್ಷುಲ್ಲಕ ಕಾರಣಕ್ಕೆ ಅರವಿಂದ್ ಕೇಜ್ರಿವಾಲ್, ಮನೀಶ್ ಸಿಸೋಡಿಯಾ, ಸತ್ಯೇಂದರ್ ಜೈನ್ ಮತ್ತು ನನ್ನನ್ನೂ ಜೈಲಿಗೆ ಹಾಕಿದ್ದರು. ಆದರೆ, ಇಂದು ಮೆಹ್ರಾಜ್ ಮಲಿಕ್ ಅವರನ್ನು ಜೈಲಿಗೆ ಹಾಕಲಾಗಿದೆ ಎಂದು ತಿಳಿಸಿದರು.

ಇನ್ನು ಮಲಿಕ್​ ಬಂಧನವನ್ನು ವಿರೋಧಿಸಿ ಮಂಗಳವಾರ ಜಮ್ಮು ಮತ್ತು ಕಾಶ್ಮೀರದ ಇತರ ಭಾಗಗಳಲ್ಲಿ ಪ್ರದರ್ಶನಗಳು ನಡೆಯುವ ಸಂದರ್ಭದಲ್ಲಿ ಪ್ರತಿಭಟನಾಕಾರರು ಹಾಗೂ ಭದ್ರತಾ ಪಡೆಗಳ ನಡುವಿನ ಸಂಘರ್ಷದಲ್ಲಿ ಕನಿಷ್ಟ ಎಂದು ಪೊಲೀಸ್​ ಸಿಬ್ಬಂದಿಗಳು ಗಾಯಗೊಂಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net