ಗ್ರಾಮಸ್ಥರಿಂದಲೇ ರಸ್ತೆ ದುರಸ್ತಿ

road
ಎನ್.ಆರ್.ಪುರ ತಾಲೂಕಿನ ನೇರ‌್ಲೆಕೊಪ್ಪ, ಆಲಂದೂರು ರಸ್ತೆಯನ್ನು ಊರಿನ ಗ್ರಾಮಸ್ಥರು ದುರಸ್ತಿ ಮಾಡುತ್ತಿರುವುದು.
Published on

ಎನ್.ಆರ್.ಪುರ: ತಾಲೂಕಿನ ಕಡಹಿನಬೈಲು ಗ್ರಾಪಂ ವ್ಯಾಪ್ತಿಯ ನೇರಲೆಕೊಪ್ಪ, ಆಲಂದೂರು ರಸ್ತೆಯ ಗುಂಡಿಗಳನ್ನು ಗ್ರಾಮಸ್ಥರೇ ಸ್ವಚ್ಛ ಮಾಡಿ, ಗುಂಡಿಗಳಿಗೆ ಮಣ್ಣು ತುಂಂಬಿ ದುರಸ್ತಿ ಮಾಡಿದ್ದಾರೆ.

ಈ ರಸ್ತೆಯಲ್ಲಿ ತುಂಬ ಗುಂಡಿಗಳಾಗಿದ್ದು, ಸಂಚಾರಕ್ಕೆ ತೊಂದರೆ ಆಗುತ್ತಿತ್ತು. ಇದೂವರೆಗೂ ದುರಸ್ತಿ ಆಗಿರಲಿಲ್ಲ. ಇದರಿಂದ ಬೇಸತ್ತ ಸ್ಥಳೀಯ ನೇತಾಜಿ ಯುವಕರ ಸಂಘದ ಸದಸ್ಯರು ಹಾಗೂ ಗ್ರಾಮಸ್ಥರೆಲ್ಲ ಒಗ್ಗೂಡಿ ಟ್ರಾೃಕ್ಟರ್, ಟಿಲ್ಲರ್ ಬಳಸಿ ಮಣ್ಣನ್ನು ತಂದು ದುರಸ್ತಿ ಮಾಡಿದ್ದಾರೆ. ಸರ್ಕಾರದ ಅನುದಾನದಿಂದ ಕೆಲಸ ಮಾಡಿದ್ದರೆ ಕನಿಷ್ಠ 30-40 ಸಾವಿರ ರೂ. ಖರ್ಚಾಗುತ್ತಿತ್ತು. ಗ್ರಾಮಸ್ಥರೇ ತಮ್ಮ ಸ್ವಂತ ವಾಹನಗಳನ್ನು ಬಳಸಿಕೊಂಡು, ತಾವೇ ಕೆಲಸ ಮಾಡಿ ದುರಸ್ತಿ ಮಾಡಿಕೊಂಡಿದ್ದಾರೆ. ಜಗದೀಶ್, ಅಕ್ಷತ್, ಸತೀಶ್, ಮಂಜುನಾಥ್, ಕುಮಾರೇಗೌಡ, ಊರಿನ ಗ್ರಾಮಸ್ಥರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net