ನಿಜವಾಗಿಯೂ ನಿರಾಸೆಯಾಗಿದೆ; ತಂಡ ಗೆದ್ದರೂ ಬೇಸರ ಹೊರಹಾಕಿದ ಯುವ ಆಟಗಾರ

Riyan Parag
Published on

ಪಲ್ಲೆಕೆಲೆ: ಇಲ್ಲಿನ ಪಲ್ಲೆಕೆಲೆ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾರತ ಹಾಗೂ ಶ್ರೀಲಂಕಾ ನಡುವಿನ ಟಿ20 ಸರಣಿಯ ಮೂರನೇ ಪಂದ್ಯದಲ್ಲಿ ಪ್ರವಾಸಿ ಭಾರತ ತಂಡವು ಭರ್ಜರಿ ಜಯ ಸಾಧಿಸಿದ್ದು, ಆತಿಥೇಯರಿಗೆ ಶಾಕ್​ ನೀಡಿದೆ. ಈ ಮೂಲಕ ನೂತನ ಕೋಚ್​ ಗೌತಮ್​ ಗಂಭೀರ್​, ಚುಟುಕು ಮಾದರಿಗೆ ಪೂರ್ಣಪ್ರಮಾಣದ ನಾಯಕನಾಗಿ ಅಧಿಕಾರ ವಹಿಸಿಕೊಂಡ ಸೂರ್ಯಕುಮಾರ್​ ಯಾದವ್ಗೆ ಗೆಲುವಿನ ಆರಂಭ ಸಿಕ್ಕಿದ್ದು, ವಿನ್ನಿಂಗ್​ ಸ್ಟ್ರೀಕ್​ ಮುಂದುವರೆಸಲು ಈ ಜೋಡಿ ಸಜ್ಜಾಗಿದೆ.

ಈ ಬಾರಿಯ ಐಪಿಎಲ್​ನಲ್ಲಿ ಭರ್ಜರಿ ಪ್ರದರ್ಶನ ನೀಡುವ ಆಯ್ಕೆಗಾರರ ಗಮನ ಸೆಳೆದಿದ್ದ ಟೀಮ್​ ಇಂಡಿಯಾದ ಯುವ ಆಟಗಾರ ರಿಯಾನ್​ ಪರಾಗ್​ ತಂಡ ಗೆದದ್ರೂ ಯಾಕೋ ಸಂತೃಪ್ತರಾದಂತೆ ಕಾಣುತ್ತಿಲ್ಲ. ಪೋಸ್ಟ್​ ಮ್ಯಾಚ್​ ಪ್ರಸೆಂಟೇಷನ್​ನಲ್ಲಿ ರಿಯಾನ್​ ಪರಾಗ್​ ಈ ಬಗ್ಗೆ ಮಾತನಾಡಿದ್ದು, ಹಲವರು ಮೆಚ್ಚುಗೆ ಸೂಚಿಸಿದ್ದಾರೆ.

Riyan Parag

ನನ್ನ ಪ್ರದರ್ಶನ ಕಂಡು ನನಗೆ ನಿಜವಾಗಿಯೂ ನಿರಾಸೆಯಾಗಿದೆ. ಏಕೆಂದರೆ ನಾನು ಕೊನೆಯವರೆಗೂ ಬ್ಯಾಟಿಂಗ್​ ಮಾಡಿದ್ದರೆ ತಂಡದ ಮೊತ್ತವು 160ರ ಗಡಿ ದಾಟುತ್ತಿತ್ತು. ಇದಾಗ್ಯೂ ಕಡಿಮೆ ಮೊತ್ತಗಳಿಸಿದರೂ ನಾನು ಉತ್ತಮ ಬೌಲಿಂಗ್ ಮಾಡಿದ್ದೆವು. ಬೌಲಿಂಗ್​ನಲ್ಲಿ ನನ್ನ ಪ್ರದರ್ಶನ ಖುಷಿ ನೀಡಿದೆ. ನಾನು ನನ್ನ ಪ್ಲ್ಯಾನ್​ಗಳನ್ನು ತುಂಬಾ ಸರಳವಾಗಿ ಇರಿಸಲು ಬಯಸುತ್ತೇನೆ. ಹೀಗಾಗಿಯೇ ನಾನು ಲೆಗ್-ಬ್ರೇಕ್‌ನಲ್ಲಿ ಕೆಲಸ ಮಾಡುತ್ತಿದ್ದೇನೆ.

ದೇಶೀಯ ಕ್ರಿಕೆಟ್​ನಲ್ಲಿ ಲೆಗ್ ಬ್ರೇಕ್​ ಎಸೆತಗಳನ್ನು ಪ್ರಯತ್ನಿಸಿದ್ದೆ. ಕೆಲವು ನೆಟ್ ಸೆಷನ್‌ಗಳನ್ನು ಅಭ್ಯಾಸ ಮಾಡಿದ್ದೇನೆ. ಇದೀಗ ನನ್ನ ಬೌಲಿಂಗ್ ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ. ನಾಯಕ ಸೂರ್ಯಕುಮಾರ್ ಯಾದವ್ ಕೂಡ ಲೆಗ್ ಬ್ರೇಕ್​ ಎಸೆಯುವಂತೆ ಸೂಚಿಸಿದ್ದರು. ಇದು ಸಹ ನನಗೆ ಖುಷಿ ನೀಡಿತು. ಈ ಬಗ್ಗೆ ಕೋಚ್​ ಗೌತಮ್​ ಸರ್​ ಅವರೊಂದಿಗೂ ಮಾತುಕತೆ ನಡೆಸಿದ್ದೆ ಎಂದು ಪೋಸ್ಟ್​ ಮ್ಯಾಚ್​ ಪ್ರೆಸೆಂಟೇಷನ್​ನಲ್ಲಿ ಟೀಮ್​ ಇಂಡಿಯಾ ಯುವ ಆಟಗಾರ ರಿಯಾನ್ ಪರಾಗ್​ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net