ದೇಶದಲ್ಲಿ ನಿಲ್ಲದ ಕರೊನಾ ಆರ್ಭಟ

Published on

ನವದೆಹಲಿ: ಭಾರತದಲ್ಲಿ ಕರೊನಾ ಹಾವಳಿ ವಿಕೋಪಕ್ಕೆ ತಿರುಗುತ್ತಿದ್ದು, ಶೀಘ್ರದಲ್ಲೇ ಪ್ರತಿದಿನದ ಹೊಸ ಪ್ರಕರಣಗಳ ಸಂಖ್ಯೆ 1 ಲಕ್ಷದ ಗಡಿ ಮುಟ್ಟುವ ಸಂಭವವಿದೆ. ಕಳೆದ 2 ದಿನಗಳಿಂದ 90 ಸಾವಿರಕ್ಕೂ ಅಧಿಕ ಪ್ರಕರಣಗಳು ವರದಿಯಾಗುತ್ತಿವೆ.

ಕರೊನಾಗೆ ತತ್ತರಿಸಿರುವ ರಾಷ್ಟ್ರಗಳ ಜಾಗತಿಕ ಪಟ್ಟಿಯಲ್ಲಿ ಭಾರತ ಸದ್ಯ 2ನೇ ಸ್ಥಾನದಲ್ಲಿದ್ದು, ಪ್ರಕರಣಗಳು ಇದೇ ರೀತಿ ಮುಂದುವರಿದರೆ ಅಮೆರಿಕವನ್ನೂ ಹಿಂದಿಕ್ಕಿ ಮೊದಲ ಸ್ಥಾನಕ್ಕೇರುವ ಆತಂಕ ಎದುರಾಗಿದೆ. ಪ್ರತಿದಿನ ಸರಾಸರಿ 1 ಸಾವಿರ ಮಂದಿ ಕರೊನಾಗೆ ಬಲಿಯಾಗುತ್ತಿದ್ದಾರೆ. ಕಳೆದೊಂದು ತಿಂಗಳ ಹಿಂದಿದ್ದ ಪ್ರತಿದಿನದ ಗುಣಮುಖರ ಪ್ರಮಾಣ ಈಗ ಇಳಿಕೆಯಾಗಿದೆ.

ಭಾರತದಲ್ಲಿ ಪ್ರತಿದಿನ 60 ಸಾವಿರ ಹೊಸ ಪ್ರಕರಣಗಳು ವರದಿಯಾಗುತ್ತಿದ್ದ ವೇಳೆ ಯಲ್ಲಿ ಸುಮಾರು 50 ಸಾವಿರ ರೋಗಿಗಳು ಗುಣಮುಖರಾಗುತ್ತಿದ್ದರು. ಈಗ ಪ್ರತಿದಿನ 90 ಸಾವಿರ ಪ್ರಕರಣಗಳು ವರದಿಯಾಗುತ್ತಿದ್ದು, ಪ್ರತಿದಿನದ ಗುಣಮುಖರ ಸಂಖ್ಯೆ ಸರಾಸರಿ 65 ಸಾವಿರ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net