More

    ಇದೇ ವಾರ ಸಾರ್ವತ್ರಿಕ ಬಳಕೆಗೆ ಸಿಗಲಿದೆ ರಷ್ಯಾ ಲಸಿಕೆ; ಸ್ಪುಟ್ನಿಕ್​-ವಿಗೆ ಸಿಕ್ತು ಆರೋಗ್ಯ ಇಲಾಖೆ ಸಮ್ಮತಿ

    ಮಾಸ್ಕೋ: ಕರೊನಾ ವೈರಸ್​ ನಿಗ್ರಹಕ್ಕೆ ಜಗತ್ತಿನಲ್ಲೇ ಪ್ರಪಥಮವಾಗಿ ಲಸಿಕೆ ಸಂಶೋಧಿಸಿ ಅದರ ನೋಂದಣಿಯನ್ನು ಮಾಡಿ ಎಲ್ಲರನ್ನೂ ನಿಬ್ಬೆರಗಾಗಿಸಿದ್ದ ರಷ್ಯಾ ಈಗ ಇನ್ನು ಒಂದು ಹೆಜ್ಜೆ ಮುಂದಕ್ಕೆ ಹೋಗಿದೆ. ಸ್ಪುಟ್ನಿಕ್​-ವಿ ಎಂದು ಹೆಸರಿಸಲಾಗಿರುವ ಈ ಕರೊನಾ ಲಸಿಕೆಯನ್ನು ಅತ್ಯಂತ ಶೀಘ್ರ ಅಂದರೆ ವಾರದೊಳಗೇ ಸಾರ್ವತ್ರಿಕ ಬಳಕೆಗೆ ಮುಕ್ತಗೊಳಿಸುವುದಾಗಿ ಘೋಷಣೆ ಮಾಡಿದೆ.

    ಲಸಿಕೆಯನ್ನು ಬೃಹತ್​ ಪ್ರಮಾಣದಲ್ಲಿ ಅಥವಾ ಸಾರ್ವಜನಿಕವಾಗಿ ಬಳಕೆ ಮಾಡಲಾಗುವುದು. ಇದಕ್ಕೆ ಆರೋಗ್ಯ ಇಲಾಖೆ ಅನುಮತಿ ನೀಡಿದೆ ಎಂದು ರಷ್ಯಾ ಹೇಳಿರುವುದಾಗಿ ಆರೋಗ್ಯ ತಜ್ಞ ಡೆನಿಸ್​ ಲೋಗುನೋವ್​ ಅವರನ್ನು ಉಲ್ಲೇಖಿಸಿ ತಾಸ್​ ಸುದ್ದಿಸಂಸ್ಥೆ ವರದಿ ಮಾಡಿದೆ.

    ಇದನ್ನೂ ಓದಿ; ಒಂದೇ ಢಾಬಾದ 65 ಸಿಬ್ಬಂದಿಗೆ ಕರೊನಾ ಸೋಂಕು….! ಸೂಪರ್​ಸ್ಪ್ರೆಡರ್​ ಆಗುವ ಆತಂಕ 

    ನಾಗರಿಕರ ಬಳಕೆಗಾಗಿ ಮುಕ್ತಗೊಳಿಸುವ ಔಷಧದ ಬ್ಯಾಚ್​ಗೆ ಪರವಾನಗಿ ನೀಡಲು ಕೆಲ ಹಂತಗಳನ್ನು ಪೂರ್ಣಗೊಳಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಒಂದೆರಡು ದಿನಗಳಲ್ಲಿ ಪ್ರಕ್ರಿಯೆ ಆರಂಭವಾಗಲಿದ್ದು, ನಂತರ ಅನುಮತಿ ಲಭಿಸಲಿದೆ ಎಂದು ಪ್ರಕಟಿಸಲಾಗಿದೆ.

    ವೈದ್ಯಕೀಯ ನಿಯಂತ್ರಣಾ ಘಟಕದ ಪರೀಕ್ಷೆಯಲ್ಲಿ ಲಸಿಕೆ ಪಾಸಾಗಬೇಕು. ಇದಾದ ಬಳಿಕ ಸೆ.10- 13ರ ಒಳಗೆ ಅನುಮತಿ ಲಭಿಸಲಿದೆ. ತಕ್ಷಣವೇ ಸಾರ್ವಜನಿಕರಿಗೆ ಲಸಿಕೆ ನೀಡುವ ಕಾರ್ಯ ಆರಂಭವಾಗಲಿದೆ ಎಂದು ರಷ್ಯನ್​ ಅಕಾಡೆಮಿ ಆಫ್​ ಸೈನ್ಸ್​ನ ಸಂಶೋಧನಾ ವಿಭಾಗದ ಉಪ ನಿರ್ದೇಶಕ ಡೆನಿಸ್​ ಲೋಗುನೋವ್ ಹೇಳಿದ್ದಾರೆ.

    ಇದನ್ನೂ ಓದಿ; ರಷ್ಯಾ ಲಸಿಕೆ ಸುರಕ್ಷಿತ, ಪರಿಣಾಮಕಾರಿ; ‘ಸ್ಪುಟ್ನಿಕ್​-ವಿ’ಗೆ ಸಿಕ್ತು ಜಾಗತಿಕ ಮನ್ನಣೆ 

    ರಷ್ಯನ್​ ಆರೋಗ್ಯ ಸಚಿವಾಲಯದ ಮೂಲಕ ಲಸಿಕೆ ವಿತರಣೆ ಮಾಡಲಾಗುತ್ತದೆ. ಮೊದಲಿಗೆ ಸೋಂಕು ಸಂಭಾವ್ಯತೆ ಹೆಚ್ಚಿರುವವರಿಗೆ ಲಸಿಕೆ ನೀಡಲಾಗುತ್ತದೆ. ಅದರಲ್ಲೂ ಕರೊನಾ ವಾರಿಯರ್ಸ್​ಗಳಿಗೆ ಆದ್ಯತೆ ಇರಲಿದೆ ಎಂದು ಡೆನಿಸ್​ ಮಾಹಿತಿ ನೀಡಿದ್ದಾರೆ.

    ಕೆಲ ದಿನಗಳ ಹಿಂದಷ್ಟೇ ರಷ್ಯನ್ ಲಸಿಕೆ ಮಾನವ ಬಳಕೆಗೆ ಸುರಕ್ಷಿತ ಹಾಗೂ ದೇಶಹದಲ್ಲಿ ರೋಗ ನಿರೋಧಕ ಶಕ್ತಿ ಉಂಟು ಮಾಡುತ್ತದೆ ಎಂದು ಲಾನ್ಸೆಟ್​ ನಿಯತಕಾಲಿಕದಲ್ಲಿ ಸಂಶೋಧನಾ ಫಲಿತಾಂಶ ಪ್ರಕಟವಾಗಿತ್ತು. ರಷ್ಯಾ ಕೂಡ ಸಾವಿರಾರು ಜನರ ಮೇಲೆ ಮೂರನೇ ಹಂತದ ಪ್ರಯೋಗ ನಡೆಸುತ್ತಿದೆ. ಅದರ ಫಲಿತಾಂಶಕ್ಕೂ ಮುನ್ನ ಬೃಹತ್​ ಪ್ರಮಾಣದಲ್ಲಿ ಲಸಿಕೆ ಬಳಸುತ್ತಿದೆ.

    ಕರೊನಾ ಮರು ಸೋಂಕು; ತಿಂಗಳ ಬಳಿಕ ಮತ್ತೆ ಕೋವಿಡ್​; ಬೆಂಗಳೂರಿನಲ್ಲಿ ಪತ್ತೆಯಾಯ್ತು ಮೊದಲ ಪ್ರಕರಣ…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts