

ಲಂಡನ್ : ಯುಕೆಯಲ್ಲಿ ಯೆಹೂದಿಗಳ ವಿರೋಧಿಗಳನ್ನು ಸಹಿಸಲಾಗುವುದಿಲ್ಲ ಎಂದು ಬ್ರಿಟಿಷ್ ಪ್ರಧಾನಿ ರಿಷಿ ಸುನಕ್ ಹೇಳಿದ್ದಾರೆ.
ಇದನ್ನೂ ಓದಿ: ಪ್ರವಾಸಕ್ಕೆ ಖರ್ಚು ಮಾಡುವ ನಾಲ್ಕನೇ ದೇಶವಾಗಲಿದೆ ಭಾರತ
ಹಮಾಸ್ ಉಗ್ರರ ವಿರುದ್ಧ ಇಸ್ರೇಲ್ ನಡೆಸುತ್ತಿರುವ ಯುದ್ಧಕ್ಕೆ ವಿರುದ್ಧವಾಗಿ ಶನಿವಾರ ಲಂಡನ್, ಬರ್ಮಿಂಗ್‌ಹ್ಯಾಮ್, ಕಾರ್ಡಿಫ್, ಬೆಲ್‌ಫಾಸ್ಟ್ ಮತ್ತಿತರ ನಗರಗಳಲ್ಲಿ ಸರಣಿ ಪ್ರತಿಭಟನೆಗಳು ನಡೆದ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಅವರು, ಯುಕೆಯಲ್ಲಿ 'ಜಿಹಾದ್‌ಗಾಗಿ ಕರೆ ಕೊಡುವುದು, ಯಹೂದಿಗಳ ವಿರುದ್ಧ ಪ್ರತಿಭಟನೆ ನಡೆಸುವುದು ಆ ಸಮುದಾಯಕ್ಕೆ ಮತ್ತು ಯುನೈಟೆಡ್ ಕಿಂಗ್‌ಡಮ್ ನ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಬೆದರಿಕೆಯಾಗಿದೆ ಎಂದು ಹೇಳಿದರು.
ವಾರಾಂತ್ಯದಲ್ಲಿ ನಾವು ನಮ್ಮ ಬೀದಿಗಳಲ್ಲಿ ದ್ವೇಷವನ್ನು ಕಂಡಿದ್ದೇವೆ. ಜಿಹಾದ್ ಕರೆಗಳು ಯಹೂದಿ ಸಮುದಾಯಕ್ಕೆ ಮಾತ್ರವಲ್ಲ, ನಮ್ಮ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಬೆದರಿಕೆಯಾಗಿವೆ. ನಮ್ಮ ದೇಶದಲ್ಲಿ ಯೆಹೂದಿಗಳನ್ನು ವಿರೋಧಿಸುವುದನ್ನು ನಾವು ಎಂದಿಗೂ ಸಹಿಸುವುದಿಲ್ಲ. ಉಗ್ರವಾದವನ್ನು ಎದುರಿಸಲು ಪೊಲೀಸರು ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ ಎಂದು ನಾವು ನಿರೀಕ್ಷಿಸುತ್ತೇವೆ ಎಂದರು.
ಗ್ರೇಟರ್ ಲಂಡನ್ ಪ್ರದೇಶದಲ್ಲಿ ಪ್ರತಿಭಟನೆಗಳ ಸಮಯದಲ್ಲಿ 1ಲಕ್ಷ ಜನ ಸೇರಿದ್ದರು. ಈ ಸಂದರ್ಭ ದ್ವೇಷದ ಭಾಷಣಗಳು ಕಂಡುಬಂದಿದ್ದು, ಘರ್ಷಣೆಗಳಲ್ಲಿ ಐವರು ಪೊಲೀಸ್ ಅಧಿಕಾರಿಗಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದವು. ಪೊಲೀಸರು ಹಿಜ್ಬ್ ಉತ್-ತಹ್ರೀರ್ ಪ್ರತಿಭಟನೆಯ ವೀಡಿಯೊವನ್ನು ಪರಿಶೀಲಿಸಿದರು, ಇದರಲ್ಲಿ ಒಬ್ಬ ವ್ಯಕ್ತಿ "ಜಿಹಾದ್, ಜಿಹಾದ್" ಎಂದು ಪಠಿಸುವುದನ್ನು ಕಾಣಬಹುದು ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.
ಸುನಕ್ ಕಳೆದ ವಾರ ಇಸ್ರೇಲ್ ಗೆ ಭೇಟಿ ನೀಡಿ ಯಹೂದಿಗಳ ಹೋರಾಟಕ್ಕೆ ಬೆಂಬಲಿಸಿದ್ದರು. ಆದರೆ ಅವರು ಯುನೈಟೆಡ್ ಕಿಂಗ್‌ಡಮ್ ಗೆ ಆಗಮಿಸಿದ ನಂತರ ಪ್ಯಾಲೆಸ್ಟೀನಿಯಾದವರನ್ನು ಗುರುತಿಸುತ್ತೇವೆ ಹಮಾಸ್‌ನ ಬಲಿಪಶುಗಳು ಕೂಡ. ನೀವು ಮಾನವೀಯ ಸಹಾಯಕ್ಕಾಗಿ ಪ್ರದೇ ಶಗಳನ್ನು ತೆರೆದಿದ್ದಕ್ಕೆ ಸಂತೋಷವಾಗಿದೆ.