More

    ಪ್ರವಾಸಕ್ಕೆ ಖರ್ಚು ಮಾಡುವ ನಾಲ್ಕನೇ ದೇಶವಾಗಲಿದೆ ಭಾರತ

    ನವದೆಹಲಿ: ಭಾರತೀವು 2030 ರ ವೇಳೆಗೆ ಪ್ರವಾಸಕ್ಕಾಗಿ ಖರ್ಚು ಮಾಡುವ 4ನೇ ಅತಿದೊಡ್ಡ ದೇಶವಾಗುತ್ತದೆ. ಭಾರತೀಯರು ಅಂದಾಜು $410 ಶತಕೋಟಿ ವೆಚ್ಚ ಮಾಡುತ್ತಾರೆ ಎಂದು ವರದಿಯಾಗಿದೆ.

    ಇದನ್ನೂ ಓದಿ: ರೈಲ್ವೆ ಉದ್ಯೋಗಿಗಳಿಗೆ ಶೇ.4 ಡಿಎ ಹೆಚ್ಚಳ
    ಬುಕಿಂಗ್​.ಕಾಮ್ ​ಮತ್ತು ಎಂಸಿ ಕಿನ್ಸೆ ಕಂಪನಿ ಜಂಟಿಯಾಗಿ ಬಿಡುಗಡೆ ಮಾಡಿದ “ಹೌ ಇಂಡಿಯಾ ಟ್ರಾವೆಲ್ಸ್​” ಶೀರ್ಷಿಕೆ ಹೊತ್ತ ವರದಿಯಲ್ಲಿ 2019 ರಲ್ಲಿ ವಿದೇಶಗಳಿಗೆ ಪ್ರವಾಸ ಕೈಗೊಂಡಿದ್ದ ಭಾರತೀಯ ಪ್ರಯಾಣಿಕರು $150 ಬಿಲಿಯನ್ ಖರ್ಚು ಮಾಡಿದ್ದರು. ಆಗ ದೇಶವು ಆರನೇ ಅತಿದೊಡ್ಡ ಜಾಗತಿಕ ಖರ್ಚುದಾರ ಸ್ಥಾನದಲ್ಲಿತ್ತು. ಭಾರತೀಯರು 2.3 ಶತಕೋಟಿ ಡಾಲರ್​ ಖರ್ಚು ಮಾಡಿದ್ದರು. 2030ಕ್ಕೆ ಇದು 5 ಶತಕೋಟಿ ಡಾಲರ್​ಗೆ ಹೆಚ್ಚಾಗುತ್ತದೆ ಎಂದು ವರದಿಯಲ್ಲಿ ನಿರೀಕ್ಷಿಸಲಾಗಿದೆ.

    ವರದಿಯ ಪ್ರಕಾರ ಪ್ರವಾಸಕ್ಕೆ ತೆರಳುವುದರಲ್ಲಿ ಭಾರತೀಯ ಪ್ರಯಾಣಿಕರು ಹೆಸರುವಾಸಿಯಾಗಿದ್ದಾರೆ, ಸರಾಸರಿ 29 ದಿನಗಳಿಗೊಮ್ಮೆ ಪ್ರವಾಸಕ್ಕೆ ತೆರಳಿದರೆ, ಜಪಾನ್ (57 ದಿನಗಳು) ಮತ್ತು ಯುಎಸ್ಎ (63 ದಿನಗಳು) ಶೇ.80 ಪ್ರತಿಶತದಷ್ಟು ಭಾರತೀಯ ಪ್ರಯಾಣಿಕರು ತಮ್ಮ ವಾಸ್ತವ್ಯದ ಸಮಯದಲ್ಲಿ ರೆಸ್ಟೋರೆಂಟ್ ಮತ್ತು ಕೊಠಡಿ ಮತ್ತಿತರ ಸೇವೆಯ ಆಯ್ಕೆ ಬಗ್ಗೆ ವಿಚಾರಿಸಿ ತಿಳಿದುಕೊಳ್ಳುತ್ತಾರೆ. ಪ್ರಯಾಣ ನಿರ್ಧಾರಗಳಲ್ಲಿ ಇದು ನಿರ್ಣಾಯಕ ಅಂಶವಾಗಿದೆ ಎಂದು ವಿವರಿಸಲಾಗಿದೆ.

    ವಿಯೆಟ್ನಾಂ, ಇಂಡೋನೇಷಿಯಾ ಮತ್ತು ನೇಪಾಳದಂತಹ ಅಂತರಾಷ್ಟ್ರೀಯ ತಾಣಗಳು ಭಾರತೀಯ ಪ್ರಯಾಣಿಕರಲ್ಲಿ ಜನಪ್ರಿಯತೆಯನ್ನು ಗಳಿಸುತ್ತಿವೆ. ಅವರ ಪ್ರಯಾಣದ ಸ್ಥಳಗಳ ಆಯ್ಕೆಯು ಟಿವಿ ಕಾರ್ಯಕ್ರಮ, ಸಿನಿಮಾಗಳು ಪ್ರೇರಣೆಯಾಗಿವೆ. ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳು ಸಹ ಪ್ರವಾಸಕ್ಕೆ ಪ್ರೇರೇಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts