ಅನಂತ್ - ರಾಧಿಕಾ ವಿವಾಹ ಪೂರ್ವ ಸಮಾರಂಭದಲ್ಲಿ ರಿಹಾನ್ನಾ ಬರಿಗಾಲಲ್ಲಿ ನೃತ್ಯ ..! ಕಾರಣ ಇದೇ ನೋಡಿ..

rehana
Published on

ಜಾಮ್ ನಗರ(ಗುಜರಾತ್​): ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ವಿವಾಹ ಪೂರ್ವ ಸಮಾರಂಭದಲ್ಲಿ ಜನಮನ ರಂಜಿಸಲು ಬಾರ್ಬಡಿಯನ್ ಗಾಯಕಿ ರಿಹಾನ್ನಾ ಹಾಡು, ನೃತ್ಯ ಮೋಡಿ ಮಾಡಿತ್ತು. ಆದರೆ ಆಕೆ ಬರಿಗಾಲಿನಲ್ಲಿ ಪ್ರದರ್ಶನ ನೀಡಿದ್ದು ಏಕೆ ಎಂಬ ಬಗ್ಗೆ ಸಾಮಾಜಿಕ ಮಾಧ್ಯಮಗಳು ಸೇರಿದಂತೆ ವಿವಿಧೆಡೆ ಚರ್ಚೆಯಾಗುತ್ತಿದೆ.

ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹಪೂರ್ವ ಸಮಾರಂಭದಲ್ಲಿ ರಿಹಾನ್ನಾ ನೃತ್ಯದ ಹಲವು ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಅಂತರ್ಜಾಲದಲ್ಲಿ ಕಾಣಿಸಿಕೊಂಡಿರುವ ವಿಡಿಯೋದಲ್ಲಿ, ರಿಹಾನ್ನಾ ತಿಳಿ ಹಸಿರು ಬಣ್ಣದ ಉಡುಪನ್ನು ಧರಿಸಿದ್ದು, ಅದ್ಭುತವಾಗಿ ಕಾಣುತ್ತಿದ್ದಾರೆ. ತಮ್ಮ ಧ್ವನಿಯ ಮೂಲಕ ಜನರ ಹೃದಯವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಆಕೆ ಇಡೀ ಕಾರ್ಯಕ್ರಮದಲ್ಲಿ ಬರಿಗಾಲಲ್ಲಿ ಪ್ರದರ್ಶನ ನೀಡಿದ್ದರ ಬಗ್ಗೆ ಕಾಮೆಂಟ್​ಗಳು ಬರುತ್ತಿವೆ.

ವಿವಾಹ ಮಹೋತ್ಸವಕ್ಕೆ ಭಾರತೀಯ ಸಂಸ್ಕೃತಿಯಲ್ಲಿ ಮಹತ್ತರ ಸ್ಥಾನವಿದೆ. ರಿಹಾನ್ನಾ ಸಂಸ್ಕೃತಿಗೆ ಗೌರವ ಸಲ್ಲಿಸುವ ಸಲುವಾಗಿ ಅನಂತ್ ಮತ್ತು ರಾಧಿಕಾ ಅವರ ವಿವಾಹಪೂರ್ವ ಸಂಭ್ರಮದಲ್ಲಿ 7 ವರ್ಷದ ನಂತರ ವೇದಿಕೆ ಏರಿದ್ದ ರಿಹಾನ್ನಾ ಕಾಲಿಗೆ ಚಪ್ಪಲಿ ಧರಿಸದೆ ನೃತ್ಯದ ಜತೆ ಹಾಡಿ ರಂಜಿಸಿದರು.

ರಿಹಾನ್ನಾ ಬರಿಗಾಲಿನ ಪ್ರದರ್ಶನ ಶರವೇಗದಲ್ಲಿ ಇಂಟರ್​ನೆಟ್​ನಲ್ಲಿ ಸುದ್ದಿಯಾಯಿತು. ಇದನ್ನು ನೋಡಿ ನೆಟ್ಟಿಗರು ಆತಂಕ ಹಾಗೂ ಪ್ರಶ್ನಾರ್ಥಕವಾಗಿ ಕಾಮೆಂಟ್​ಗಳನ್ನು ಹಾಕಿದರು.

ರಿಹಾನ್ನಾ ಬರಿಗಾಲಿನ ಪ್ರದರ್ಶನ ಕಂಡು ಪ್ರತ್ಯಕ್ಷದರ್ಶಿಯೊಬ್ಬರು, “ಆಕೆ ಬರಿಗಾಲಿನಲ್ಲಿ ಪ್ರದರ್ಶನ ನೀಡಿದರು, ಇದು ಭಾರತೀಯ ಸಂಸ್ಕೃತಿಗೆ ನೀಡಿದ ಗೌರವವಾಗಿದೆ ಎಂದರು.

ಇನ್ನು ರಿಹಾನ್ನಾ 40 ನಿಮಿಷ ಪ್ರದರ್ಶನ ನಗುವಿನೊಂದಿಗೆ ಹಿಂತಿರುಗಿದಳು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net