ನೀನು-ನಾನು ಅಕ್ಕಪಕ್ಕ ಕೂರುವುದು ಸರಿಯಲ್ಲ; ಸಹನಟಿಗೆ ರಿಚಾ ಚಡ್ಡಾ ಹೀಗಂದಿದ್ಯಾಕೆ?

Richa Shergil
Published on

ಮುಂಬೈ: ಕಳೆದ ಕೆಲ ದಿನಗಳ ಹಿಂದೆ ಒಟಿಟಿಯಲ್ಲಿ ಬಿಡುಗಡೆಗೊಂಡು ಸಖತ್​ ಸೌಂಡ್​ ಮಾಡುತ್ತಿರುವ ಹೀರಾ ಮಂಡಿ: ದಿ ಡೈಮಂಡ್​ ಬಜಾರ್​ ವೆಬ್​ ಸೀರೀಸ್​ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದು, ಸಂಜಯ್​ ಲೀಲಾ ಬನ್ಸಾಲಿ ನಿರ್ದೇಶನಕ್ಕೆ ಜನರು ಮತ್ತೊಮ್ಮೆ ಫಿದಾ ಆಗಿದ್ದಾರೆ. ಇನ್ನೂ ವೆಬ್​ ಸೀರೀಸ್​ನಲ್ಲಿ ಬಾಲಿವುಡ್​ನ ಖ್ಯಾತ ನಟಿಮಣಿಯರು ಅಭಿನಯಿಸಿದ್ದು, ಅದರಲ್ಲಿ ರಿಚಾ ಚಡ್ಡಾ ಹಾಗೂ ಶರ್ಮಿನ್​ ಸೆಗಲ್​ ಕೂಡ ಒಬ್ಬರು.

ಇತ್ತೀಚಿಗೆ ಖಾಸಗಿ ವಾಹಿನಿ ಒಂದರ ಸಂದರ್ಶನದಲ್ಲಿ ಭಾಗಿಯಾಗಿದ್ದ ಈ ಇಬ್ಬರು ನಟಿಯರ ನಡುವೆ ವಿಚಾರ ಒಂದಕ್ಕೆ ಮಅತಿನ ಚಕಮಕಿ ನಡೆದಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ಮಾತನಾಡುವ ವೇಳೆ ನಟಿ ಶರ್ಮೀನ್​ ನಾನು ಚೆನ್ನಾಗಿ ಅಡುಗೆ ಮಾಡುತ್ತೇನೆ ಎಂದು ಹೇಳುತ್ತಾರೆ. ಇದಕ್ಕೆ ನಗುತ್ತಾ ಪ್ರತಿಕ್ರಿಯಿಸಿದ ರಿಚಾ ನೀನು ನನ್ನ ಪಕ್ಕದಲ್ಲಿ ಕೂರುವಂತಿಲ್ಲ. ನೀನು ಹಾಗೂ ನಾನು ಅಕ್ಕಪಕ್ಕ ಕೂರುವುದು ಸರಿಯಲ್ಲ ಎಂದು ಹೇಳುತ್ತಾರೆ. ಬಳಿಕ ಇದು ತಮಾಷೆಗಾಗಿ ಎಂದು ಹೇಳಿ ಸುಮ್ಮನಾಗುತ್ತಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

1920ರ ಕಾಲಘಟ್ಟದಲ್ಲಿ ನಡೆಯುವ ಕಥೆಯ ಸುತ್ತ ಹೀರಾಮಂಡಿ: ದಿ ಡೈಮೆಂಡ್​ ಬಜಾರ್​ ವೆಬ್​ಸೀರೀಸ್​ ಸಾಗಲಿದ್ದು, ಮನಿಶಾ ಕೊಯಿರಾಲಾ, ಸೋನಾಕ್ಷಿ ಸಿನ್ಹಾ, ಅದಿತಿ ರಾವ್ ಹೈದರಿ, ರಿಚಾ ಚಡ್ಡಾ, ಶರ್ಮಿನ್ ಸೆಹಗಲ್, ಸಂಜೀದಾ ಶೇಖ್, ಫರ್ದೀನ್ ಖಾನ್, ತಾಹಾ ಶಾ ಬಾದುಶಾ, ಶೇಖರ್ ಸುಮನ್, ಮತ್ತು ಅಧ್ಯಯನ್ ಸುಮನ್ ಸೇರಿದಂತೆ ಪ್ರಮುಖರು ನಟಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net