ಸುಶಾಂತ್​ ಸಿಂಗ್​ ಆತ್ಮಹತ್ಯೆ ತನಿಖೆಗೆ ರೋಚಕ ತಿರುವು; ನಟನ ಖಾತೆಯಲ್ಲಿದ್ದ ಹಣ ಖರ್ಚು ಮಾಡುತ್ತಿದ್ದುದು ಯಾರು?

sushant singh rajput
Published on

ಮುಂಬೈ: ಬಾಲಿವುಡ್​ ನಟ ಸುಶಾಂತ್​ ಸಿಂಗ್​ ರಜಪೂತ್​ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂಬ ಒತ್ತಡ ಕೇಳಿ ಬಂದರೂ ಸದ್ಯ ಮುಂಬೈ ಪೊಲೀಸರೇ ತನಿಖೆ ಮುಂದುವರಿಸಿದ್ದಾರೆ.

ಶನಿವಾರವಷ್ಟೇ ಆದಿತ್ಯ ಚೋಪ್ರಾ ಮುಂಬೈನ ವರ್ಸೋವಾ ಠಾಣೆಗೆ ಹಾಜರಾದ ಆದಿತ್ಯ ಚೋಪ್ರಾ ಹೇಳಿಕೆ ದಾಖಲಿಸಿದ್ದಾರೆ. ಮುಂದಿನ ಸರದಿ ಸುಶಾಂತ್​ ಗೆಳತಿ ರಿಯಾ ಚಕ್ರವರ್ತಿಯದ್ದು ಎಂದು ಹೇಳಲಾಗಿದೆ.

ಈಗಾಗಲೇ ರಿಯಾ ಮುಂಬೈ ಪೊಲೀಸರೆದುರು ಒಮ್ಮೆ ಹಾಜರಾಗಿ ಹೇಳಿಕೆ ದಾಖಲಿಸಿದ್ದಾರೆ. ಮತ್ತೊಂದು ವಿಚಾರಣೆ ನಡೆಸಲು ಕಾರಣವಾಗಿರುವುದು ಒಂದು ಸ್ಫೋಟಕ ಮಾಹಿತಿ.

ಸುಶಾಂತ್​ ಖಾತೆಯಲ್ಲಿದ್ದ ಹಣವನ್ನೇ ರಿಯಾ ಚಕ್ರವರ್ತಿ ಕಳೆದ 11 ತಿಂಗಳಿನಿಂದ ಖರ್ಚು ಮಾಡುತ್ತಿದ್ದಳು...! ಇದರ ತನಿಖೆಗಾಗಿ ರಿಯಾಳನ್ನು ಮತ್ತೊಮ್ಮೆ ವಿಚಾರಣೆಗಾಗಿ ಕರೆಸಲು ಪೊಲೀಸರು ನಿರ್ಧರಿಸಿದ್ದಾರೆ.

ಯುರೋಪ್​ಗೆ ಜಾಹೀರಾತೊಂದರ ಶೂಟಿಂಗ್​ಗಾಗಿ ತೆರಳಿದ್ದಾಗ ಅದರ ವೆಚ್ಚವನ್ನು ಸುಶಾಂತ್​ ತನ್ನ ಖಾತೆಯಿಂದಲೇ ಭರಿಸಿದ್ದ ಎನ್ನಲಾಗಿದೆ. ಸುಶಾಂತ್​ ಸಾವಿನ ನಂತರ ಖಾತೆಗಳಲ್ಲಿದ್ದ ಹಣವೆಷ್ಟು ಅದನ್ನು ಬಳಸಿದ್ಯಾರು? ಯಾರನ್ನು ನಾಮಿನಿ ಮಾಡಿದ್ದ ಎಂಬೆಲ್ಲ ವಿಚಾರಗಳು ಕೂಡ ತನಿಖೆಗೊಳಪಟ್ಟಿವೆ.

ಖಿನ್ನತೆಯಿಂದ ಬಳಲುತ್ತಿದ್ದ ಸುಶಾಂತ್​ ಈ ಹಿಂದೆ ಕೌನ್ಸೆಲ್ಲಿಂಗ್​ಗೆ ಹಾಜರಾಗಿದ್ದ. ಆವಾಗಲೂ ರಿಯಾ ಆತನ ಜತೆಗಿದ್ದಳು ಎನ್ನಲಾಗಿದೆ. ಹೀಗಾಗಿ ತನಿಖೆಯ ಜಾಡು ಆರ್ಥಿಕ ಕಾರಣಗಳತ್ತ ತಿರುಗುತ್ತಿದೆ ಎಂದೇ ವಿಶ್ಲೇಷಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net