ಮದುವೆಗೆ ಸಜ್ಜಾಗುತ್ತಿದ್ದ ಸುಶಾಂತ್​ ಸಿಂಗ್​; ಹೊಸ ಮನೆ ಹುಡುಕಾಟದಲ್ಲಿದ್ದ ಗೆಳತಿ; ನಿಗೂಢವಾಗುತ್ತಿದೆ ಆತ್ಮಹತ್ಯೆ ಕಾರಣ

Sushant marrige
Published on

ಮುಂಬೈ: ಬಾಲಿವುಡ್​ ನಟ ಸುಶಾಂತ್​ ಸಿಂಗ್​ ರಜಪೂತ್​ ಆತ್ಮಹತ್ಯೆ ಪ್ರಕರಣ ದಿನಕ್ಕೊಂದು ತಿರುವು ಪಡದುಕೊಳ್ಳುತ್ತಿದೆ. ಆತನ ಚಿಕ್ಕಪ್ಪ ಇದೊಂದು ಕೊಲೆ, ಪೊಲೀಸ್​ ತನಿಖೆ ನಡೆಸಲೇ ಬೇಕು ಎಂದು ಈಗಾಗಲೇ ಒತ್ತಾಯಿಸಿದ್ದಾರೆ.

ಸುಶಾಂತ್​ ಸಾವಿಗೆ ಆರ್ಥಿಕ ಮುಗ್ಗಟ್ಟು ಕೂಡ ಕಾರಣ ಎಂದೇ ಹೇಳಲಾಗಿತ್ತು. ತಾನು ವಾಸವಿದ್ದ ಬಾಂದ್ರಾದ ಡ್ಯೂಪ್ಲೆಕ್ಸ್​ ಮನೆಗೆ ಆತ ತಿಂಗಳಿಗೆ ನಾಲ್ಕೂವರೆ ಲಕ್ಷ ರೂ. ಬಾಡಿಗೆ ನೀಡುತ್ತಿದ್ದ ಜತೆಗೆ, ಕೆಲಸಕ್ಕಿಟ್ಟುಕೊಂಡಿದ್ದ ಹಲವರಿಗೆ ಸಂಬಳ ನೀಡಬೇಕಾಗಿತ್ತು ಎಂದೆಲ್ಲ ಹೇಳಲಾಗಿತ್ತು. ಆದರೆ, ಅಂಥ ಆರ್ಥಿಕ ಮುಗ್ಗಟ್ಟು ಆತನಿಗಿರಲಿಲ್ಲ ಎನ್ನುವುದು ಈಗ ಬಹಿರಂಗೊಂಡಿರುವ ವಿಷಯದಿಂದ ಗೊತ್ತಾಗುತ್ತಿದೆ.

ಸುಶಾಂತ್​ ಸಿಂಗ್​ ಮುಂಬರುವ ನವೆಂಬರ್​ನಲ್ಲಿ ಮದುವೆಯಾಗಲಿದ್ದ. ಅದಕ್ಕಾಗಿ ಸಿದ್ಧತೆ ನಡೆಸಿದ್ದ ಎಂದು ಆಕೆಯ ಸೋದರ ಸಂಬಂಧಿ ಹೇಳಿದ್ದಾಳೆ. ಆದರೆ, ಯಾರೊಂದಿಗೆ ಹಸೆಮಣೆ ಏರಲಿದ್ದ ಎಂಬುದನ್ನು ಬಹಿರಂಗಪಡಿಸಿಲ್ಲ.

ಇನ್ನೊಂದೆಡೆ, ಸುಶಾಂತ್​ ಸಿಂಗ್​ ಗೆಳತಿ, ಬೆಂಗಳೂರು ಮೂಲದ ರಿಯಾ ಚಕ್ರವರ್ತಿ ಹೊಸ ಮನೆಯೊಂದನ್ನು ಹುಡುಕುತ್ತಿದುದಾಗಿ ರಿಯಲ್​ ಎಸ್ಟೇಟ್​ ಎಜೆಂಟ್​ ಮಾಹಿತಿ ನೀಡಿದ್ದಾನೆ.

ತಾನು ಸುಶಾಂತ್​ ಸಿಂಗ್​ ಜತೆ ಮದುವೆಯಾಗುತ್ತಿದ್ದು, ಒಟ್ಟಿಗೆ ಇರಲು ಮನೆ ಹುಡುಕುತ್ತಿರುವುದಾಗಿ ತಿಳಿಸಿದ್ದಾಗಿ ಎಜೆಂಟ್ ಹೇಳಿದ್ದಾನೆ. ಬಾಂದ್ರಾದಲ್ಲಿಯೇ ಅವರು ಮನೆ ಹುಡುಕಾಟದಲ್ಲಿದ್ದರು. ಬಾಡಿಗೆ ಬಗ್ಗೆ ಚಿಂತೆ ಇರಲಿಲ್ಲ. ಆದರೆ, ತಡರಾತ್ರಿಯ ಪಾರ್ಟಿಗಳಿಗೆ ಆಕ್ಷೇಪ ವ್ಯಕ್ತಬಾರದು ಎಂಬುದಷ್ಟೇ ಅವರ ಷರತ್ತಾಗಿತ್ತು ಎಂದು ಆತ ಹೇಳಿದ್ದಾನೆ.

ಇದಕ್ಕೆ ಪುಷ್ಠಿ ನೀಡುವಂತೆ ಸುಶಾಂತ್​ ಸಿಂಗ್​ ಮೃತದೇಹದ ಮರಣೋತ್ತರ ಪರೀಕ್ಷೆ ನಡೆದ ಆಸ್ಪತ್ರೆಗೆ ರಿಯಾ ಭೇಟಿ ನೀಡಿದ್ದಳು. ಜತೆಗೆ, ಸುಶಾಂತ್​ ಪಾಲಕರನ್ನು ಭೇಟಿಯಾಗಿದ್ದಳು. ಈ ಎಲ್ಲ ಬೆಳವಣಿಗೆಗಳಿಂದಾಗಿ ಸುಶಾಂತ್​ ಸಾವಿಗೆ ಕಾರಣ ಏನು ಎನ್ನುವುದು ನಿಗೂಢವಾಗುತ್ತಲೇ ಸಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net