ಪುರಿ ಜಗನ್ನಾಥನೇ ನಮ್ಮನ್ನು ಕ್ಷಮಿಸುವುದಿಲ್ಲ ಎಂದ ಸುಪ್ರೀಂ ಕೋರ್ಟ್​

Puri rath yatra
Published on

ನವದೆಹಲಿ: ಮಹತ್ವದ ಸಾರ್ವಜನಿಕ ಅರ್ಜಿ ವಿಚಾರಣೆಯೊಂದರಲ್ಲಿ ಸುಪ್ರೀಂ ಕೋರ್ಟ್​ನ ನ್ಯಾಯಪೀಠ, ಪುರಿ ಜಗನ್ನಾಥನೇ ನಮ್ಮನ್ನು ಕ್ಷಮಿಸುವುದಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದೆ.

ಇಷ್ಟಕ್ಕೂ ಇಂಥದ್ದೊಂದು ಅಭಿಪ್ರಾಯ ಹೊರಬರಲು ಕಾರಣ, ಒಡಿಶಾದ ಪುರಿಯಲ್ಲಿರುವ ಶ್ರೀ ಜಗನ್ನಾಥ ದೇವಾಲಯದ ವಾರ್ಷಿಕ ರಥೋತ್ಸವಕ್ಕೆ ಅವಕಾಶ ನೀಡಬೇಕೆಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ.

ಇಂಥ ಸಮಯದಲ್ಲಿ ರಥೋತ್ಸವಕ್ಕೆ ಅವಕಾಶ ನೀಡಿದರೆ, ಆ ಜಗನ್ನಾಥನೇ ನಮ್ಮನ್ನು ಕ್ಷಮಿಸುವುದಿಲ್ಲ ಎಂದು ಮುಖ್ಯ ನಾಯಮೂರ್ತಿಗಳಿದ್ದ ಪೀಠ ಅಭಿಪ್ರಾಯಪಟ್ಟಿತು ಹಾಗೂ ರಥೋತ್ಸವಕ್ಕೆ ಅವಕಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿತು.

ದೇಶ- ವಿದೇಶಗಳ ಲಕ್ಷಾಂತರ ಭಕ್ತರು ಪಾಲ್ಗೊಳ್ಳುವ ಪುರಿ ಜಗನ್ನಾಥ ರಥೋತ್ಸವ 23ರಂದು ನಡೆಯಬೇಕಿದೆ. ಕರೊನಾ ಸಂಕಷ್ಟದ ಸಮಯದಲ್ಲಿ ಇಂಥದ್ದೊಂದು ಜನಸಾಗರದ ಕಾರ್ಯಕ್ರಮ ನಡೆಸಲು ಅವಕಾಶವಿಲ್ಲ ಎಂದು ಹೇಳಿತು.

ರಥಯಾತ್ರೆಗೆ ಸಂಬಂಧಿಸಿದ ಅಕ್ಷಯ ತೃತೀಯ ಹಾಗೂ ಸ್ನಾನ ಪೂರ್ಣಿಮಾ ವಿಧಿವಿಧಾನಗಳಿಗೆ ಒಡಿಸಾ ಸಕಾ್ರ ಈಗಾಗಲೇ ಅನುಮತಿ ನೀಡಿದೆ ಹೀಗಾಗಿ ರಥಯಾತ್ರೆಗೂ ಅನುಮತಿ ನೀಡಬೇಕೆಂದು ಒಡಿಶಾ ವಿಕಾಸ್​ ಪರಿಷದ್​ ಹೆಸರಲ್ಲಿ ಅರ್ಜಿ ಸಲ್ಲಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net