ರಿಯಾ ರಕ್ಷಣೆಗೆ ನಿಂತರೇ ಮುಂಬೈ ಪೊಲೀಸ್?; ಡಿಸಿಪಿ ಜತೆಗಿನ ಕಾಲ್​ ರೆಕಾರ್ಡ್ಸ್ ಬಹಿರಂಗ!

collage (5)
Published on

ನಟ ಸುಶಾಂತ್​ ಸಿಂಗ್​ ಆತ್ಮಹತ್ಯೆಗೆ ಶರಣಾಗಿ ಎರಡು ತಿಂಗಳಾಗುತ್ತ ಬಂತು. ಈಗಲೂ ಅವರ ಸಾವಿನ ತನಿಖೆ ದಿನದಿಂದ ದಿನಕ್ಕೆ ಹೊಸ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಪೊಲೀಸ್ ಇಲಾಖೆ ವಿಚಾರಣೆ ಮುಂದುವರಿಸಿದರೆ, ವೈದ್ಯರ ತಂಡ ಅವರ ಆರೋಗ್ಯದ ಬಗ್ಗೆ ನಿತ್ಯ ಒಂದಿಲ್ಲೊಂದು ಹೇಳಿಕೆಯನ್ನು ನೀಡುತ್ತಿದೆ.

ಇತ್ತ ಮಹತ್ವದ ಸಾಕ್ಷ್ಯಗಳನ್ನು ಬಿಡುಗಡೆ ಮಾಡದೆ, ಮೀನಮೇಷ ಎಣಿಸುತ್ತಿದೆ. ಬಿಹಾರ ಪೊಲೀಸರಿಗೂ ತನಿಖೆಯಲ್ಲಿ ಕೈ ಜೋಡಿಸುತ್ತಿಲ್ಲ. ಸುಪ್ರೀಂ ಕೋರ್ಟ್ ಸಹ ಮುಂಬೈ ಪೊಲೀಸ್​ ವರ್ತನೆ ಬಗ್ಗೆ ಕಿಡಿಕಾರಿತ್ತು. ಇದೀಗ ಮುಂಬೈ ಪೊಲೀಸ್​ ಕಾರ್ಯವೈಖರಿ ಬಗ್ಗೆ ಮತ್ತೊಂದು ದೊಡ್ಡ ಅನುಮಾನ ಶುರುವಾಗಿದೆ.

ಕಳೆದ ಒಂದು ವಾರದ ಹಿಂದೆ ರಿಯಾ ಕಣ್ಮರೆಯಾಗಿದ್ದ ಸುದ್ದಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ವಿಚಾರಣೆಗೆ ಬಾರದೆ ಸಾಕಷ್ಟು ಬಾರಿ ನೋಟಿಸ್​ ಸಹ ಪಡೆದುಕೊಂಡಿದ್ದರು. ಇದೀಗ ಲಭ್ಯವಾಗಿರುವ ಮಾಹಿತಿ ಪ್ರಕಾರ ಮುಂಬೈ ಪೊಲೀಸ್​ ಇಲಾಖೆಯೇ ರಿಯಾ ರಕ್ಷಣೆಗೆ ನಿಂತಿದೆಯೇ ಎಂಬ ಅನುಮಾನ ಸೃಷ್ಟಿಯಾಗಿದೆ. ಅದಕ್ಕೆ ಸಂಬಂಧಿಸಿಂದಂತೆ ಒಂದಷ್ಟು ದಾಖಲೆಗಳು ಈ ಕಣ್ಣಾಮುಚ್ಚಾಲೆ ಆಟಕ್ಕೆ ಪುಷ್ಟಿ ನೀಡುತ್ತಿವೆ.

ಹೌದು, ಮುಂಬೈ ಪೊಲೀಸ್​ ಇಲಾಖೆಯ ಡಿಸಿಪಿ ಆಗಿರುವ ಮತ್ತು ಪ್ರಕರಣದ ತನಿಖೆಯಲ್ಲಿ ತೊಡಗಿಸಿಕೊಂಡಿರುವ ಅಭಿಷೇಕ್​ ತ್ರಿಮುಖಿ, ರಿಯಾ ಜತೆ ಫೋನ್​ ಸಂಪರ್ಕದಲ್ಲಿರುವ ಬಗ್ಗೆ ಕಾಲ್​ ರೆಕಾರ್ಡ್ಸ್​ ಬಹಿರಂಗವಾಗಿವೆ. ಒಟ್ಟು ಎರಡು ಬಾರಿ ಕರೆ ಮಾಡಿರುವ, ಎರಡು ಬಾರಿ ಕರೆ ಸ್ವೀಕರಿಸುವ ಮತ್ತು ಒಮದು ಸಂದೇಶ ರವಾನೆಯಾಗಿರುವ ದಾಖಲೆ ಹೊರಬಿದ್ದಿದ್ದು, ಸ್ವತಃ ರಿಯಾ ಅವರನ್ನು ಮುಂಬೈ ಪೊಲೀಸ್​ ರಕ್ಷಣೆ ಮಾಡುತ್ತಿದೆಯೇ ಎಂಬ ಪ್ರಶ್ನೆ ಉದ್ಭವವಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net